ಕುಸುಮಾ 
ರಾಜಕೀಯ

ಜ್ಯೋತಿಷಿ- ವಾಸ್ತು ಶಾಸ್ತ್ರಜ್ಞರ ಸಲಹೆಯಂತೆ ಚುನಾವಣೆಯಲ್ಲಿ ಮಹಿಳೆ ಕಣಕ್ಕೆ: ಟ್ರಬಲ್ ಶೂಟರ್ ಗೇಮ್ ಪ್ಲಾನ್!

ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಖ್ಯಾತಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಹಠದಿಂದ ತಂತ್ರ ರೂಪಿಸುತ್ತಿದ್ದಾರೆ.

ಬೆಂಗಳೂರು: ಕಾಂಗ್ರೆಸ್ ಟ್ರಬಲ್ ಶೂಟರ್ ಎಂದೇ ಖ್ಯಾತಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಹಠದಿಂದ ತಂತ್ರ ರೂಪಿಸುತ್ತಿದ್ದಾರೆ.

ಜ್ಯೋತಿಷಿಗಳ ಸಲಹೆ ಮೇರೆಗೆ ಆರ್ ಆರ್ ನಗರ ಚುನಾವಣೆಗೆ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಪತ್ನಿ ಕುಸುಮಾ ಅವರನ್ನು ಕಣಕ್ಕಿಳಿಸಿದ್ದಾರೆ. 

ನಕ್ಷತ್ರಗಳು ಮತ್ತು ವಾಸ್ತು ಮೇಲೆ ಅಪಾರ ನಂಬಿಕೆ ಇಟ್ಟಿರುವ ಡಿಕೆ ಶಿವಕುಮಾರ್ ಉಪ ಚುನಾವಣೆಯಲ್ಲಿ ಅದನ್ನು ಪ್ರಯೋಗ ಮಾಡಲು ಮುಂದಾಗಿದ್ದಾರೆ. 

2004 ರಲ್ಲಿ ಇದೇ ರೀತಿಯ ಸಲಹೆ ಪಡೆದು ಕನಕಪುರ ಲೋಕಸಭಾ ಕ್ಷೇತ್ರದಲ್ಲಿ  ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ವಿರುದ್ಧ ತೇಜಸ್ವಿನಿ ರಮೇಶ್ ಅವರನ್ನು ಕಣಕ್ಕಿಳಿಸಿದ್ದರು. 

ಕಳೆದ ವಾರ ಕುಸುಮಾ ಅವರು ಅದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದ ಫೋಟೋ ವೈರಲ್ ಆಗಿತ್ತು, ಅದಾದ ನಂತರ ಕುಸುಮಾ ಅಭ್ಯರ್ಥಿಯಾಗಿ ಆಯ್ಕೆಯಾಗುವುದು ಖಚಿತವಾಯಿತು.

ಇನ್ನು ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯನ್ನು ಕೂಡ ವಾಸ್ತು ಪ್ರಕಾರವೇ ನಿರ್ಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಅಂತೆಯೇ, ಮುಂಭಾಗವು ಭವ್ಯವಾದ ಗ್ರೀಕೋ-ರೋಮನ್ ಲುಕ್ ಪಡೆದುಕೊಂಡಿದೆ. ಆರು ಜೋಡಿ ಕೊರಿಂಥಿಯನ್ ಕಂಬಗಳೊಂದಿಗೆ ಕೆಪಿಸಿಸಿ ಭವನ ನಿರ್ಮಾಣವಾಗುತ್ತಿದೆ, ಇದು ಶಿವಕುಮಾರ್ ಅವರ ಗ್ಲೋಬಲ್ ಅಕಾಡೆಮಿ ಕಟ್ಟಡವನ್ನೇ ಹೋಲುವಂತಿದೆ, ಬಾಗಿಲು ಮತ್ತು ಕಿಟಕಿ ಫ್ರೇಮ್ ಗಳನ್ನು ಬದಲಾಯಿಸಲಾಗಿದೆ, ಜೊತೆಗೆ ಅವರ ಕೊಠಡಿಯಲ್ಲಿ
ಕುಳಿತುಕೊಳ್ಳುವ ಸ್ಥಿತಿ ಕೂಡ ಬದಲಾಗಿದೆ.

ಈ ವರ್ಷದ ಆರಂಭದಲ್ಲಿ ಶಿವಕುಮಾರ್ ಮಧ್ಯಪ್ರದೇಶದ ಡಾಟಿಯಾದ ಬಗಲಮುಖಿ ದೇವಾಲಯದ ಶ್ರೀ ಪೀತಾಂಬರಿ ಪೀಠದಲ್ಲಿ ಯಜ್ಞ ಮತ್ತು ಹೋಮ ಹವನ ನಡೆಸಿದ್ದರು. ಕಳೆದ ವರ್ಷ ಜೈಲಿನಿಂದ ಬಿಡುಗಡೆಯಾದ ನಂತರ ಕಲಬುರಗಿ ಮತ್ತು ಮೈಸೂರಿನಲ್ಲಿ ವಿಶೇಷ ಪೂಜೆ ನೆರವೇರಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ನಾಳೆ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ-Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT