ರಾಜಕೀಯ

ಚುನಾಯಿತ ಪ್ರತಿನಿಧಿಗಳ ದ್ವಂದ್ವ; ಸಂವಿಧಾನದ ಆಶಯಗಳಿಗೆ ಪೆಟ್ಟು- ರಮೇಶ್ ಕುಮಾರ್

Shilpa D

ಬೆಂಗಳೂರು: ಸಂವಿಧಾನದ ಆಶಯ, ಗುರಿ ನಿಜವಾದ ಅರ್ಥದಲ್ಲಿ ಜಾರಿಗೆ ಬಾರದೇ ಇರಲು ಚುನಾಯಿತ ಪ್ರತಿನಿಧಿಗಳಲ್ಲಿರುವ ದ್ವಂದ್ವ ನೀತಿಗಳೇ ಕಾರಣ ಎಂದು ಕಾಂಗ್ರೆಸ್ ಹಿರಿಯ ಸದಸ್ಯ ಹಾಗೂ ಮಾಜಿ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ವಿಷಾದ ವ್ಯಕ್ತಪಡಿಸಿದ್ದಾರೆ.

ವಿಧಾನ ಸಭೆಯಲ್ಲಿಂದು ಸಂವಿಧಾನದ ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾಯಿತ ಪ್ರತಿನಿಧಿಗಳು ಸಮಯ ಸಿಕ್ಕಾಗಲೆಲ್ಲಾ ಸಂವಿಧಾನದ ಮಂತ್ರವನ್ನು ಹಾಗೂ ಬಸವಣ್ಣನ ವಚನವನ್ನು ಪಠಿಸುತ್ತಾರೆ. ಆದರೆ ಅದನ್ನು ನಿಜ ಜೀವನದಲ್ಲಿ ಅನುಷ್ಠಾನಕ್ಕೆ ತರುವುದಿಲ್ಲ. ಇದರಿಂದಾಗಿಯೇ ಸಂವಿಧಾನದ ಆಶಯ ಗುರಿ ಈಡೇರುತ್ತಿಲ್ಲ ಎಂದು ಅವರು ಹೇಳಿದರು.

ಸಂವಿಧಾನದ ಗುರಿ ಮತ್ತು ಆಶಯ ಸರಿಯಾಗಿ ಅನುಷ್ಠಾನಕ್ಕೆ ಬಾರದೇ ಇರಲು ಧರ್ಮವೂ ಪರೋಕ್ಷ ಕಾರಣ ಎಂದ ಅವರು, ದಯೆ, ಧರ್ಮದ ಅನೇಕ ಕಥೆ -ಉಪಕಥೆಗಳ ಮೂಲಕ ಎಲ್ಲರೂ ತಲೆದೂಗುವಂತೆ ಸದಸ್ಯರ ಮನ ಮುಟ್ಟುವಂತೆ ಮಾತನಾಡಿದರು.

SCROLL FOR NEXT