ರಾಜಕೀಯ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯುವಮುಖಗಳಿಗೆ ಅವಕಾಶ: ಡಿ.ಕೆ.ಶಿವಕುಮಾರ್

Lingaraj Badiger

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯುವಮುಖಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಈ ಬಾರಿ ವಿಧಾನಪರಿಷತ್ತಿಗೆ ಹಿರಿಯ ಮುಖಂಡರನ್ನು ಪರಿಗಣಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಬಿ.ಕೆ ಹರಿಪ್ರಸಾದ್, ನಸೀರ್ ಅಹಮದ್ ನಾಯಕರಲ್ಲ. ಅವರೂ ಕೂಡ ಪಕ್ಷದ ಕಾರ್ಯಕರ್ತರೇ. ವಿಧಾನ ಪರಿಷತ್ ಎನ್ನುವುದು ಹಿರಿಯರ ಮನೆ, ಅನುಭವ ಉಳ್ಳವರಿಗೆ ಅವಕಾಶ ಕೊಡಬೇಕಾಗುತ್ತದೆ ಎಂದರು.

ಎರಡು ಸ್ಥಾನಗಳಿಗೆ ಸುಮಾರು 200ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದರು. ನಾವು ಚರ್ಚೆ ಮಾಡಿ ಮೂರ್ನಾಲ್ಕು ಸಮುದಾಯ ಪರಿಗಣಿಸಿದ್ದೆವು. ಒಬ್ಬ ಹಿರಿಯ ನಾಯಕನಿಗೆ ಟಿಕೆಟ್ ನೀಡಲಾಗಿದೆ. ನಮ್ಮ‌ಸಲಹೆ ಪರಿಗಣಿಸಿ ಹೈಕಮಾಂಡ್ ಆಯ್ಕೆಮಾಡಿದೆ. ಹರಿಪ್ರಸಾದ್ ತಮಗಿಂತಲೂ ಹಿರಿಯರು. ಉತ್ತಮ ಅಭ್ಯರ್ಥಿಯನ್ನೇ ಹೈಕಮಾಂಡ್ ಆಯ್ಕೆ ಮಾಡಿದೆ. ನಾವೆಲ್ಲರೂ ಕುಳಿತು ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ ಅವರ ಜೊತೆ ಚರ್ಚೆ ಮಾಡಿಯೇ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.

ಹರಿಪ್ರಸಾದ್ ನನಗಿಂತ ಹಿರಿಯರು, ಈ ನಿಟ್ಟಿನಲ್ಲಿ ಪರಿಷತ್‌ಗೆ ಓರ್ವ ಹಿರಿಯ ನಾಯಕನಿಗೆ ಟಿಕೆಟ್ ನೀಡಲಾಗಿದೆ. ಒಬ್ಬ ಉತ್ತಮ ಅಭ್ಯರ್ಥಿಯನ್ನ ಹೈಕಮಾಂಡ್ ಆಯ್ಕೆಮಾಡಿದೆ ಎಂದರು.

ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ ಹರಿಪ್ರಸಾದ್‌ ಅವರಿಗೆ ಮೇಲ್ಮನೆ ಟಿಕೆಟ್‌ ನೀಡಿರುವುದು ಕಾಂಗ್ರೆಸ್ ಪಕ್ಷದದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹಿಂದುಳಿದ ವರ್ಗದ ಮುಖಂಡರೊಬ್ಬರನ್ನು ಮೇಲ್ಮನೆಗೆ ಆಯ್ಕೆ ಮಾಡುವ ಮೂಲಕ ಸಿದ್ದರಾಮಯ್ಯ ಅವರಿಗೆ ಚೆಕ್‌ಮೆಟ್‌ ನೀಡುವುದು ಇದರ ಹಿಂದಿರುವ ಉದ್ದೇಶ ಎಂಬ ಮಾತು ಕೇಳಿಬರುತ್ತಿದೆ.

SCROLL FOR NEXT