ರಾಜಕೀಯ

ನಮ್ಮ ಅಸ್ತಿತ್ವ ಪ್ರತಿಪಾದಿಸುವ ಅಗತ್ಯವಿದ್ದು, ಕಾರ್ಯಕರ್ತರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಬೇಕಿದೆ: ಹೆಚ್.ಡಿ.ಕುಮಾರಸ್ವಾಮಿ

Manjula VN

ಬೆಂಗಳೂರು: ಶಿರಾ, ರಾಜರಾಜೇಶ್ವರಿ ನಗರದ ಉಪಚುನಾವಣೆಗೆ ದಿನಾಂಕ ನಿಗದಿಯಾಗಿರುವಂತೆಯೇ ರಾಜ್ಯ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಭಾರೀ ಸಿದ್ಧತೆಗಳನ್ನು ನಡೆಸಿವೆ. ಈ ನಡುವಲ್ಲೇ ಚುನಾವಣೆ ಕುರಿತು ತಮ್ಮ ಪಕ್ಷದ ಸಿದ್ಧತೆ ಹಾಗೂ ಪಕ್ಷದ ಬೆಳವಣಿಗೆ ಕುರಿತು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿಯವರು ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಜೆಡಿಎಸ್'ಗೆ ಎರಡು ಕ್ಷೇತ್ರಗಳ ಉಪಚುನಾವಣೆ ಎಷ್ಟು ಮುಖ್ಯ? 
ಎರಡು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಆದರೆ, ಆದರೆ ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಇನ್ನೂ ಅಸ್ತಿತ್ವದಲ್ಲಿದೆ ಮತ್ತು ಜನರ ಪರವಾದ ಹೋರಾಟವನ್ನು ಮುಂದುವರೆಸಲಿದೆ ಎಂಬ ಸಂದೇಶವನ್ನು ಈ ಮೂಲಕ ರವಾನಿಸುವುದು ಪಕ್ಷಕ್ಕೆ ಮುಖ್ಯವಾಗಿದೆ. ಪಕ್ಷದ ಕಾರ್ಯಕರ್ತರಿಗೂ ಈ ಮೂಲಕ ಮಾನಸಿಕ ಸ್ಥೈರ್ಯವನ್ನು ತುಂಬುವ ಕೆಲಸ ಮಾಡಬೇಕಿದೆ. ನಮ್ಮ ಪಕ್ಷದ ಶಾಸಕರು ಶಿರಾವನ್ನು ಪ್ರತಿನಿಧಿಸಿದ್ದರು. ಹೀಗಾಗಿ ಈ ಕ್ಷೇತ್ರವನ್ನು ನಾವು ಗೆಲ್ಲಲೇಬೇಕಿದೆ. 

ಚುನಾವಣಾ ಸಂದರ್ಭದಲ್ಲಿ ಜೆಡಿಎಸ್ ಯಾವೆಲ್ಲಾ ವಿಚಾರಗಳನ್ನು ಪ್ರಸ್ತಾಪಿಸಬಹುದು? 
ಪ್ರವಾಹದ ವೇಳೆ, ರೈತರು ಸಂಕಷ್ಟದಲ್ಲಿದ್ದಾಗ, ಕೊರೋನಾ ಸಮಸ್ಯೆ ಹಾಗೂ ಕಳೆದ ವರ್ಷ ಸಂಭವಿಸಿದ ಸಾಕಷ್ಟು ಸಮಸ್ಯೆಗಳನ್ನು ಬಿಜೆಪಿ ಸರ್ಕಾರ ಯಾವ ರೀತಿ ನಿಭಾಯಿಸಿತು ಎಂಬುದು ಜನರಿಗೆ ತಿಳಿದಿದೆ. ಕಾರ್ಮಿಕರು ಹಾಗೂ ನಿರುದ್ಯೋಗಿಗಳಿಗೆ ಸಂಬಂಧಿಸಿದ ಸಾಕಷ್ಟು ಸಮಸ್ಯೆಗಳು ರಾಜ್ಯದಲ್ಲಿದೆ. ಈ ಚುನಾವಣೆ ಮೂಲಕ ಸರ್ಕಾರಕ್ಕೆ ಜನರು ಕಠಿಣ  ಸಂದೇಶವನ್ನು ರವಾನಿಸಬೇಕಿದೆ. 

ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ನಾಯಕರು ಜೆಡಿಎಸ್ ಬಗ್ಗೆ ಮೃದುವಾದ ಧೋರಣೆಯನ್ನು ತೋರುತ್ತಿದ್ದಾರೆ. ಈ ಬದಲಾವಣೆ ಏಕೆ? ನೀವೂ ಕೂಡ ಇದೇ ಧೋರಣೆಯನ್ನು ತೋರುತ್ತೀರಾ?
ನಾವು ಸಮಸ್ಯೆಗಳ ಕುರಿತಂತೆ ಅಷ್ಚೇ ಚರ್ಚೆ ನಡೆಸುತ್ತೇವೆ. ವ್ಯಕ್ತಿಯ ಕುರಿತಾಗಿ ಅಲ್ಲ. ಬಿಜೆಪಿ ಪಕ್ಷ ಕೇಂದ್ರ ಹಾಗೂ ರಾಜ್ಯ ಎರಡರಲ್ಲೂ ಅಧಿಕಾರದಲ್ಲಿದೆ. ಸರ್ಕಾರದ ನೀತಿಗಳ ಕುರಿತಂತೆ ನಾವು ಮಾತುಕತೆ ನಡೆಸುತ್ತೇವೆ. 

ವಿಭಜನೆಗೊಳ್ಳುವ ಒಕ್ಕಲಿಗರ ಮತಗಳು ಬಿಜೆಪಿಗೆ ಸಹಾಯ ಮಾಡುತ್ತದೆ ಎಂದು ಭಾವಿಸುವಿರಾ? 
ಮತಗಳು ವಿಭಜನೆಗೊಳ್ಳುತ್ತೇವೆಂದು ಎನಿಸುತ್ತಿಲ್ಲ. ಸಮುದಾಯದ ಮತ ಪಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಪ್ರತೀ ಬಾರಿ ಚುನಾವಣೆ ಬಂದಾಗಲೂ ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಒಳಒಪ್ಪಂದವಾಗಿದೆ ಎಂತಲೇ ಹೇಳುತ್ತದೆ. ಅವರಿಗೆ ಮಾತನಾಡಲು ಬೇರಾವುದೇ ವಿಚಾರಗಳೂ ಸಿಗುವುದಿಲ್ಲ.  ಆರ್.ಆರ್.ನಗರದಲ್ಲಿ, ಒಕ್ಕಲಿಗ ಮತಗಳಲ್ಲಿನ ಒಂದು ವಿಭಾಗವು ಸಮುದಾಯದ ಅಭ್ಯರ್ಥಿ ಶಾಸಕರಾಗುವುದನ್ನು ತಡೆಯುತ್ತಿದ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಇದೇ ಕಾಂಗ್ರೆಸ್ ನಾಯಕರು ಈ ಹಿಂದೆ ಕ್ಷೇತ್ರದಲ್ಲಿ ಒಕ್ಕಲಿಗರೊಬ್ಬರು ಶಾಸಕರಾಗುವುದನ್ನು ತಡೆದಿದ್ದರು. ಇದೀಗ ಒಕ್ಕಲಿಗರ ಬಗ್ಗೆ ಇದ್ದಕ್ಕಿದ್ದಂತೆ ಕಾಂಗ್ರೆಸ್ ನಾಯಕರಿಗೆ ಜ್ಞಾನೋದಯವಾದಂತಿದೆ. 

ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಜೆಡಿಎಸ್'ನ ಒಕ್ಕಲಿಗ ಕ್ಷೇತ್ರಗಳು ಕುಗ್ಗಿವೆ ಎಂದು ನಿಮಗನಿಸುತ್ತಿದೆಯೇ? 
ಜನರಲ್ಲಿ ಗೊಂದಲಗಳನ್ನು ಸೃಷ್ಟಿಸುವ ಸಲುವಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜನರಿಗೆ ಒಕ್ಕಲಿಗ ಸಮುದಾಯಕ್ಕೆ ನಾವು ನೀಡಿರುವ ಕೊಡುಗೆಯೇನು, ಕಾಂಗ್ರೆಸ್ ನೀಡಿರುವ ಕೊಡುಗೆ ಎನು ಎಂಬುದು ತಿಳಿದಿದೆ. ಈ ಬಗ್ಗೆ ಜನರೇ ನಿರ್ಧಾರ ಕೈಗೊಳ್ಳಲಿದ್ದಾರೆ. ಯಾರಾದರೂ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಕೂಡಲೇ ಜೆಡಿಎಸ್ ಪಕ್ಷ ಬಲ ಕಡಿಮೆಯಾಗುವುದು ಕೇವಲ ಕಲ್ಪನೆಯಷ್ಟೇ ಎಂದಿದ್ದಾರೆ. 

SCROLL FOR NEXT