ರಾಜಕೀಯ

ಕೆಪಿಸಿಸಿ ಹೊಸ ಅಧ್ಯಕ್ಷರ ಘೋಷಣೆಗೆ ಕ್ಷಣಗಣನೆ: ಎಲ್ಲರ ಚಿತ್ತದ ಇದೀಗ ಡಿಕೆಶಿಯತ್ತ

Manjula VN

ಬೆಂಗಳೂರು: ತೀವ್ರ ಪೈಪೋಟಿ ಕಂಡಿದ್ದ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಹಿರಿಯ ನಾಯಕ ಡಿಕೆ.ಶಿವಕುಮಾರ್ ನೇಮಕಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕ್ಷಣದಲ್ಲಿ ಈ ನೇಮಕಾತಿ ಘೋಷಿಸುವ ಸಾಧ್ಯೆತೆಗಳಿವೆ ಎಂಬುವಂತಹ ವಾತಾವರಣ ಇದೀಗ ಪಕ್ಷದಲ್ಲಿ ಸೃಷ್ಟಿಯಾಗಿದೆ. 

ಕಾಂಗ್ರೆಸ್ ಹೈಕಮಾಂಡ್ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರನ್ನು ನೇಮಕ ಮಾಡಿ ಗುರುವಾರ ಘೋಷಣೆಮಾಡಿದೆ. ಈ ಮೂಲಕ  ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಡಿಕೆ.ಶಿವಕುಮಾರ್ ಅವರನ್ನು ಘೋಷಿಸುವ ಪೂರ್ವ ತಯಾರಿ ಆರಂಭಿಸಿದೆ. ಈ ಸುದ್ದಿ ಹರಡುತ್ತಿದ್ದಂತೆಯೇ ಅಭಿಮಾನಿಗಲು, ಹರಡುತ್ತಿದ್ದಂತೆಯೇ ಅಭಿಮಾನಿಗಳು ಹಿಂಬಾಲಕರಿಂದ ಶಿವಕುಮಾರ್ ಅವರಿಗೆ ಭಾರೀ ಅಬಿನಂದನೆ ಸಲ್ಲಿಕೆಯೂ ಈಗಾಗಲೇ ಆರಂಭವಾಗಿದೆ. 

ಸಿದ್ದರಾಮಯ್ಯ ಅವರು ನಿನ್ನೆಯಷ್ಟೇ ದೆಹಲಿಗೆ ಭೇಟಿ ನೀಡಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತಂತೆಯೂ ಚರ್ಚೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ರಾಜ್ಯದ ಹಲವು ನಾಯಕರ ಅಭಿಪ್ರಾಯವನ್ನು ಹೈಕಮಾಂಡ್ ಸಂಗ್ರಹಿಸಿದ್ದು, ಸಿದ್ದರಾಮಯ್ಯ ಅವರು ಸಲ್ಲಿಸಿರುವ ಮೌಖಿಕ ವರದಿಯಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ಶೀಘ್ರದಲ್ಲಿಯೇ ಕಾಂಗ್ರೆಸ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. 

SCROLL FOR NEXT