ರಾಜಕೀಯ

ವಿಧಾನಸಭೆ ಡೆಪ್ಯುಟಿ ಸ್ಫೀಕರ್ ಸ್ಥಾನಕ್ಕೆ ಶಾಸಕ ಆನಂದ ಮಾಮನಿ ಅವಿರೋಧ ಆಯ್ಕೆ

Raghavendra Adiga

ಬೆಂಗಳೂರು: ಜೆಡಿಎಸ್ ನ ಕೃಷ್ಣಾ ರೆಡ್ಡಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಆನಂದ ಮಾಮನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಹುದ್ದೆಗೆ ಬಿಜೆಪಿಯ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಅರಗ ಜ್ಞಾನೇಂದ್ರ ಅವರ ಹೆಸರು ಕೇಳಿ ಬಂದಿತ್ತು. ಆದರೆ ಕೊನೆ ಸಮಯದಲ್ಲಿ ಆನಂದ ಮಾಮನಿ ಅವರಿಗೆ ಈ ಹುದ್ದೆ ಒಲಿದು ಬಂತು. 

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕರಾದ ಆನಂದ ಮಾಮನಿ 3ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1997-98ರಲ್ಲಿ ಇವರ ತಂದೆ ಚಂದ್ರಶೇಖರ ಮಾಮನಿ ಅವರು ಸಹ ವಿಧಾನಸಭೆಯ ಉಪಸಭಾಧ್ಯಕ್ಷರಾಗಿದ್ದರು. ಇದೀಗ ಅವರ ಪುತ್ರನಿಗೂ ಸಹ ಇದೇ ಹುದ್ದೆ ಒಲಿದು ಬಂದಿದೆ

ಆನಂದ ಮಾಮನಿ ಅವರನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಪ್ರಕಟಿಸಿದರು. ಸಭಾನಾಯಕರೂ ಆದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತಿತರರು ಆನಂದ ಮಾಮನಿ ಅವರನ್ನು ಅಭಿನಂದಿಸಿದರು. 

ಆನಂದ ಮಾಮನಿ ಅವರು ಉಪಸಭಾಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿ ಅಭಿನಂದಿಸಿದ್ದಾರೆ.ತಮ್ಮ ಜಿಲ್ಲೆಯವರೇ ಆದ ಮಾಮನಿ ಅವರಿಗೆ ಈ ಹುದ್ದೆ ದೊರೆತರಿವುದು ತಮಗೆ ಅತೀವ ಸಂತಸ ತಂದಿದೆ ಎಂದು ಹೇಳಿದ್ದಾರೆ.

SCROLL FOR NEXT