ರಾಜಕೀಯ

ಗಾಂಧಿ ಮಾಡಿದ ತಪ್ಪಿನಿಂದ 'ಅಯೋಗ್ಯ' ನೆಹರು ಪ್ರಧಾನಿಯಾದ- ಯಾತ್ನಾಳ್ 

Nagaraja AB

ಬಾಗಲಕೋಟೆ: ವಿವಾದಾತ್ಮಕ ಹೇಳಿಕೆಗಳಿಂದ ಪ್ರಸಿದ್ಧಿಯಾಗಿರುವ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯಾತ್ನಾಳ್  ನೆಹರು ಬಗ್ಗೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಹಾತ್ಮ ಗಾಂಧೀಜಿ ಮಾಡಿದ ದೊಡ್ಡ ತಪ್ಪಿನಿಂದಾಗಿ ಅಯೋಗ್ಯ ಜವಹರ್ ಲಾಲ್ ನೆಹರು ದೇಶದ ಮೊದಲ ಪ್ರಧಾನಿಯಾದರು ಎಂಬ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ನಿನ್ನೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿಯಾಗಲು ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರಿಗೆ ಬಹುಮತ ಇತ್ತು. ಆದರೆ, ಗಾಂಧೀಜಿ ಅವರ ಮಧ್ಯ ಪ್ರವೇಶದಿಂದ ಅಯೋಗ್ಯ ನೆಹರು ಪ್ರಧಾನಿಯಾದರು ಎಂದು ಹೇಳಿದರು. 

ಶ್ರೀಮಂತ ಕುಟುಂಬದ ನೆಹರು ವಿಲಾಸಿ ಜೀವನ ನಡೆಸುತ್ತಿದ್ದ. ಅವನಿಗೆ ಲಂಡನ್ ನಿಂದ ಸಿಗರೇಟ್ ಬರುತ್ತಾ ಇತ್ತು. ಅವರ ಬಟ್ಟೆಗಳನ್ನು ಲಂಡನ್ ನಲ್ಲಿ ಇಸ್ತ್ರಿ ಮಾಡಲಾಗುತಿತ್ತು. ಅಂತಹವರಿಗೆ ಬಡವರು ಹಾಗೂ ಸಾಮಾನ್ಯರ ಜೀವನದ ಬಗ್ಗೆ ಯಾವುದೇ ಭಾವನೆ ಇರಲಿಲ್ಲ, ಬಡವರ ಸಮಸ್ಯೆಗಳನ್ನು ಬಗೆಹರಿಸಲು ನೆಹರು ಪ್ರಯತ್ನಿಸಲಿಲ್ಲ. ಅಧಿಕಾರ ದುರ್ಬಳಕೆಯಲ್ಲಿ ಅವರು ಬ್ಯುಸಿಯಾಗಿದ್ದರು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. 

ಬಡವರ ಬಗ್ಗೆ ಕಾಳಜಿ ಹೊಂದಿದ್ದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ, ಸುಭಾಷ್ ಚಂದ್ರ ಬೋಸ್ ಅವರ ನಿಗೂಢ ಸಾವಿನ ಬಗ್ಗೆ ತನಿಖೆಯನ್ನೇ ನಡೆಸಲಿಲ್ಲ ಎಂದು ಯಾತ್ನಾಳ್ ತಿಳಿಸಿದರು. 

SCROLL FOR NEXT