ರಾಜೇಶ್ ಗೌಡ 
ರಾಜಕೀಯ

ಐಷಾರಾಮಿ ಕಾರು ಪ್ರಿಯ ಶಿರಾ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ!

ಶಿರಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ ಅವರು ಐಷಾರಾಮಿ ಕಾರುಗಳ ಪ್ರಿಯರಾಗಿದ್ದು, ರಾಜೇಶ್ ಗೌಡ ಅವರ ಬಳಿ ರೂ.1.27 ಕೋಟಿ ಹಾಗೂ ರೂ.52 ಲಕ್ಷ ಮೌಲ್ಯದ ಎರಡು ಬಿಎಂಡಬ್ಲ್ಯೂ ಕಾರುಗಳಿವೆ. 

ಶಿರಾ: ಶಿರಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್ ಗೌಡ ಅವರು ಐಷಾರಾಮಿ ಕಾರುಗಳ ಪ್ರಿಯರಾಗಿದ್ದು, ರಾಜೇಶ್ ಗೌಡ ಅವರ ಬಳಿ ರೂ.1.27 ಕೋಟಿ ಹಾಗೂ ರೂ.52 ಲಕ್ಷ ಮೌಲ್ಯದ ಎರಡು ಬಿಎಂಡಬ್ಲ್ಯೂ ಕಾರುಗಳಿವೆ. ರೂ.34 ಲಕ್ಷ ಮೌಲ್ಯದ ಫೋರ್ಡ್, ರೂ.10.20 ಲಕ್ಷ ಮೌಲ್ಯದ ಹುಂಡೈ ಕಾರುಗಳನ್ನು ಹೊಂದಿದ್ದು, ಇವರ ಪತ್ನಿ ಡಾ.ತೇಜಸ್ವಿನಿ ಅವರ ಬಳಿಯೂ ರೂ.9.50 ಲಕ್ಷ ಮೌಲ್ಯದ ಹುಂಡೈ ಕಾರು ಇದೆ. 

ರಾಜೇಶ್ ಗೌಡ ಅವರು ಕೋಟ್ಯಾಧಿಪತಿಯಾಗಿದ್ದು, ರೂ.15.25 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇವರ ಪತ್ನಿ ಕೂಡ ರೂ.4.10 ಕೋಟಿ ಆಸ್ತಿಯನ್ನು ಹೊಂದಿದ್ದಾರೆ. 

ಉಪಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆ ರಾಜೇಶ್ ಗೌಡ ಅವರು ತಮ್ಮ ಆಸ್ತಿ ಕುರಿತು ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಪ್ರಕಾರ, 2019-20ನೇ ಸಾಲಿನಲ್ಲಿ ರೂ.2.57 ಕೋಟಿ ಆದಾಯಗಳಿಸಿದ್ದಾರೆ. ಪತ್ನಿ ರೂ.48 ಲಕ್ಷ ಆದಾಯ ಹೊಂದಿದ್ದಾರೆ.

ರಾಜೇಶ್ ಗೌಡ ಅವರು ರೂ.9.92 ಕೋಟಿ ಚರಾಸ್ತಿ ಹಾಗೂ ರೂ.5.33 ಕೋಟಿ ಸ್ಥಿರಾಸ್ತಿ ಹೊಂದಿದ್ದರೆ, ಅವರ ಪತ್ನಿ ಬಳಿ ರೂ.2.80 ಕೋಟಿ ಚರಾಸ್ತಿ ಹಾಗೂ ರೂ.1.30 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್