ರಾಜಕೀಯ

ಆರ್ ಆರ್ ನಗರ, ಶಿರಾ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು: ಸರ್ಕಾರದ ಆಂತರಿಕ ಸಮೀಕ್ಷೆ

Sumana Upadhyaya

ಬೆಂಗಳೂರು: ಶಿರಾ ಮತ್ತು ಆರ್ ಆರ್ ನಗರ ಕ್ಷೇತ್ರಗಳ ಉಪ ಚುನಾವಣೆ ಮುಗಿದಿದೆ. ಇನ್ನು ಫಲಿತಾಂಶ ಪ್ರಕಟವಾಗಲು ಕೆಲವೇ ದಿನಗಳು ಬಾಕಿಯಷ್ಟೆ.

ನಿನ್ನೆ ನಡೆದ ಮತದಾನದಲ್ಲಿ ಶಿರಾ ಮತ್ತು ಆರ್ ಆರ್ ನಗರ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸೂಚನೆಯಿದೆ ಎಂದು ರಾಜ್ಯ ಸರ್ಕಾರ ನಡೆಸಿರುವ ಆಂತರಿಕ ಸಮೀಕ್ಷೆಯಿಂದ ತಿಳಿದುಬಂದಿದೆ. ಶಿರಾದಲ್ಲಿ ಶೇಕಡಾ 82.31ರಷ್ಟು ಮತ್ತು ಬೆಂಗಳೂರಿನ ಆರ್ ಆರ್ ನಗರದಲ್ಲಿ ಶೇಕಡಾ 45.24ರಷ್ಟು ಮತದಾನವಾಗಿದೆ.

15ರಿಂದ 20 ಸಾವಿರ ಮತಗಳ ಅಂತರದಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬಹುದು ಎಂದು ಸರ್ಕಾರದ ಸಮೀಕ್ಷೆಯಿಂದ ತಿಳಿದುಬಂದಿದೆ. ಸಾಂಪ್ರದಾಯಿಕವಾಗಿ ಕಡಿಮೆ ಮತದಾನವಾದರೆ ಕಾಂಗ್ರೆಸ್ ಗೆ ವರವಾಗುತ್ತದೆ, ಆದರೆ ಈ ಬಾರಿ ಆರ್ ಆರ್ ನಗರದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಕಾಂಗ್ರೆಸ್ ಗೆ ಹೋಗುವ ಅಲ್ಪಸಂಖ್ಯಾತ ಮತಗಳು ಈ ಬಾರಿ ತೀರಾ ಕಡಿಮೆಯಾಗಿದೆ. ಅಷ್ಟೊಂದು ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಮತದಾನ ಮಾಡಿಲ್ಲ.

ಮತದಾನಕ್ಕೆ ಮುಂಚೆಯೇ ಅನೇಕ ಮತದಾರರ ಎರಡೂ ಕೈಗಳ ತೋರು ಬೆರಳುಗಳಿಗೆ ಶಾಯಿ ಹಾಕಲಾಗಿದ್ದು, ಮಂಗಳವಾರ ನಿನ್ನೆ ಮತ ಚಲಾಯಿಸುವುದನ್ನು ತಡೆದಿದೆ ಎಂಬ ಆರೋಪ ಕೇಳಿಬಂದಿದೆ.ಅನೇಕ ಎಸ್ ಸಿ ಮತ್ತು ಹಿಂದುಳಿದ ವರ್ಗಗಳ ಮತದಾರರು ಈ ಬಾರಿ ಬಿಜೆಪಿ ಬೆಂಬಲಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಎನ್ .ಮುನಿರತ್ನ 20 ಸಾವಿರ ಮತಗಳ ಅಂತರದಿಂದ ಗೆಲ್ಲುವ ಸಾಧ್ಯತೆಯಿದೆ.

ಶಿರಾ ಕ್ಷೇತ್ರದಲ್ಲಿ ಬಿಜೆಪಿ 75ರಿಂದ 80 ಸಾವಿರ ಮತಗಳನ್ನು ಪಡೆಯುವ ವಿಶ್ವಾಸದಲ್ಲಿದ್ದಾರೆ. ಜೆಡಿಎಸ್ ಶಾಸಕರಾಗಿದ್ದ ಬಿ ಸತ್ಯನಾರಾಯಣ ಕಳೆದ ಬಾರಿ 74 ಸಾವಿರದ 338 ಮತಗಳನ್ನು ಪಡೆದಿದ್ದರು. 10 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಅದಕ್ಕೂ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಟಿ ಬಿ ಜಯಚಂದ್ರ 74 ಸಾವಿರ ಮತಗಳನ್ನು ಪಡೆದು 15 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದರು.

SCROLL FOR NEXT