ರಾಜಕೀಯ

ರಾಜಕೀಯದಲ್ಲಿ ಯಾರನ್ನು ನಂಬಲು ಆಗುತ್ತಿಲ್ಲ: ಡಿಕೆ ಶಿವಕುಮಾರ್

Lingaraj Badiger

ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮೂಲ‌ ಕಾಂಗ್ರೆಸಿಗರು ದೂರು ನೀಡಿದ್ದಾರೆಂಬ ವಿಚಾರವನ್ನು ಅಲ್ಲಗಳೆದಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು, ಪಕ್ಷದಲ್ಲಿ ಯಾರು ಮೂಲ, ವಲಸಿಗರು ಎಂಬುದಿಲ್ಲ. ಇಲ್ಲಿ ಯಾವುದೇ ಬ್ರಾಂಡ್ ಇಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ರಾಜಕೀಯದಲ್ಲಿ ಯಾರನ್ನು ನಂಬಲು ಆಗುತ್ತಿಲ್ಲ. ನಮ್ಮ ನೆರಳನ್ನು ನಾವೇ ನಂಬಲು ಸಾಧ್ಯವಾಗುತ್ತಿಲ್ಲ. 30 ವರ್ಷ 40ವರ್ಷ ಆದವರು ಬೇರೆ ಬೇರೆ ಪಕ್ಷಗಳಿಗೆ ವಲಸೆ ಹೋಗುತ್ತಿದ್ದಾರೆ. ಹೊಸಬರನ್ನು ಬೇಳೆಸುತ್ತಾರೆ. ಹಳಬರು ಪಕ್ಷದಲ್ಲೇ ಕುಳಿತಿದ್ದಾರೆ. ಹೀಗಾಗಿ ಮುಂದೆ ಏನಾಗಲಿದೆ ಎಂಬುದು ಗೊತ್ತಾಗಲಿದೆ‌ ಎಂದು ಮಾರ್ಮಿಕವಾಗಿ ನುಡಿದರು.

'ಮೈಸೂರು ರಾಜಕೀಯ ನಾಯಕರನ್ನೇ ನೋಡಿ, ಹಿಂದೆ ಅವರು ಹೇಗೆ ಮಾತನಾಡುತ್ತಿದ್ದರು, ಈಗ ಹೇಗೆ ಮಾತನಾಡುತ್ತಿದ್ದಾರೆ ಗಮನಿಸಿ' ಎಂದು ಜಿ.ಟಿ.ದೇವೇಗೌಡ, ಎಚ್.ವಿಶ್ವನಾಥ್ ಹೆಸರು ಹೇಳದೆ ಡಿ.ಕೆ.ಶಿವಕುಮಾರ್ ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಬಸನಗೌಡ‌ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರ ಸಂಸ್ಕೃತಿ ಎಲ್ಲರಿಗೂ ಗೊತ್ತಿದೆ. ಅವರು ಓದಿದ ಪುಸ್ತಕದ ಸಂಸ್ಕೃತಿಯಿಂದ ಇದೆಲ್ಲಾ ಆಗಿದೆ. ಇಂತವರನ್ನು ಬದಲಾಯಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.

SCROLL FOR NEXT