ರಾಜಕೀಯ

ಸಾಲ ಮನ್ನಾ, ಬಡವರ ಬಂಧು ಯೋಜನೆ ಸ್ಥಗಿತ ಮಾಡಿದರೆ ಉಗ್ರ ಹೋರಾಟ: ಬಂಡೆಪ್ಪ ಕಾಶೆಂಪೂರ

Vishwanath S

ಬೆಂಗಳೂರು: ಕಳೆದ ಜೆಡಿಎಸ್-ಕಾಂಗ್ರೆಸ್ ನ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಜಾರಿಗೆ ತಂದ ಸಾಲಮನ್ನಾ ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಒದಗಿಸುವ ಬಡವರ ಬಂಧು ಯೋಜನೆಗಳನ್ನು ಸ್ಥಗಿತಗೊಳಿಸಿದರೆ ಉಗ್ರ ಹೋರಾಟ ಮಾಡುವುದಾಗಿ ಮಾಜಿ ಸಚಿವ, ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪೂರ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾಲ ಮನ್ನಾ ಯೋಜನೆಯಿಂದ ಸಾಕಷ್ಟು ಬಡ ರೈತರಿಗೆ ಅನುಕೂಲವಾಗಿತ್ತು. ಮತ್ತಷ್ಟು ರೈತ ಸಮುದಾಯಕ್ಕೆ ಅನುಕೂಲವಾಗುವ ಹಂತದಲ್ಲಿತ್ತು. ಇದೀಗ ಸಾಲ ಮನ್ನಾ ಯೋಜನೆ ಸ್ಥಗಿತಗೊಳಿಸಿದರೆ ರೈತ ಸಮುದಾಯಕ್ಕೆ ಭಾರೀ ಅನ್ಯಾಯವಾಗಲಿದೆ ಎಂದರು.

ಬಡವರ ಬಂಧು ಯೋಜನೆಯಡಿ ಮೊದಲ ವರ್ಷದಲ್ಲಿ 59 ಸಾವಿರ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಲಾಗಿತ್ತು. ಈ ಪ್ರಮಾಣವನ್ನು 4 ಲಕ್ಷಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದನ್ನು ಸ್ಥಗಿತಗೊಳಿಸುವುದಾಗಿ ವರದಿಗಳು ಬರುತ್ತಿವೆ. ಹಾಗೇನಾದರೂ ಮಾಡಿದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

SCROLL FOR NEXT