ಪಿಪಿಇ ಕಿಟ್ ಧರಿಸಿರುವ ಮತದಾರ 
ರಾಜಕೀಯ

ಉಪ ಚುನಾವಣೆಗೆ ತೆರೆ: ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರ, ಆರ್ ಆರ್ ನಗರದಲ್ಲಿ ಕಡಿಮೆ, ಶಿರಾದಲ್ಲಿ ಹೆಚ್ಚು ಮತದಾನ

ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಮಂಗಳವಾರ ನಡೆದ ಮತದಾನ ಅಂತ್ಯವಾಗಿದ್ದು, ನಿರೀಕ್ಷೆಯಂತೆ ಆರ್ ಆರ್ ನಗರದಲ್ಲಿ ಅತಿ ಕಡಿಮೆ ಹಾಗೂ ಶಿರಾದಲ್ಲಿ ಹೆಚ್ಚು ಮತದಾನವಾಗಿದೆ.

ಬೆಂಗಳೂರು: ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆಗೆ ಮಂಗಳವಾರ ನಡೆದ ಮತದಾನ ಅಂತ್ಯವಾಗಿದ್ದು, ನಿರೀಕ್ಷೆಯಂತೆ ಆರ್ ಆರ್ ನಗರದಲ್ಲಿ ಅತಿ ಕಡಿಮೆ ಹಾಗೂ ಶಿರಾದಲ್ಲಿ ಹೆಚ್ಚು ಮತದಾನವಾಗಿದೆ.

ಕೊರೋನಾ ಮುಂಜಾಗ್ರತೆಯೊಂದಿಗೆ ಇಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆ ವರೆಗೆ ಎರಡೂ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.

ಆರ್ ಆರ್ ನಗರದಲ್ಲಿ ಸಂಜೆ ಐದು ಗಂಟೆಯವರೆಗೆ 39.05 ರಷ್ಟು ಮತದಾನವಾಗಿದೆ. ತುಮಕೂರು ಜಿಲ್ಲೆಯ ಶಿರಾದಲ್ಲಿ ಕೊರೋನಾ ಹೊರತಾಗಿಯೂ ಬಿರುಸಿನ ಮತದಾನ ನಡೆದಿದ್ದು, ಸಂಜೆ ಐದು ಗಂಟೆಯವರೆಗೆ ಶೇ. 77.34 ರಷ್ಟು ಮತದಾನವಾಗಿದೆ.

ಆರ್​ಆರ್​ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಕುಸುಮಾ, ಬಿಜೆಪಿಯಿಂದ ಮುನಿರತ್ನ ಹಾಗೂ ಜೆಡಿಎಸ್​ನಿಂದ ಕೃಷ್ಣಮೂರ್ತಿ ಸ್ಪರ್ಧಿಸಿದ್ದರೆ. ಶಿರಾದಲ್ಲಿ ಕಾಂಗ್ರೆಸ್​ನಿಂದ ಟಿ.ಬಿ ಜಯಚಂದ್ರ, ಬಿಜೆಪಿಯಿಂದ ರಾಜೇಶ್ ಗೌಡ ಹಾಗೂ ಜೆಡಿಎಸ್ ನ ಅಮ್ಮಾಜಮ್ಮ ಅಭ್ಯರ್ಥಿಗಳಾಗಿದ್ದಾರೆ.

ಎರಡು ಕ್ಷೇತ್ರಗಳಿಂದ, ಒಟ್ಟು 1,008 ಬೂತ್ ಗಳನ್ನು ಸ್ಥಾಪಿಸಲಾಗಿತ್ತು. ಎಲ್ಲಾ ಬೂತ್ ಗಳಲ್ಲೂ ಥರ್ಮಲ್ ಸ್ಕ್ಯಾನರ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಕೊರೋನಾ ಪಾಸಿಟಿವ್ ಇದ್ದವರು ಕೂಡ ಇಂದು ತಮ್ಮ ಹಕ್ಕು ಚಲಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ