ರಾಜಕೀಯ

ಶಿರಾ ಉಪಚುನಾವಣೆ: ಡಿಕೆಶಿಯಿಂದ ಟಿಬಿ ಜಯಚಂದ್ರ ಹೆಸರು ಪ್ರಸ್ತಾಪ; ಹೌಹಾರಿದ ಸುರ್ಜೇವಾಲಾ!

Shilpa D

ತುಮಕೂರು: ಶಿರಾ ಉಪಚುನಾವಣೆಗೆ ಟಿಬಿ ಜಯಚಂದ್ರ ಅವರನ್ನು ಕಣಕ್ಕಿಳಿಸಿಲು ಕಾಂಗ್ರೆಸ್ ಹೈಕಮಾಂಡ್ ಗೆ ಇಷ್ಟವಿರಲಿಲ್ಲ, ಬೇರೋಬ್ಬ ಅಭ್ಯರ್ಥಿಯನ್ನು ಘೋಷಿಸಲು ನಿರ್ಧರಿಸಿತ್ತು ಎನ್ನಲಾಗಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಟಿಬಿ ಜಯಚಂದ್ರ ಮತ್ತು ಅವರ ಪುತ್ರ ಟಿಜೆ ಸಂತೋಷ್ ಇಬ್ಬರು ಸೋಲನುಭವಿಸಿದ್ದರು, ಇದು ಪಕ್ಷಕ್ಕೆ ಭಾರಿ ಹಿನ್ನಡೆಯಾಗಿತ್ತು.

2018ರಲ್ಲಿ ಜಯಚಂದ್ರ ಶಿರಾದಿಂದ ಪುತ್ರ ಸಂತೋಷ್ ಚಿಕ್ಕನಾಯಕನಹಳ್ಳಿಯಿಂದ ಸ್ಪರ್ಧಿಸಿದಾಗ ಹಿಂದುಳಿದ ವರ್ಗಗಳ ಸಮುದಾಯದವರು ಭಾರೀ ವಿರೋಧ ವ್ಯಕ್ತ ಪಡಿಸಿದ್ದರು.

ಕಾಡುಗೊಲ್ಲ ಸಮುದಾಯದ ಪ್ರಮುಖ ಮುಖಂಡ ಸಾಸಲು ಸತೀಶ್ 2013 ರಲ್ಲಿ ಚುನಾವಣೆಗೆ ನಿಂತು ಸೋತಿದ್ದರು, ಹೀಗಾಗಿ 2018 ರಲ್ಲಿ ಟಿಕೆಟ್ ನಿರಾಕರಿಸಲಾಯಿತು, ಬದಲಿಗೆ ಸಂತೋಷರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಲಾಗಿತ್ತು. ಕುರುಬ ಸಮುದಾಯದ ಜೆಡಿಎಸ್ ಅಭ್ಯರ್ಥಿ ಸುರೇಶ್ ಬಾಬು ಅವರು ಸೋಲಲು ಸಾಸಲು ಸತೀಶ್ ಕಾರಣವಾದರು, ಜೊತೆಗೆ ಬಿಜೆಪಿಯ ಜೆಸಿ ಮಾಧುಸ್ವಾಮಿ ಗೆಲುವು ಕಂಡರು.

ಇದು ನೆರೆಯ ಶಿರಾ ಕ್ಷೇತ್ರದ ಮೇಲೂ ಪರಿಣಾಮ ಬೀರಿತು. ಉಪ ಚುನಾವಣೆ ಸಮೀಪಿಸುತ್ತಿದ್ದಂತೆ ಸಾಸಲು ಸತೀಶ್ ಅವರನ್ನು ತುಮಕೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. 

ಶಿರಾ ಕ್ಷೇತ್ರಕ್ಕೆ ಟಿಬಿ ಜಯಚಂದ್ರ ಅವರ ಹೆಸರನ್ನು ಕಳುಹಿಸಿದಾಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ ದೀಪ್ ಸುರ್ಜೇವಾಲಾ ವಿರೋಧ ವ್ಯಕ್ತ ಪಡಿಸಿದ್ದರು,. ಇದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಆಘಾತ ತಂದಿತು.

ಚಿತ್ರದುರ್ಗ ಮಾಜಿ ಸಂಸದ ಸಿಪಿ ಮೂಡಲಗಿರಿಯಪ್ಪ ತಮ್ಮ ಪುತ್ರ ಡಾ.ರಾಜೇಶ್ ಗೌಡ ಅವರಿಗೆ ಟಿಕೆಟ್ ನೀಡುವಂತೆ ಲಾಬಿ ನಡೆಸಿದರು.  ಡಾ. ರಾಜೇಶ್ ಗೌಡ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ವ್ಯವಹಾರದ ಪಾಲುದಾರರೂ ಹೌದು. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತರು ಕೂಡ. ಹೀಗಾಗಿ ಕಾಂಗ್ರೆಸ್ ವಲಯದಲ್ಲಿ ರಾಜೇಶ್ ಗೌಡ ಹೆಸರು ಕೇಳಿ ಬರುತ್ತಿತ್ತು.  ಆದರೆ ಅಂತಿಮವಾಗಿ ಡಿಕೆ ಶಿವಕುಮಾರ್ ಟಿಬಿ ಜಯಚಂದ್ರ ಹೆಸರನ್ನು ಫೈನಲ್ ಮಾಡಿದ್ದರು.  ಆದರೆ ಇದುವರೆಗೂ ಯಾವುದೇ ಪಕ್ಷವನ್ನು  ಸೇರದ ರಾಜೇಶ್ ಗೌಡ ಉಪ ಚುನಾವಣೆ ಸಮಯದಲ್ಲಿ ಜಯಚಂದ್ರ ಬೆಂಬಲಿಗರೊಂದಿಗೆ ಬಿಜೆಪಿ ಸೇರಿದ್ದಾರೆ. 

SCROLL FOR NEXT