ರಾಜಕೀಯ

ಗಾಂಧೀಜಿ ಒಂದು ವಿಶ್ವವಿದ್ಯಾಲಯ: ಜೆ.ಸಿ. ಮಾಧುಸ್ವಾಮಿ

Nagaraja AB

ಬೆಂಗಳೂರು: ಗಾಂಧೀಜಿ ಅಂತಹವರು ನಮ್ಮ ದೇಶದ ಪಿತಾಮಹ ಆಗಿದ್ದು ಈ ದೇಶದ ಹೆಮ್ಮೆ, ಗಾಂಧಿ  ಎಂದರೆ ಒಂದು ವಿಶ್ವವಿದ್ಯಾಲಯ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮೇಲ್ಮನೆಯಲ್ಲಿ ಬಣ್ಣಿಸಿದ್ದಾರೆ

ಸಂವಿಧಾನದ ಮೇಲಿನ ಚರ್ಚೆಯಲ್ಲಿ ಮಾತನಾ‌ಡಿದ  ಅವರು, ಗಾಂಧೀಜಿ ಅವರು ತಿಳಿದುಕೊಳ್ಳದ ವಿಷಯವೇ ಇಲ್ಲ. ಗ್ರಾಮ, ಶ್ರಮಿಕ ಶ್ರಮಜೀವಿಗಳ  ಬದುಕು, ಮಹಿಳಾ ಸಬಲೀಕರಣ, ಗ್ರಾಮಸ್ವರಾಜ್ಯ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ ಅಧ್ಯಯನ  ಮಾಡಿದ್ದರು. ಗಾಂಧಿ ಕಂಡ ಕನಸು ಸಾಮಾನ್ಯವಾಗಿ ಇರಲಿಲ್ಲ, ಅವರು ಯಾರೊಬ್ಬರ ಸ್ವತ್ತು ಅಲ್ಲ,  ಜನಪ್ರಿಯ ಯೋಜನೆಗಳು ಎಂದರೆ ಹುಡುಗಾಟವಲ್ಲ ಎಂದರು

ಇದೇ ವೇಳೆ ಪ್ರತಿಪಕ್ಷ  ಕೆಲ‌ಸದಸ್ಯರು ಆಸನದಲ್ಲೇ ಕುಳಿತು ಮಾಧುಸ್ವಾಮಿ ಅವರ ಮಾತನ್ನು ಮುಖಭಾವದಲ್ಲೇ  ವ್ಯಂಗ್ಯವಾಡುವುದನ್ನು ಕಂಡ ಮಾಧುಸ್ವಾಮಿ, ನಾನು ನಾಟಕೀಯವಾಗಿ ಮಾತನಾಡುತ್ತಿಲ್ಲ, ನನ್ನ  ಅಭಿಪ್ರಾಯ ವ್ಯಕ್ತಪಡಿಸುತ್ತೇನೆ, ಯಾರೂ ಏನೇ ಅಂದರೂ ಐ ಆ್ಯಮ್ ನಾಟ್ ಬಾದರ್ಡ್ ಎಂದರು. 

ಆಗ  ಕಾಂಗ್ರೆಸ್ ನ ಐವಾನ್ ಸೇರಿ ಮತ್ತಿತರು ಐ ಆಮ್‌ನಾಟ್ ಬಾದರ್ಡ್‌ ಎಂದರೆ ಅರ್ಥವೇನು,  ನಿಮಗೆ ಯಾರೂ ಏನೂ ಹೇಳಲಿಲ್ಲ, ನಾವು ಸುಮ್ಮನೆ ಕೇಳುತ್ತಿದ್ದೇವೆ, ನೀವು ಚೆನ್ನಾಗಿಯೇ  ಮಾತನಾಡಿದ್ದೀರಿ‌ ಎಂದಾಗ ಮಾಧುಸ್ವಾಮಿ ಮಾತು ಮುಂದುವರೆಸಿದರು.

SCROLL FOR NEXT