ರಾಜಕೀಯ

ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಇರೋದು ನಿಜ, ಸರ್ಕಾರ ಮೂರು ವರ್ಷ ಖಚಿತ: ಈಶ್ವರಪ್ಪ

Nagaraja AB

ಕಲಬುರಗಿ: ಬಿಜೆಪಿ ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯದ ವಿಚಾರ ಆಡಳಿತ ಹಾಗೂ ಪ್ರತಿಪಕ್ಷ ನಾಯಕರ ನಡುವಣ ವಾಕ್ಸಮರಕ್ಕೆ ಕಾರಣವಾಗಿರುವಂತೆ ಪಕ್ಷದಲ್ಲಿ ಅಸಮಾಧಾನ ಇರುವುದು ನಿಜ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಕಲಬುರಗಿಯ ಹೊನ್ನಕಿರಣಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಸನ್ಯಾಸಿಗಳಲ್ಲ. ಸಚಿವ ಸ್ಥಾನ ಕೇಳುವುದು ಸಹಜ, ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಶಾಸಕರ ಪ್ರತ್ಯೇಕ ಸಭೆಯನ್ನು  ಸಮರ್ಥಿಸಿಕೊಂಡರು.

ನೇರವಾಗಿ ಹೇಳುತ್ತೇನೆ, ನಮ್ಮ ಪಕ್ಷದ ಕೆಲ ಶಾಸಕರಲ್ಲಿ ಅಸಮಾಧಾನ ಇರುವುದು ಸತ್ಯ. ‌ಹೀಗಾಗಿಯೇ ಕೆಲವರು ಸಭೆ ಸಹ ಸೇರಿದ್ದಾರೆ. ನಮ್ಮ ನಾಯಕರೆಲ್ಲರೂ ಕೂಳಿತುಕೊಂಡು ಅಸಮಾಧಾನ ಬಗೆಹರಿಸುತ್ತಾರೆ. ನಮ್ಮ ಸರ್ಕಾರ ಮೂರೂ ವರ್ಷದ ಅವಧಿ ಪೂರ್ಣಗೊಳಿಸುವುದು ಖಚಿತ ಎಂದರು.

ವಿಧಾನಸಭೆ ವಿರೋಧ ಪತ್ರದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಆಗಿದ್ದಾಗ ಅವರ ಮಗ ಶಾಸಕರು ಇಲ್ಲದಿದ್ದರೂ ಮೈಸೂರಲ್ಲಿ ಸರ್ಕಾರಿ ಕಾರು ತಗೆದುಕೊಂಡು ಸಭೆ ನಡೆಸಿದ್ದರಲ್ವಾ? ಆಗೇನು ಸಿದ್ದರಾಮಯ್ಯ  ಕುರುಡಾಗಿದ್ರಾ ? ಎಂದು ಪ್ರಶ್ನಿಸಿದ ಅವರು,  ಮೊದಲು ಸಿದ್ದ ರಾಮಯ್ಯ ಅವರು ಇದಕ್ಕೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ್ದರು.

ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ ಎಂದಿರುವ  ಸಿದ್ದರಾಮಯ್ಯ ಯತಿಂದ್ರಾ ಎನ್ನುವ ಬದಲು ವಿಜಯಂದ್ರ ಎಂದಿರಬಹುದು ಎಂದು ಕೆಎಸ್ ಈಶ್ವರಪ್ಪ ವ್ಯಂಗ್ಯವಾಡಿದರು.

SCROLL FOR NEXT