ರಾಜಕೀಯ

ನಿಷ್ಕ್ರಿಯರಿಗೆ ಗೇಟ್‌ಪಾಸ್‌: ಸಕ್ರಿಯರಿಗೆ  ಮತ್ತೊಂದು ಚಾನ್ಸ್; ಡಿಕೆಶಿ ಹೊಸ ಸ್ಟ್ಯಾಟರ್ಜಿ

Shilpa D

ಬೆಂಗಳೂರು:  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪಣ ತೊಟ್ಟಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡುವ ಹೊಸ ಪ್ರತಿಭೆಗಳಿಗಾಗಿ ಅನ್ವೇಷಣೆ ಮಾಡುತ್ತಿದ್ದಾರೆ.

ಡಿ.ಕೆ.ಶಿವಕುಮಾರ್‌ ಪಕ್ಷವನ್ನು ಸಂಘ ಟಿಸಲು ಹೊಸ ತಂಡ ರಚನೆಗೆ ಕಾರ್ಯ ಪ್ರವೃತ್ತರಾ ಗಿದ್ದು, ನಿಷ್ಕ್ರಿಯ ಜಿಲ್ಲಾಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರಿಗೆ ಗೇಟ್‌ ಪಾಸ್‌ ನೀಡಲು ಮುಂದಾಗಿದ್ದಾರೆ.

ಲೋಕಸಭೆ ಚುನಾವಣೆ ಸೋಲು ಹಿನ್ನೆಲೆಯಲ್ಲಿ ಕೆಪಿಸಿಸಿಯನ್ನು ವಿಸರ್ಜಿಸಿದ್ದರಿಂದ 3 ತಿಂಗಳು ಪದಾಧಿ ಕಾರಿಗಳಿಲ್ಲದೆ ಕೇವಲ ಅಧ್ಯಕ್ಷ, ಕಾರ್ಯಾಧ್ಯಕ್ಷರು ಮಾತ್ರ ಕಾರ್ಯ ನಿರ್ವಹಿಸಿದ್ದರು. ಈಗ ಡಿ.ಕೆ.ಶಿವಕುಮಾರ್‌ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಪಕ್ಷವನ್ನು ಬೇರು ಮಟ್ಟದಲ್ಲಿ ಬಲಗೊಳಿಸಲು ತಮ್ಮದೇ ಆದ ಹೊಸ ತಂಡ ರಚನೆಗೆ ತೀರ್ಮಾನಿಸಿದ್ದಾರೆ.

ಕೆಪಿಸಿಸಿಯಲ್ಲಿ ಒಟ್ಟು 23 ವಿವಿಧ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಮು ಖವಾಗಿ ಮಹಿಳಾ ಘಟಕ, ಯುವ ಘಟಕ, ಎನ್‌ಎಸ್‌ಯುಐ ಘಟಕಗಳನ್ನು ಹೊರತು ಪಡಿಸಿ ಉಳಿದ ಬಹುತೇಕ ಘಟಕಗಳನ್ನು ವಿಸರ್ಜನೆ ಮಾಡಿ ಹೊಸ ಪದಾಧಿಕಾರಿಗಳ ನೇಮಕ ಮಾಡುವ ಸಾಧ್ಯತೆ ಇದೆ.

ಪಕ್ಷದಲ್ಲಿ ಮುಂಚೂಣಿ ಘಟಕಗಳನ್ನು ಹೊರತು ಪಡೆಸಿ ವೈದ್ಯಕೀಯ ಸೆಲ್, ವಕೀಲರ ಘಟಕ, ಕಾರ್ಮಿಕ ಘಟಕ, ಎಸ್ಸಿ ಎಸ್ಟಿ ಘಟಕ, ಹಿಂದುಳಿದ ವರ್ಗದ ಘಟಕ, ಇಂಟಕ್‌ ಸೇರಿ 18 ಘಟಕಗಳಲ್ಲಿ ಬಹುತೇಕ ಸೆಲ್‌ಗ‌ಳನ್ನು ಪುನಾರಚನೆ ಮಾಡಲು ಡಿಕೆಶಿ ನಿರ್ಧರಿಸಿ ದ್ದಾರೆ. ಈಗಾಗಲೇ ಎಲ್ಲ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ಸಭೆ ನಡೆಸಿ, ನಿಷ್ಕ್ರಿಯರಾಗಿರುವವರು ಸ್ವಯಂಪ್ರೇರಿ ತರಾಗಿ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.

ಅಲ್ಲದೇ ಸಕ್ರಿಯರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಕೆಲವು ಜಿಲ್ಲಾಧ್ಯಕ್ಷರಿಗೆ ಬಡ್ತಿ ನೀಡಿ, ರಾಜ್ಯ ಉಪಾಧ್ಯಕ್ಷ ಹಾಗೂ ಪ್ರಧಾನಕಾರ್ಯದರ್ಶಿ ಹುದ್ದೆ ನೀಡುವ ಬಗ್ಗೆಯೂ ಡಿಕೆಶಿ ಆಲೋಚನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗ ಡಿ.ಕೆ.ಶಿವಕುಮಾರ್‌ ಮಾಜಿ ಪದಾಧಿಕಾರಿಗಳಲ್ಲಿ ಸಕ್ರಿಯರಾಗಿದ್ದವರಿಗೆ ಮತ್ತೂಂದು ಅವಕಾಶ ಕಲ್ಪಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಶುಕ್ರವಾರ ನಡೆದ ಸಭೆಯಲ್ಲಿ ಮಾಜಿ ಪದಾಧಿ ಕಾರಿಗಳಿಗೆ ಅದೇ ಹುದ್ದೆಯಲ್ಲಿ ಮುಂದುವರಿಯುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಅವರ ಕಾರ್ಯ ವೈಖರಿಯನ್ನು ಪರಿಗಣಿಸಿ ಮುಂದೆ ಹೊಸ ತಂಡ ರಚನೆಯ ಸಂದರ್ಭದಲ್ಲಿ ಸಕ್ರಿಯರಾಗಿರುವವರನ್ನು ಪರಿಗಣಿಸಲು ಆಲೋಚಿಸಿದ್ದಾರೆ ಎಂದು ತಿಳಿದು ಬಂದಿದೆ.
 

SCROLL FOR NEXT