ರಾಜಕೀಯ

ತಿರುಚಿದ ವಿಡಿಯೋ ಬಿಡುಗಡೆ; ಸಾಕ್ಷ್ಯ, ದಾಖಲೆಗಳಿದ್ದರೆ ತನಿಖಾ ಸಮಿತಿಗೆ ಸಲ್ಲಿಸಿ: ಹೆಚ್'ಡಿಕೆಗೆ ಬೊಮ್ಮಾಯಿ

Manjula VN

ಬೆಂಗಳೂರು: ಮಂಗಳೂರು ಗೋಲಿಬಾರ್'ಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಿಡುಗಡೆ ಮಾಡಿರುವ ವಿಡಿಯೋವನ್ನು ತಿರುಚಿಸಲಾಗಿದೆ. ಒಬ್ಬ ಮಾಜಿ ಮುಖ್ಯಮಂತ್ರಿ ಪೊಲೀಸರ ಮೇಲೆಯೇ ತಪ್ಪು ಹೊರಿಸಲು ಮುಂದಾಗಿರುವುದು ಬೇಜವಾಬ್ದಾರಿ ನಡವಳಿಕೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಇದ್ದ ಪೊಲೀಸರೇ ಈಗಲೂ ಇದ್ದಾರೆ, ಪೊಲೀಸರು ಇರುವುದು ಗಲಭೆ ನಿಯಂತ್ರಿಸಲೇ ಹೊರತು ಸೃಷ್ಟಿಸಲು ಅಲ್ಲ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿರುವವರು ಇಂತಹ ವಿಚಾರಗಳಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿತ್ತು. ಈ ಹಿಂದೆಯೂ ಕೂಡ ಕುಮಾರಸ್ವಾಮಿ ಹಲವು ವಿಚಾರಗಳನ್ನು ತಿರುಚುವ ಪ್ರಯತ್ನ ಮಾಡಿದ್ದರು. ಈಗಲೂ ಅದನ್ನೇ ಮುಂದುವರೆಸಿದ್ದಾರೆ. 

ವಿಡಿಯೋವನ್ನು ತಿರುಚಿ, ಮುಂದೆ ಇರುವ ದೃಶ್ಯಗಳನ್ನು ಹಿಂದಕ್ಕೆ ಹಿಂದೆ ಇರುವುದನ್ನು ಮುಂದಕ್ಕೆ ಹಾಕಿ ಪೊಲೀಸರನ್ನು ತಪ್ಪಿತಸ್ಥರನ್ನಾಗಿ ಮಾಡುವ ಪ್ರಯತ್ನ ಮಾಡಿದ್ದಾರೆಂದು ದೂರಿಸಿದ್ದಾರೆ. 

ಅಲ್ಲಿ ಏನು ನಡೆಯಿತು ಎಂಬುದು ಎಲ್ಲರಿಗೂ ಗೊತ್ತಿದೆ. ಜನ ಸೇರಿದಾಗ, ಕಲ್ಲು ಎಸೆದಾಗ ಲಾಠಿ ಚಾರ್ಜ್ ಆಗಿದೆ. ಶಸ್ತ್ರಾಸ್ತ್ರ ಸಂಗ್ರಹಣೆ ಮಾಡಿದ್ದ ಸ್ಥಳಕ್ಕೆ ದಾಳಿ ಮಾಡಲು ಮುಂದಾದಾಗ ಗೋಲಿಬಾರ್ ಆಗಿದೆ. ಈಗ ಘಟನೆಯನ್ನು ತಿರುಚಿ ಹೇಳುವ ಮೂಲಕ ಕುಮಾರಸ್ವಾಮಿಯವರು ಶಾಂತವಾಗಿರುವ ರಾಜ್ಯವನ್ನು ಕೆಣಕುವ ಕೆಲಸ ಮಾಡಿದ್ದಾರೆ. 

ಜನರಲ್ಲಿ ಗೊಂದಲ ಎಬ್ಬಿಸುವುದು ಸರಿಯಲ್ಲ. ಮಂಗಳೂರು ಗಲಭೆಯನ್ನು ಮ್ಯಾಜಿಸ್ಟ್ರೇಟ್ ತನಿಖೆಗೆ ವಹಿಸಲಾಗಿದೆ. ಕುಮಾರಸ್ವಾಮಿಯವರು ತಮ್ಮ ಬಳಿ ಇನ್ನೂ ಸಿಡಿಗಳಿವೆ ಎಂದಿದ್ದಾರೆ. ಅವುಗಲನ್ನು ತನಿಖಾ ಸಮಿತಿ ಮುಂದಿಡಲಿ. ನಾನೂ ಕೂಡ ಆ ವಿಡಿಯೋ ಪರಿಶೀಲಿಸುಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸುತ್ತೇನೆಂದಿದ್ದಾರೆ. 

SCROLL FOR NEXT