ರಾಜಕೀಯ

ಎಲ್ಲೆಡೆ ಕೊರೋನಾ ಕಾರ್ಮೋಡ: ವಿಧಾನಸಭೆ ಮುಂಗಾರು ಅಧಿವೇಶನಕ್ಕೆ ಬ್ರೇಕ್?

Shilpa D

ಬೆಂಗಳೂರು: ಕೋವಿಡ್-19 ಸೋಂಕು ತೀವ್ರ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ  ಕಾನೂನಿನಲ್ಲಿ ಅವಾಕಶವಿದ್ದರೇ ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನವನ್ನು ಮುಂದೂಡಲಾಗುವುದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಸಂಸತ್ತು ಯಾವ ನಿರ್ಧಾರ ತೆಗೆದುಕೊಳ್ಳುವುದು ಎಂಬುದನ್ನು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೀಗಾಗಿ ಕಾದು ನೋಡುವ ತಂತ್ರಕ್ಕೆ ಶರಣಾಗಿರುವುದಾಗಿ ಹೇಳಿದ್ದಾರೆ. ಜೊತೆಗೆ ಬೇರೆ ರಾಜ್ಯಗಳು ಅಧಿವೇಶನ ನಡೆಸುತ್ತವೆಯೇ ಎಂಬುದನ್ನು ನೋಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಅಧಿವೇಶನ ನಡೆಸುವುದು ಸೂಕ್ತವಲ್ಲ ಎಂದು ವಿಧಾನಸಭೆ ಕಾರ್ಯಾಲಯ ತಿಳಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ, ಶಾಸಕರು ಮತ್ತು ಪರಿಷತ್ ಸದಸ್ಯರು ಹಾಗೂ ಸಿಬ್ಬಂದಿ ಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಿಳಿಸಬಹುದು, ಆದರೆ ದೈಹಿಕ ಅಂತರ ಕಾಯ್ದುಕೊಳ್ಳುವುದು ಅಸಾಧ್ಯ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

6 ತಿಂಗಳ ಕಾಲ ಅಧಿವೇಶನ ನಡೆಸದೇ ಖಾಲಿ ಬಿಡಬಾರದು ಎಂಬು ನಿಯಮವಿದೆ. ರಾಜ್ಯಪಾಲರು ಕಾಲಕಾಲಕ್ಕೆ ಸದನಕ್ಕೆ ಸಮನ್ಸ್ ನೀಡಿ ಪ್ರತಿ ಶಾಸಕರನ್ನು ಭೇಟಿ ಮಾಡಬೇಕಿದೆ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆಸಿ ಮಾಧುಸ್ವಾಮಿ ಹೇಳಿದ್ದಾರೆ.

ಮಾರ್ಚ್ ತಿಂಗಳಲ್ಲಿ ಎರಡು ಸದನಗಳು ಬಜೆಟ್ ಅದಿವೇಶನ ನಡೆಸಿದ್ದವು. ಮುಂದಿನ ಅಧಿವೇಶನ ನಡೆಸಲು ಸರ್ಕಾರಕ್ಕೆ ಸೆಪ್ಟಂಬರ್ ತಿಂಗಳವರೆಗೆ ಸಮಯಾವಕಾಶವಿದೆ, ಸೆಪ್ಟಂಬರ್ ನಲ್ಲಿ ಪರಿಸ್ಥಿತಿ ಸುಧಾರಿಸಿದರೇ ಒಂದು ಅಥವಾ 2 ದಿನಗಳ ಕಾಲ ಅಧಿವೇಶನ ನಡೆಸುವುದಾಗಿ ತಿಳಿಸಿದ್ದಾರೆ.

ಇನ್ನೂ ಇಂತಹ ಸಮಯದಲ್ಲಿ ಅಧಿವೇಶನ ನಡೆಸುವುದು ಸೂಕ್ತವಲ್ಲ ಎಂದು ಹಲವು ಜನಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ, ಜೂನ್ ತಿಂಗಳಲ್ಲಿ  ಮುಂಗಾರು ಅಧಿವೇಶನ ನಡೆಸಬೇಕಿತ್ತು, ಆದರೆ ಕೊರೋನಾ ದಿಂದ ಸಾಧ್ಯವಾಗಲಿಲ್ಲ, ಎಲ್ಲಾ ರಾಜಕಾರಣಿಗಳು ಪಕ್ಷ ಬೇಧ ಮರೆತು, ಜವಾಬ್ದಾರಿಯಿಂದ ವರ್ತಿಸಬೇಕು. ಅಧಿವೇಶನ ನಡೆಸಲು ಇದು ಸಕಾಲವಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಡಿ.ಎಚ್ ಶಂಕರ ಮೂರ್ತಿ ತಿಳಿಸಿದ್ದಾರೆ.

SCROLL FOR NEXT