ರಾಜಕೀಯ

ಬಿಜೆಪಿಯವರ ಅಭಿವೃದ್ಧಿಯಾಗಿದೆ ಹೊರತು ಜನರ ಅಭಿವೃದ್ಧಿಯಾಗಿಲ್ಲ: ಸಿಟಿ ರವಿಗೆ ಕುಟುಕಿದ ಸಿದ್ದು

Shilpa D

ಚಿಕ್ಕಮಗಳೂರು: ಬರುವ ಅಧಿವೇಶನದಲ್ಲಿ ಜನವಿರೋಧಿ ನೀತಿ ಹಾಗೂ ರಾಜ್ಯದ ಇತರ ಸಮಸ್ಯೆಗಳ ಬಗ್ಗೆ ಪ್ರತಿಪಕ್ಷವಾಗಿ ಧ್ವನಿಯೆತ್ತುತ್ತೇವೆಯೇ ಹೊರತು ಅನಗತ್ಯವಾಗಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿಂದು ಮಾತನಾಡಿದ ಅವರು, ವಿಧಾನಸಭೆಗೆ ಶಾಸಕರು ಬರುವುದು ಜನರ ಪ್ರತಿನಿಧಿಯಾಗಿಯಾಗಿ. ಹೀಗಾಗಿ ಜನರ ಧ್ವನಿಯಾಗಿ ಕೆಲಸ ಮಾಡಬೇಕು ಎಂದರು.

ಸಚಿವ ಸಿ‌.ಟಿ.ರವಿ ವಿರುದ್ಧ ಕಿಡಿಕಾರಿದ ಅವರು, ಸಿ‌.ಟಿ.ರವಿಗೆ ಎಂದಿಗೂ ಸತ್ಯ ಹೇಳಿ ಗೊತ್ತಿಲ್ಲ. ಅವರ ಮೈತುಂಬಾ ಇರುವುದು ಸುಳ್ಳು. ಸುಳ್ಳನ್ನೇ ಮೈಗೂಡಿಸಿಕೊಂಡಿದ್ದಾರೆ‌. ಬಿಜೆಪಿಯವರ ಅಭಿವೃದ್ಧಿಯಾಗಿದೆಯೇ ಹೊರತು ಕ್ಷೇತ್ರದ, ಜನರ ಅಭಿವೃದ್ಧಿಯಾಗಿಲ್ಲ. ಹಳ್ಳಿಯ ಜನರು ಇದನ್ನೇ ಹೇಳುತ್ತಿದ್ದಾರೆ ಎಂದು ಕುಟುಕಿದರು.

ಕೇಂದ್ರದ ಬಜೆಟ್ ನಾಳೆ ಮಂಡನೆಯಾಗಲಿದೆ. ಕಳೆದ ಬಾರಿ ಬಜೆಟ್ 27 ಲಕ್ಷ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದರು‌. ಈ ಬಗ್ಗೆ ನಾಳೆ ತಿಳಿಯಲಿದೆ. ಸ್ವರ್ಗ ಸೃಷ್ಟಿ ಮಾಡುತ್ತೇವೆ ಎಂದವರು ಈಗ ನರಕ ಸೃಷ್ಟಿಸಿದ್ದಾರೆ. 

ಬಿಜೆಪಿ ಪ್ರಕಾರ ಜಿಡಿಪಿ ಶೇ 4.5 ಇದೆ.ನನ್ನ ಪ್ರಕಾರ ಶೇ. 2.5ರಷ್ಟು.10ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ಈಗ ಲಕ್ಷಾಂತರ ಉದ್ಯೋಗ ಕಡಿತವಾಗಿದೆ. ದೇಶದ ಅರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇದನ್ನು ಮುಚ್ಚಿ ಹಾಕಲು ಸಿಎಎ, ಎನ್ ಅರ್ ಸಿ ಮೂಲಕ ಬೇರೆ ಕಡೆ ಸೆಳೆಯಲು ನಾಟಕ ವಾಡುತ್ತಿದ್ದಾರೆ ಎಂದು ಟೀಕಿಸಿದರು.

ದೆಹಲಿಯಲ್ಲಿ ಪ್ರತಿಭಟನಕಾರರ ಮೇಲೆ ಗುಂಡು ಹಾರಿಸಿರುವ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಚೋದನೆಯಿಂದಲೇ ಗುಂಡು ಹಾರಿಸಲಾಗಿದೆ. ಮಹಾತ್ಮ ಗಾಂಧಿಯನ್ನ ಕೊಂದಿದ್ದು ಅರ್ ಎಸ್ ಎಸ್ ಹಾಗೂ ಹಿಂದೂ ಮಹಾಸಭಾದವರು  ಎಂದು ಸಿದ್ದರಾಮಯ್ಯ ಕಿಡಿಕಾರಿದರು.

SCROLL FOR NEXT