ರಾಜಕೀಯ

ಎಚ್.ಡಿ ಕುಮಾರಸ್ವಾಮಿ ನಿವಾಸಕ್ಕೆ ನಂಜಾವಧೂತ ಸ್ವಾಮೀಜಿ ಭೇಟಿ: ರಾಜಕೀಯ ವಲಯದಲ್ಲಿ ಕುತೂಹಲ

Shilpa D

ತುಮಕೂರು: ಶಿರಾ ಉಪಚುನಾವಣೆ ಫಲಿತಾಂಶದ ಬಗ್ಗೆ ಮೂರು ರಾಜಕೀಯ ಪಕ್ಷಗಳು ಮತ್ತು ರಾಜಕೀಯ ಪಂಡಿತರು ತಲೆ ಕೆಡಿಸಿಕೊಂಡಿರುವ ಬೆನ್ನಲ್ಲೇ ಕುಂಚಿಟಿಗ ಒಕ್ಕಲಿಗ ಸಮುದಾಯದ ನಂಜಾವಧೂತ ಸ್ವಾಮೀಜಿಗಳು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಶ್ರೀಗಳು ಕುಮಾರಸ್ವಾಮಿ ಕುಶಲೋಪರಿ ವಿಚಾರಿಸಿದ್ದಾರೆ. ಈ ವೇಳೆ ನಿಖಿಲ್ ಕುಮಾರ್, ಪತ್ನಿ ರೇವತಿ ಮತ್ತು ಅನಿತಾ ಕುಮಾರಸ್ವಾಮಿ ಉಪಸ್ಥಿತರಿದ್ದರು.

ಸ್ವಾಮೀಜಿಗಳು ಉಪಚುನಾವಣೆಯಲ್ಲಿ ಮತ ಚಲಾಯಿಸಿಲ್ಲ ಹೀಗಿದ್ದರೂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಸಹಾನುಭೂತಿ ತೋರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕುಂಚಿಟಿಗ ಒಕ್ಕಲಿಗ ಸಮುದಾಯದ ಮತದಾರರು ದಿವಂಗತ ಸತ್ಯನಾರಾಯಣ ಅವರನ್ನು ಬೆಂಬಲಿಸಿದ್ದರು.  ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಜೆಡಿಎಸ್ ನಿಂದ ಕಣಕ್ಕಿಳಿಸಲಾಗಿತ್ತು.

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅಮ್ಮಾಜಮ್ಮ ಪರ ಪ್ರಚಾರ ಮಾಡಲು ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದರು. ಒಕ್ಕಲಿಗ ಸಮುದಾಯ ಜೆಡಿಎಸ್ ಗೆ ಬೆಂಬಲ ನೀಡಲಿದೆ ಎಂಬುದು ತಿಳಿದ ನಂತರ ಇದನ್ನು ಅರಿತುಕೊಂಡ ನಂತರ, ಮತದಾನದ ದಿನದಂದು ಬಿಜೆಪಿ ಶಿಬಿರದಲ್ಲಿ ಉತ್ಸಾಹವು ಕಡಿಮೆಯಾಯಿತು ಎಂದು ಜೆಡಿಎಸ್ ಮುಖಂಡ ಬೆಳ್ಳಿ ಲೋಕೇಶ್ ತಿಳಿಸಿದ್ದಾರೆ.

ಸತ್ಯನಾರಾಯಣ ಶಾಸಕರಾಗಿದ್ದಾಗ ಬಗರ್ ಹುಕುಂ’ ಭೂ ಯೋಜನೆಯಡಿ ಪತ್ರಗಳನ್ನು ಪಡೆದ ಕುಟುಂಬಗಳು ಮತ್ತು ಎಚ್ ಡಿ ಕುಮಾರಸ್ವಾಮಿ ಘೋಷಿಸಿದ ಸಾಲ ಮನ್ನಾದಿಂದ
ಲಾಭ ಪಡೆದ 15,000 ಜನರು ಜೆಡಿಎಸ್‌ಗೆ ಮತ ಚಲಾಯಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಡಿಸಿಎಂ ಗೋವಿಂದ ಕಾರಜೋಳ ಮತ್ತು ಚಿತ್ರದುರ್ಗ ಸಂಸದ ಅನೇಕಲ್ ನಾರಾಯಣಸ್ವಾಮಿ ಸಮುದಾಯದ ಮತಗಳನ್ನು ಗಳಿಸಲು ಆಕ್ರಮಣಕಾರಿಯಾಗಿ ಪ್ರಚಾರ ಮಾಡಿದ್ದರು.

ಅಹಿಂದ ಸಮುದಾಯದ ಮತಗಳು ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಅವರ ಸಾಂಪ್ರದಾಯಿಕ ಮತ ಬ್ಯಾಂಕ್ ಗಳಾಗಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಹಾಗೂ ರೆಬೆಲ್ ಕಾಂಗ್ರೆಸ್ ನಾಯಕ ಕೆ ರಾಜಣ್ಣ ಜಯಚಂದ್ರ ಅವರ ಪರ ಪ್ರಚಾರ ನಡೆಸಿದ್ದರು.,

SCROLL FOR NEXT