ರಾಜಕೀಯ

ಬಿಜೆಪಿಗರಿಗೆ ಸದನದ ಕಲಾಪ ನಡೆಯೋದು ಬೇಕಾಗಿಲ್ಲ: ಸಿದ್ದರಾಮಯ್ಯ

Raghavendra Adiga

ಬೆಂಗಳೂರು: ಬಿಜೆಪಿಯವರು ಸಭಾಧ್ಯಕ್ಷರ ಮಾತಿಗೂ ಬೆಲೆ ಕೊಡದೆ ಸದನದಲ್ಲಿ ಅಡ್ಡಿ ಪಡಿಸುತ್ತಿರುವುದನ್ನು ನೋಡಿದರೆ ಕಲಾಪ ನಡೆಯದಂತೆ ತಡೆಯುವ ದುರುದ್ದೇಶ ಅವರಿಗಿದ್ದ ಹಾಗೆ ಕಾಣುತ್ತಿದೆ. ಹಾಗಿದ್ದರೆ ಅಧಿವೇಶನ ಕರೆದಿರುವುದು ಯಾಕೆ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಡಾ.ಸುಧಾಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ನಿನ್ನೆಯೇ ನೋಟೀಸ್ ನೀಡಿದ್ದರೂ ನನಗೆ ಮಾತನಾಡಲು ಅವಕಾಶ ನೀಡದಿರುವುದು ಸರಿ ಅಲ್ಲ. ಮೊದಲು ನನಗೆ ಅವಕಾಶ ನೀಡಿ ನಂತರ ಆಡಳಿತ ಪಕ್ಷ ಹಕ್ಕುಚ್ಯುತಿ ಮಂಡಿಸಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಕೆಪಿಸಿಸಿಯ ನೂತನ ಅಧ್ಯಕ್ಷರಾದ ಡಿ.ಕೆ‌.ಶಿವಕುಮಾರ್ ಅವರಿಗೆ ಅಭಿನಂದನೆಗಳು. ಅದೇ ರೀತಿ ನೂತನ ಅಧ್ಯಕ್ಷರನ್ನು ನೇಮಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೂ ಕೃತಜ್ಞತೆಗಳು. ಶಿವಕುಮಾರ್ ಅವರಿಗೆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸಹಕಾರ ನೀಡಿ ಪಕ್ಷಕ್ಕೆ ಇನ್ನಷ್ಟು ಬಲತುಂಬಬೇಕೆಂದು ಕೋರುತ್ತಿದ್ದೇನೆ ಎಂದೂ ಸರಣಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಮತ್ತು ಸಲೀಂ ಅಹ್ಮದ್ ಅವರನ್ನು ಹಾಗೂ ವಿಧಾನಸಭೆಯ ಮುಖ್ಯಸಚೇತಕರಾಗಿ ನೇಮಕಗೊಂಡ ಡಾ.ಅಜಯ್ ಜೇವರ್ಗಿ ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕರಾಗಿ ನೇಮಕಗೊಂಡ ನಾರಾಯಣಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

SCROLL FOR NEXT