ರಾಜಕೀಯ

ಕೆಪಿಸಿಸಿ ಅಧ್ಯಕ್ಷ ಸ್ಥಾನ ಕುರಿತು ಯಾರಲ್ಲೂ ಮನಸ್ತಾಪವಿಲ್ಲ, ನಾವೆಲ್ಲಾ ಒಗ್ಗಟ್ಟಾಗಿದ್ದೇವೆ: ಡಿಕೆಶಿ

Manjula VN

ಬೆಂಗಳೂರು: ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಲೂ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರೂ ಒಗ್ಗಟ್ಟಿನಿಂದ ಇದ್ದೇವೆದು ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು ಹೇಳಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ಎಂಬಿ.ಪಾಟೀಲ್ ಕೂಡ ಇದ್ದು, ಅಧ್ಯಕ್ಷ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕೆಲ ನಾಯಕರಲ್ಲಿ ಮನಸ್ತಾಪ ಉಂಟಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. 

ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ.99ರಷ್ಟು ಪಕ್ಷದ ನಾಯಕರು ನನ್ನ ಪರವಾಗಿದ್ದರು. ಇದರಲ್ಲಿ ಎಂಬಿ. ಪಾಟೀಲ್ ಕೂಡ ಇದ್ದಾರೆ, ಪಾಟೀಲ್ ಅವರೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಸೂಚಿಸಿದ್ದರು. ನಮ್ಮಲ್ಲಿ ಯಾವುದೇ ಮನಸ್ತಾಪಗಳಿಲ್ಲ ಎಂದು ಹೇಳಿದ್ದಾರೆ. 

ಅಧ್ಯಕ್ಷ ಸ್ಥಾನ ಸ್ವೀಕಾರ ಮಾಡಿದ ಬಳಿಕ ಕಳೆದ ಮೂರು ದಿನಗಳಿಂದಲೂ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ನಾಯಕರ ಭೇಟಿ ಮಾಡಿ ಸುದೀರ್ಘವಾಗಿ ಮಾತುಕತೆಗಳನ್ನು ನಡಸುತ್ತಲೇ ಇದ್ದಾರೆ. ಈ ಮಲೂಕ ಪಕ್ಷವನ್ನು ಬಲಪಡಿಸುವತ್ತ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಅಧಿಕಾರವಲ್ಲ. ಇದೊಂದು ಜವಾಬ್ದಾರಿಯಾಗಿದೆ. ಪಕ್ಷವನ್ನು ಬಲಪಡಿಸಲು ನನಗೊಂದು ಅವಕಾಶ ಸಿದ್ದಿಕೆ. ನಮ್ಮ ಕಾರ್ಯಕ್ಕೆ ಬಲವನ್ನು ತುಂಬಬೇಕಿದೆ ಎಂದು ತಿಳಿಸಿದ್ದಾರೆ. 

ಪಕ್ಷ ಬಲಪಡಿಸುವ ಕಾರ್ಯದ ಬಲ ಹಾಗೂ ಗುಣಮಟ್ಟವನ್ನು ಹೆಚ್ಚಿಸಬೇಕಿದೆ. ಪ್ರತ್ಯೇಕ ಜಾತಿಯ ಬಗ್ಗೆ ನಾನು ಮಾತವಾಡುತ್ತಿಲ್ಲ. ಎಲ್ಲಾ ಸಮುದಾಯಕ್ಕೂ ನಾನು ಪ್ರಾಮುಖ್ಯತೆಯನ್ನು ನೀಡಬೇಕಿದೆ. ಪ್ರಮುಖವಾಗಿ ಶಿಸ್ತಿಗೆ ಪ್ರಾಮುಖ್ಯತೆಯನ್ನು ನೀಡಬೇಕಿದೆ. ಪಕ್ಷದ ಪ್ರಾಮಾಣಿಕರಿಗೆ ಪಕ್ಷದಲ್ಲಿ ಉನ್ನತ ಸ್ಥಾನವನ್ನು ನೀಡಲಾಗುತ್ತದೆ. ಅಧಿವೇಶನ ಪೂರ್ಣಗೊಳ್ಳುತ್ತಿದ್ದಂತೆಯೇ ದೆಹಲಿಗೆ ತೆರಳಿ ಸೋನಿಯಾ ಹಾಗೂ ರಾಹುಲ್ ಅವರೊಂದಿಗೂ ಮಾತುಕತೆ ನಡೆಸಲಾಗುತ್ತದೆ ಎಂದಿದ್ದಾರೆ. 

SCROLL FOR NEXT