ರಾಜಕೀಯ

ಒಕ್ಕಲಿಗ ಎಂಬ ಹೆಮ್ಮೆ ಇದೆ, ಆದರೆ ನನ್ನ ಜಾತಿ ಕಾಂಗ್ರೆಸ್​: ಡಿಕೆ ಶಿವಕುಮಾರ್​

Lingaraj Badiger

ಬೆಂಗಳೂರು: ಪಕ್ಷದಲ್ಲಿ ಬಹಳಷ್ಟು ಉತ್ತಮ ಪ್ರಗತಿಯಾಗಿದ್ದು, ಕಾರ್ಯಕರ್ತರಿಗೆ ಆತ್ಮವಿಶ್ವಾಸ ಬಂದಿದೆ. ಚುನಾವಣಾ ವೀಕ್ಷಕರ ಸಭೆಯಲ್ಲಿ ಈ ಬಗ್ಗೆ ಸತ್ಯಾಂಶ ತಿಳಿಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜರಾಜೇಶ್ವರಿ ನಗರ ಕ್ಷೇತ್ರದ್ರಲ್ಲಿ ಮತದಾರರು ಆತಂಕದಲ್ಲಿದ್ದಾರೆ. ತಮ್ಮ ಮತಗಳು ಮಾರಾಟವಾಗಿವೆ ಎಂದು ಗಾಬರಿಯಲ್ಲಿದ್ದಾರೆ. ಮತದಾರರ ಭಾವನೆಗಳೇನು ಎನ್ನುವುದು ಸೆಪ್ಟೆಂಬರ್ 3 ರಂದು ವ್ಯಕ್ತವಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.

ಆರ್​ ಆರ್​ ನಗರದಲ್ಲಿ ಒಕ್ಕಲಿಗ ತಂತ್ರ ಹೂಡಲಾಗಿದೆ. ಇದಕ್ಕಾಗಿಯೇ ದಿ. ಐಎಎಸ್​ ಅಧಿಕಾರಿ ಡಿಕೆ ರವಿ ಅವರ ಹೆಂಡತಿ ಕುಸುಮಾ ಅವರನ್ನು ಕಣಕ್ಕೆ ಇಳಿಸಲಾಗಿದೆ. ಡಿಕೆಶಿ ಜಾತಿ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂಬ ಜೆಡಿಎಸ್​ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನನ್ನ ಪೋಷಕರು ಒಕ್ಕಲಿಗರು ಆದ ಕಾರಣ ನಾನು ಒಕ್ಕಲಿಗನಾದೆ. ನಾನು ಒಕ್ಕಲಿಗ ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೇಂದ ಮಾತ್ರಕ್ಕೆ ನಾನು ಜಾತಿ ರಾಜಕಾರಣ ಮಾಡುವುದಿಲ್ಲ. ನನ್ನ ಜಾತಿ ಕಾಂಗ್ರೆಸ್ ಎಂದು ತಿರುಗೇಟು ನೀಡಿದರು.

ಇದೇ ವೇಳೆ ಕೊರೋನಾ ಹಾಗೂ ವಯಸಿನ ಕಾರಣದಿಂದಾಗಿ ನೆರೆಪ್ರದೇಶಗಳಿಗೆ ಭೇಟಿ ಮಾಡಲಾಗಲಿಲ್ಲ ಎಂಬ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಅಸಹಾಯಕತೆಯ ಹೇಳಿಕೆಗೆ ಕಿಡಿಕಾರಿದ ಡಿಕೆಶಿ, ಯಾರಿಗೆ ಸರ್ಕಾರ ನಡೆಸಲಾಗುವುದಿಲ್ಲವೋ ಅವರು ಮನೆಯಲ್ಲಿಯೇ ಇರಲಿ. ಯಾವ ಮಂತ್ರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆಂಬುದು ಮಾಧ್ಯಮಗಳೇ ತೋರಿಸಿಕೊಡುತ್ತಿವೆ. ಜೀವ ಇದ್ದರೆ ಜೀವನ. ನೆಪಗಳಿಗೆಲ್ಲ ಜವಾಬ್ದಾರಿಯಿಂದ ಕಳಚಿಕೊಳ್ಳಲಾಗುವುದಿಲ್ಲ ಎಂದರು.

SCROLL FOR NEXT