ಬಸವರಾಜ ಹೊರಟ್ಟಿ 
ರಾಜಕೀಯ

'ಮಂತ್ರಿಗಿರಿಗಾಗಿ ಸ್ವಾಮೀಜಿಗಳ ಧಮ್ಕಿ' ಸಿದ್ಧಗಂಗಾ, ಸಿದ್ದೇಶ್ವರ ಶ್ರೀಗಳನ್ನು ಬಿಟ್ಟು ಉಳಿದವರೆಲ್ಲಾ ಸರಿಯಿಲ್ಲ: ಬಸವರಾಜ ಹೊರಟ್ಟಿ

ಕರ್ನಾಟಕ ರಾಜ್ಯದಲ್ಲಿ ಸಿದ್ದಗಂಗಾ, ಸಿದ್ದೇಶ್ವರ ಸೇರಿದಂತೆ ಕೆಲವು ಸ್ವಾಮೀಜಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಸ್ವಾಮೀಜಿಗಳು ಸರಿಯಿಲ್ಲ ಎಂದು ಮೇಲ್ಮನೆ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಸಿದ್ದಗಂಗಾ, ಸಿದ್ದೇಶ್ವರ ಸೇರಿದಂತೆ ಕೆಲವು ಸ್ವಾಮೀಜಿಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಸ್ವಾಮೀಜಿಗಳು ಸರಿಯಿಲ್ಲ ಎಂದು ಮೇಲ್ಮನೆ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂವಿಧಾನದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಹುತೇಕ ಎಲ್ಲಾ ರಾಜಕಾರಣಿಗಳು ಚುನಾವಣೆ ಪೂರ್ವದಲ್ಲಿ ಎಲ್ಲಾ ಸ್ವಾಮಿಗಳ ಕಾಲಿಗೆ ನಮಸ್ಕಾರ ಮಾಡುತ್ತಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಎಲ್ಲಾ‌ ಸ್ವಾಮಿಗಳು ತಲಾ ಒಂದೊಂದು ಜಾತಿಗೆ ಮಂತ್ರಿಗಿರಿ ಕೇಳಲು ಶುರು ಮಾಡುತ್ತಾರೆ. ಎಲ್ಲಾ ಜಾತಿಗೂ ಎಲ್ಲಾ ಸ್ವಾಮಿಗಳು ಕೇಳಿದರೆಂದು ಸಂಪುಟದಲ್ಲಿ ಎಲ್ಲರನ್ನು ಸೇರಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಕಾವಿಧಾರಿಗಳೆಲ್ಲರೂ ಸ್ವಾಮಿಗಳಾಗಲು ಸಾಧ್ಯವಿಲ್ಲ. ಸ್ವಾಮಿಗಳು ನಮ್ಮ ಸಮುದಾಯಕ್ಕೆ ಮಂತ್ರಿಗಿರಿ ಕೊಡಿ ಎಂದು ಕೇಳುವುದಾಗಲೀ ಧಮಕಿ ಹಾಕುವುದಾಗಲೀ ಮಾಡುವುದು ಸರಿಯಲ್ಲ. ಸಿದ್ದಗಂಗಾ ಸ್ವಾಮಿಗಳು ಬಿಟ್ಟರೆ ಇತರೆ ಯಾವುದೇ ಸ್ವಾಮೀಜಿಗಳು ಸರಿಯಿಲ್ಲ.1೦-15 ಸ್ವಾಮಿಗಳು ಮಾತ್ರ ರಾಜ್ಯದಲ್ಲಿ ಒಳ್ಳೆಯವರಿದ್ದಾರೆ. ಸ್ವಾಮಿಗಳು ಸರಿಯಾಗಿ ಎಲ್ಲರನ್ನು ನಡೆಸಿಕೊಳ್ಳದ ಕಾರಣ ಎಲ್ಲಾ ಜಾತಿಗಳಲ್ಲಿಯೂ ಒಂದೊಂದು ಮಠ ಸ್ವಾಮಿಗಳು ಮಠಗಳಾದವು. ನಂ.2 ದಂಧೆ ಮಾಡುವವರು ಮಟ್ಕಾ ಮಾರುವವರೇ ಮಂತ್ರಿಗಳಾದರು ಎಂದು ಬೇಸರ ವ್ಯಕ್ತಪಡಿಸಿದರು.

ತಮ್ಮ ತಂದೆ ತಾಯಿ ಜೋಡೆತ್ತು ಸ್ವಾಮೀಜಿಗಳು ಹೇಳಿದ್ದಕ್ಕೆ ಅವರು ಸಾಯುವವರೆಗೂ ಕಾಂಗ್ರೆಸಿಗೆ ಮತಹಾಕುತ್ತಿದ್ದರು. ಆ ರೀತಿಯಾಗಿ ಜನರ ಮನಸ್ಥಿತಿ ಮೇಲೆ ಮಠಾಧೀಶರ ಪ್ರಭಾವ ಇರುತ್ತಿತ್ತು. ಆಗಲೂ ಸಂವಿಧಾನ ಇತ್ತು. ಈಗಲೂ ಇದೆ‌.ಆದರೆ ವ್ಯವಸ್ಥೆ ಮಾತ್ರ ಬದಲಾಗಿದೆ ಎಂದು ಹೊರಟ್ಟಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT