ರಾಜಕೀಯ

ಪಕ್ಷ ಪುನರ್ ಸಂಘಟಿಸಲು ಡಿಕೆಶಿ ಹೊಸ ತಂತ್ರ: ಮುಂದಿನ 5 ದಿನಗಳ ಕಾಲ ಕಾರ್ಯಕರ್ತರ ಜೊತೆ ಸಮಾಲೋಚನೆ

Shilpa D

ಬೆಂಗಳೂರು: ಲೋಕಸಭೆ ಚುನಾವಣೆಯ  ಹೀನಾಯ ಸೋಲಿನ ನಂತರ ಕಾಂಗ್ರೆಸ್ ತೀವ್ರ ಅಪಮಾನ ಎದುರಿಸಿತ್ತು. ಚುನಾವಣೆ ಮುಗಿದು ಒಂದು ವರ್ಷದ ನಂತರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪಕ್ಷ ಸಂಘಟನೆಗೆ ಸಜ್ಜಾಗಿದ್ದಾರೆ.

ಕೊರೋನಾ ನಡುವೆಯೂ  ಮುಂದಿನ ಐದು ದಿನಗಳ ಕಾಲ ಹಲವು ಸಭೆಗಳನ್ನು ನಡೆಸಲು ತೀರ್ಮಾನಿಸಿದ್ದಾರೆ, ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಜೊತೆ ತಾಲೂಕು ಹಾಗೂ ನಿಗಮ- ಮಂಡಳಿಯ ಮಾಜಿ ಅಧ್ಯಕ್ಷರುಗಳ ಜೊತೆ ಸರಣಿ ಸಭೆ ನಡೆಸಲಿದ್ದಾರೆ.

ಕಳೆದ ವರ್ಷ ಕಾಂಗ್ರೆಸ್ ನ 14 ಶಾಸಕರು ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ಅನೇಕ ಪ್ರದೇಶಗಳಲ್ಲಿ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರನ್ನು ಹೊರ ಹಾಕುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿದ್ದವು.

ಬೂತ್ ಮಟ್ಟದಲ್ಲಿ  ಪಕ್ಷ ಸಂಘಟಿಸಲು ಮುಂದಾಗಿರುವ ಡಿಕೆಶಿ, ಅನೇಕ ಭಾಗಗಳಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕ ಮತ್ತು ಕೇಂದ್ರ ಕರ್ನಾಟಕ ಭಾಗಗಳ ಕಡೆ ಗಮನ ಹರಿಸಲಿದ್ದಾರೆ.

ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿ 1 ತಿಂಗಳು ಕಳೆದಿದ್ದು. ಮೇ 31 ರಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ, ಅದಕ್ಕಾಗಿ ಎಲ್ಲಾ ಸಿದ್ಧತೆ ನಡೆದಿದ್ದು, ರಾಜ್ಯದ 6,021 ಗ್ರಾಮ ಪಂಚಾಯಿತಿ ಸದಸ್ಯರುಗಳನ್ನು ಕರೆ ತರಲು ಯೋಜಿಸಲಾಗುತ್ತಿದೆ.

SCROLL FOR NEXT