ರಾಜಕೀಯ

ನಾನು ಶ್ರೇಷ್ಠ‌ ನೀನು ಕನಿಷ್ಠ ಎಂಬ ಭಾವ ಬೇಡ: ನಾರಾಯಣಸ್ವಾಮಿ

Manjula VN

ಬೆಂಗಳೂರು: ಎಪ್ಪತ್ತು ವರ್ಷಗಳ ಬಳಿಕ ಸಂವಿಧಾನವನ್ನು ಪುನರ್ ಮನನ ಮಾಡಿಕೊಳ್ಳುತ್ತಿರುವುದು ಪ್ರಶಂಸನೀಯ. ಸಂವಿಧಾನ ಈ ನೆಲದ ಶ್ರೇಷ್ಠಗ್ರಂಥ ಎಂದು ಹೆಬ್ಬಾಳ ನಾರಾಯಣಸ್ವಾಮಿ ಬಣ್ಣಿಸಿದರು.

ವಿಧಾನ ಪರಿಷತ್‌ನಲ್ಲಿ ಭೋಜನ ವಿರಾಮದ ನಂತರ ಸದನ‌ ಸಮಾವೇಶಗೊಂಡಾಗ ಭಾರತ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂವಿಧಾನದ ಮಹತ್ವವನ್ನು ಮುಂದಿನ ಪೀಳಿಗೆಗೆ ಗಟ್ಟಿಯಾಗಿ ಉಳಿಸಿಕೊಳ್ಳದೇ ಇದ್ದಲ್ಲಿ ಭವಿಷ್ಯದ ಪೀಳಿಗೆ ಕಷ್ಟ ಎದುರಿಸಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸಂವಿಧಾನದ ಉದ್ದೇಶಗಳು ನಮ್ಮ ಸ್ವಾರ್ಥ ಸಾಧನೆಗಾಗಿ ಜನಸಾಮಾನ್ಯರ ಜೊತೆ ಬದುಕಿನ ಚೆಲ್ಲಾಟವಾಡಲು ಉಪಯೋಗವಾಗುತ್ತಿವೆ‌. ಇಂದಿಗೂ ಸಮಸಮಾಜ ನಿರ್ಮಾಣ ಕನಸಾಗಿಯೇ ಉಳಿದಿದೆ. ಸಂವಿಧಾನದ ಬಗ್ಗೆ ಪಶ್ಚಾತ್ತಾಪ ಪಡುವಂತಾಗಿದೆ ಎಂದು ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.

SCROLL FOR NEXT