ಅನಂತ್ ಕುಮಾರ್ ಹೆಗಡೆ 
ರಾಜಕೀಯ

ಮೇಲ್ಮನೆಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ಪ್ರತಿಧ್ವನಿ: ಗದ್ದಲದ ವಾತಾವರಣ

ಸಂವಿಧಾನದ ಮೇಲಿನ ಚರ್ಚೆಯ ವೇಳೆ ಕಾಂಗ್ರೆಸ್ ಮುಖ್ಯ ಸಚೇತಕ ನಾರಾಯಣಸ್ವಾಮಿ ಮಾತನಾಡುತ್ತಿದ್ದಾಗ, ಸಂವಿಧಾನವೇ ದೇಶದ ಮೊದಲ ಏಕೈಕ ಗ್ರಂಥ ಎಂದು ಹೇಳಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಬೆಂಗಳೂರು: ಸಂವಿಧಾನದ ಮೇಲಿನ ಚರ್ಚೆಯ ವೇಳೆ ಕಾಂಗ್ರೆಸ್ ಮುಖ್ಯ ಸಚೇತಕ ನಾರಾಯಣಸ್ವಾಮಿ ಮಾತನಾಡುತ್ತಿದ್ದಾಗ, ಸಂವಿಧಾನವೇ ದೇಶದ ಮೊದಲ ಏಕೈಕ ಗ್ರಂಥ ಎಂದು ಹೇಳಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಇದಕ್ಕೆ ಜೆಡಿಎಸ್‌ನ ಭೋಜೇಗೌಡ ಹಾಗೂ ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿ, ಇದನ್ನು ಯಾರೂ ಒಪ್ಪುವುದಿಲ್ಲ. ಸಂವಿಧಾನವನ್ನು ಗ್ರಂಥ ಎಂದು ಮೊದಲಿಗೆ ಹೇಳಿದ್ದು ಪಂಡಿತ್‌ ಜವಾಹರ್ ಲಾಲ್ ನೆಹರು ಎಂದರು‌. 

ಸಂವಿಧಾನದ ಬಗ್ಗೆ ಮಾತನಾಡುತ್ತೇನೆ ಎನ್ನುವವರು ಸಂವಿಧಾನವನ್ನು ಬದಲಾಯಿಸುತ್ತೇನೆ ಎಂದಿದ್ದಾರೆ. ಅವರ ಹೆಸರು ಹೇಳುವುದು ಬೇಡ ಎಂದಾಗ ಜೆಡಿಎಸ್‌ನ ಬಸವರಾಜ ಹೊರಟ್ಟಿ ಹೆಸರು ಹೇಳಿ ಎಂದು ಪ್ರೇರೇಪಿಸಿದರು.

ಆಗ ಸಂಸದ ಅನಂತ್ ಕುಮಾರ್ ಹೆಗಡೆ ಎಂದಾಗ ಸಚಿವ ವಿ.ಸೋಮಣ್ಣ ನಾರಾಯಣಸ್ವಾಮಿ ಅವರನ್ನುದ್ದೇಶಿಸಿ ಮಾತನಾಡಿ, ಹೊರಟ್ಟಿ‌ ಹೇಳುತ್ತಾರೆ ಎಂದ ಮಾತ್ರಕ್ಕೆ ಅವರ ಮಾತನ್ನು ಕೇಳಬೇಡಪ್ಪ ಎಂದು ಸೋಮಣ್ಣ ಬುದ್ಧಿವಾದ ಹೇಳಿದರು.

ಬೇಕಾದರೆ ನೀವೇ ಹೇಳಿ ಹೊರಟ್ಟಿ ಎಂದರು. ಆಗ ಎದ್ದುನಿಂತ ಹೊರಟ್ಟಿ,‌ ಹೇಳಿದರೆ ಏನಾಗುತ್ತದೆ ಎಂದು ಪ್ರಶ್ನಿಸಿದರು. ಈ ವೇಳೆ ಬಿಜೆಪಿಯ ಹೆಬ್ಬಾಳ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿ ಸದನಕ್ಕೆ ಸಂಬಂಧಪಡದವರ ಹೆಸರು ಇಲ್ಲೇಕೆ ಎಂದು ಕಿಡಿಕಾರಿದರು‌.

ಆಗ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಎದ್ದುನಿಂತು ನಮ್ಮ ಸಂಸದರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರ ಹೇಳಿಕೆ ಬಗ್ಗೆ ನಾನು ಸಂಸದರಿಂದಲೇ ಕೇಳಿ ಸ್ಪಷ್ಟೀಕರಣ ಕೇಳಿದ್ದೇನೆ. 

ವಿದ್ಯಾರ್ಥಿಗಳ ಸಂವಾದದ ಸಂದರ್ಭದಲ್ಲಿ ವಿದ್ಯಾರ್ಥಿನಿ ಒಬ್ಬಳು ಬರೀ ಎಸ್‌ ಸಿ ಎಸ್ಟಿ ಅವರಿಗೆ ಅವಕಾಶ ನೀಡಲಾಗಿದೆ ಎಂದು ಕೇಳಿದಾಗ ಸಂಸದರು ಸಮರ್ಪಕವಾಗಿ ಪದ ಬಳಸಲು ಆಗದೇ ಬಾಯಿತಪ್ಪಿನಿಂದಾಗಿ ಈ ತರಹ ಹೇಳಿಕೆ ನೀಡಿದ್ದಾರಷ್ಟೆ ಎಂದರು‌.

ಇದಕ್ಕೆ ಭೋಜೆಗೌಡ ನಾರಾಯಣಸ್ವಾಮಿ ಇನ್ನಷ್ಟು ಕಿಡಿಕಾರಿದರು. ಮುಂದುವರೆದು ಮಾತನಾಡಿದ ಕಾಂಗ್ರೆಸಿನ ನಾರಾಯಣಸ್ವಾಮಿ, ಅನಂತ್ ಕುಮಾರ್ ಹೆಗಡೆ ಬಾಯಿತಪ್ಪಿ ಮಾತನಾಡಿದ್ದಾರೆ ಎನ್ನುತ್ತೀರಿ. 

ಆದರೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದವರ ವಿರುದ್ಧ ಯಾವ ಕ್ರಮಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಮತ್ತೆ ಹೆಬ್ಬಾಳ ನಾರಾಯಣಸ್ವಾಮಿ ಆಕ್ರೋಶವ್ಯಕ್ತಪಡಿಸಿ, ಸದನಕ್ಕೆ ಸಂಬಂಧಿಸಿದವರ ಬಗ್ಗೆ ಮಾತುಬೇಡಿ ಎಂದರು.

ಈ ವೇಳೆ ಸದನದಲ್ಲಿ ಸಣ್ಣ ಗದ್ದಲವುಂಟಾಗಿ ಪರಿಸ್ಥಿತಿ ಕೋಲಾಹಲದ ಪರಿಸ್ಥಿತಿ ಉದ್ಭವಿಸಿದಾಗ ಸಭಾಪತಿಗಳು ಮಧ್ಯಪ್ರವೇಶಿಸಿ, ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಾತಿಗೆ ಅವಕಾಶ ಮಾಡಿಕೊಟ್ಟರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT