ರಾಜಕೀಯ

ಅತೃಪ್ತರ ಮನವೊಲಿಕೆಗೆ ಮುಂದಾದ ಮುಖ್ಯಮಂತ್ರಿ: ಸಭೆ ನಡೆಸಿದ ಶಾಸಕರಿಗೆ ಸಿಎಂ ಬುಲಾವ್!

Shilpa D

ಬೆಂಗಳೂರು: ಅತೃಪ್ತ ಶಾಸಕರ ಮನವೊಲಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಮುಂದಾಗಿದ್ದು 11 ಗಂಟೆಗೆ ನಿವಾಸಕ್ಕೆ ಆಗಮಿಸಿ ತಮ್ಮನ್ನು ಭೇಟಿಯಾಗುವಂತೆ ಸಂದೇಶ ರವಾನಿಸಿದ್ದಾರೆ. ಅತೃಪ್ತರ ಸಭೆ ಬೆನ್ನಲ್ಲೇ ಮಾಜಿ ಸಚಿವ ಮುರುಗೇಶ್ ನಿರಾಣಿಗೆ ಮುಖ್ಯಮಂತ್ರಿ ಯಡಿಯೂರಪ್ಪ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. 

ಸಭೆ ನಡೆಸಿ ಮಾಧ್ಯಮಗಳಿಗೆ ಗೊಂದಲ ಸೃಷ್ಟಿ ಯಾಗುವಂತೆ ಹೇಳಿಕೆ ನೀಡಿರುವ ಬಗ್ಗೆ ನಿರಾಣಿ ಬಳಿ ಸಿಎಂ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಆದರೆ ಸಭೆ ನಡೆಸಿಲ್ಲ ಎಂದು ನಿರಾಣಿ ಸ್ಪಷ್ಟೀಕರಣ ನೀಡಿದ್ದು ಇದೆಲ್ಲಾ ಕೇವಲ ವದಂತಿ ಇದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ಯಡಿಯೂರಪ್ಪ ಅವರಿಗೆ ಸಮಜಾಯಿಸಿ ನೀಡಿದ್ದಾರೆ.

ಇದರ ಜೊತೆಗೆ ಉಮೇಶ್ ಕತ್ತಿ ಅವರಿಗೂ ಕರೆ ಮಾಡಿ ಮಾತನಾಡಿರುವ ಯಡಿಯೂರಪ್ಪ ನಿಮ್ಮನ್ನು ಮಂತ್ರಿ ಮಾಡುವುದಾಗಿ ಭರವಸೆ ಕೊಟ್ಟಿದ್ದೇನೆ. ನಿಮ್ಮ ತಮ್ಮನಿಗೆ ರಾಜ್ಯಸಭೆ ಟಿಕೆಟ್ ಬಗ್ಗೆ ನನ್ನ ಜೊತೆ ಚರ್ಚೆ ನಡೆಸಬೇಕಿತ್ತು. ಅದು ಬಿಟ್ಟು ಶಾಸಕರ ಗುಂಪು ಕಟ್ಟಿಕೊಂಡು ಸಭೆ ಮಾಡೋದು ಎಷ್ಟು ಸರಿ? ಸರ್ಕಾರ ಕೊರೋನಾ ಎದುರಿಸುತ್ತಿರುವ ಇಂತಹ ಸಂದರ್ಭದಲ್ಲಿ ನೀವು ಈ ರೀತಿ ಪ್ರತ್ಯೇಕವಾಗಿ ಶಾಸಕರ ಜೊತೆಗೂಡಿ ಸಭೆ ಸೇರೋದು ಸರಿಯೆ? ಬನ್ನಿ ಮಾತನಾಡೋಣ.  ಬಂದು ಭೇಟಿ ಮಾಡಿ ಎಂದು ಸಿಎಂ ಯಡಿಯೂರಪ್ಪ ಉಮೇಶ್ ಕತ್ತಿಗೆ ತಿಳಿಸಿದ್ದಾರೆ.

SCROLL FOR NEXT