ರಾಜಕೀಯ

ಮೈತ್ರಿ ಸರ್ಕಾರ ಪತನಕ್ಕೆ  ಕಾಂಗ್ರೆಸ್ ನಾಯಕರ ಅಸಹಕಾರ ಕಾರಣ: ಬಹಿರಂಗ ಚರ್ಚೆಗೆ ಕುಮಾರಸ್ವಾಮಿ ಆಹ್ವಾನ

Vishwanath S

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಸ್ವಂತ ತೀರ್ಮಾನ ಕೈಗೊಳ್ಳಲು ಅತಂತ್ರ ಸ್ಥಿತಿಯಲ್ಲಿದ್ದು, ಕಾಂಗ್ರೆಸ್‌ನ ಒಂದು ಗುಂಪಿನಿಂದ ಸರಿಯಾಗಿ ಸಹಕಾರ ಸಿಗುತ್ತಿರಲಿಲ್ಲ. ಕೆಲ ನಾಯಕರ ಒತ್ತಡಕ್ಕೆ ಮಣಿದು ಕೆಲಸ ಮಾಡುವ ಪರಿಸ್ಥಿತಿ ಇತ್ತು. ಈ ಬಗ್ಗೆ ಕಾಂಗ್ರೆಸ್ ಜತೆ ಯಾವುದೇ ವೇದಿಕೆಯಲ್ಲೂ ಚರ್ಚೆಗೂ ಸಿದ್ದ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಪಕ್ಷದ ಕಾರ್ಯಕರ್ತರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲು ಸಾಧ್ಯವಾಗಿಲ್ಲ. ನಿಗಮ-ಮಂಡಳಿಗಳ ನೇಮಕ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಅನುಮತಿ ಬೇಕಿತ್ತು.

ಕಾಂಗ್ರೆಸಿಗರು ತಮಗೆ ಬೇಕಾದ ನಿಗಮ-ಮಂಡಳಿಗಳನ್ನು ತೆಗೆದುಕೊಂಡು ಹೆಚ್ಚಿನ ಮಹತ್ವ ಇಲ್ಲದ ನಿಗಮ-ಮಂಡಳಿಗಳನ್ನು ನೀಡುತ್ತಿದ್ದರು.ಸ್ವತಂತ್ರವಾಗಿ ತೀರ್ಮಾನ ಕೈಗೊಳ್ಳದೆ ಅತಂತ್ರದಲ್ಲಿ ಇದ್ದ ಕಾರಣ ಕಾರ್ಯಕರ್ತರ ದುಡಿಮೆಗೆ ತಕ್ಕಂತೆ ಸ್ಥಾನ ನೀಡಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು. 

SCROLL FOR NEXT