ರಾಜಕೀಯ

ಅನಿರೀಕ್ಷಿತ ಟಿಕೆಟ್: ಕೆಲಸ‌ ಮಾಡುವ ಉತ್ಸಾಹ ಹೆಚ್ಚಿಸಿದೆ - ಬಿಜೆಪಿ ರಾಜ್ಯಸಭಾ ಅಭ್ಯರ್ಥಿ ಡಾ. ನಾರಾಯಣ

Vishwanath S

ಬೆಂಗಳೂರು: ನಾನು ನಿರೀಕ್ಷೆ ಮಾಡದೇ ಇರುವ ರಾಜ್ಯಸಭೆ ಟಿಕೆಟ್ ಅನ್ನು ಪಕ್ಷ ನೀಡಿದೆ. ಇದರಿಂದ ಕೆಲಸ‌ ಮಾಡುವ ಉತ್ಸಾಹ ಮತ್ತಷ್ಟು ಹೆಚ್ಚಿದೆ ಎಂದು ಬಿಜೆಪಿ ಅಭ್ಯರ್ಥಿ ಡಾ. ನಾರಾಯಣ ತಿಳಿಸಿದ್ದಾರೆ.
 
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ನಿರೀಕ್ಷೆಯನ್ನು ನಾನು ಇರಿಸಿಕೊಂಡಿರಲಿಲ್ಲ, ನಿನ್ನೆ ಮಧ್ಯಾಹ್ನದವರೆಗೂ ನನಗೆ ಏನು ಗೊತ್ತಿರಲಿಲ್ಲ, ಮಧ್ಯಾಹ್ನ ನನಗೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ನೀಡಲಾಯಿತು ಎಂದರು. ದೆಹಲಿ ನಾಯಕರು ನನ್ನ ಹೆಸರು ಆಯ್ಕೆ ಮಾಡಿದ್ದಾರೆ. ಯಾವ ರೀತಿ ಆಯ್ಕೆ? ಮಾನದಂಡವೇನು? ಎನ್ನುವುದು ನನಗೆ ಗೊತ್ತಿಲ್ಲ. ನಾಲ್ಕೈದು ದಶಕದಿಂದ ಸಮಾಜ ಸೇವೆ ಮಾಡಿದ್ದೇನೆ ಪರಿಷತ್, ಜಿಲ್ಲಾ ಪಂಚಾಯತ್ ನಂತಹ ಸ್ಥಾನದಲ್ಲಿ ಯಾವ ಕೆಲಸವನ್ನು ನಾನು ಮಾಡಿಲ್ಲ ಬಿಜೆಪಿ ಹಾಗೂ ಸಂಘ ಪರಿವಾರದ ಜೊತೆ ಸಂಪರ್ಕ ಮಾತ್ರ ಇತ್ತು ಅದರ ಜೊತೆ ಕೆಲಸ ಮಾಡಿಕೊಂಡಿದ್ದೆ ಎಂದರು.
 
ಬಿಜೆಪಿಯಲ್ಲಿ ಮಾತ್ರ ಇಂತಹ ಬೆಳವಣಿಗೆ ಆಗಲಿದೆ. ಬೇರೆ ಕಡೆ ಆಗಲು ಸಾಧ್ಯವಿಲ್ಲ ಸಾಮಾನ್ಯ ಕಾರ್ಯಕರ್ತನನ್ನು ಹುಡುಕಿ ಅವಕಾಶ ಕೊಡುವ ಗುಣ ಪಕ್ಷದಲ್ಲಿ ಬಂದಿದೆ, ಮೋದಿ ಬಂದ ನಂತರ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಹೆಚ್ಚು ಸಿಗುತ್ತಿದೆ, ಎಲ್ಲಾ ಕಾರ್ಯಕರ್ತರಿಗೆ ಮುಂದೆ ಇದು ಸ್ಫೂರ್ತಿಯಾಗಲಿದೆ, ನಮಗೂ ಕೂಡ ಹೆಚ್ಚಿನ ಕೆಲಸ ಮಾಡಲು ಇದು ಸ್ಫೂರ್ತಿಯಾಗಲಿದೆ. ಆಸಕ್ತಿ ಬರಲಿದೆ ಎಂದರು.
 
ನನ್ನ ಹೆಸರು ಮಾಡಿದ ಕೇಂದ್ರದ ಎಲ್ಲ ನಾಯಕರಿಗೂ ರಾಜ್ಯದ ಎಲ್ಲ ನಾಯಕರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.

SCROLL FOR NEXT