ರಾಜಕೀಯ

ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಕ್ಕೆ ಡಿ.ಕೆ.ಶಿವಕುಮಾರ್ ಜೈಲಿಗೆ ಹೋಗಿದ್ದರಾ?: ಸಿಟಿ ರವಿ

Manjula VN

ಬೆಂಗಳೂರು: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಪ್ರಚಾರ ಗರಿಗೆದರಿದ್ದು, ಈ ನಡುವಲ್ಲೇ ರಾಜಕೀಯ ಕೆಸರೆರಚಾಟ ಆರಂಭವಾಗಿದೆ. ಇದರಂತೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಜೈಲಿಗೆ ಹೋಗಿ ಬಂದವರೆಲ್ಲ ಬಂಡೆಯಲ್ಲ. ಅಷ್ಟಕ್ಕೂ ಡಿಕೆ ಶಿವಕುಮಾರ್‌ ಸ್ವಾತಂತ್ರ್ಯ ಹೋರಾಟ ನಡೆಸಿ ಜೈಲಿಗೆ ಹೋಗಿ ಬಂದಿದ್ದಾರಾ? ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಜೈಲಿಗೆ ಹೋಗಿ ಬಂದವರು ಬಂಡೆ ಎನ್ನುತ್ತಾರೆ. ಅಂಥವರು ಬಂಡೆಯಲ್ಲ. ಅವರದ್ದು ಭಂಡತನವಷ್ಟೇ ಎಂದು ಕಿಡಿಕಾರಿದ್ದಾರೆ. 

ಇನ್ನು ಜೈಲಿಗೆ ಹೋಗಿ ಬರುವಾಗ ಮೆರವಣಿಗೆ ಮಾಡಿಸಿಕೊಳ್ಳುತ್ತಾರೆ. ಇದು ಭಂಡತನವಲ್ಲದೇ ಮತ್ತಿನ್ನೇನು? ಎಂದು ಪ್ರಶ್ನಿಸಿರುವ ಸಿಟಿ ರವಿಯವರು, ಜಾತಿ ರಾಜಕಾರಣ ಮಾಡಬಾರದು. ನಾನೂ ಒಕ್ಕಲಿಗ. ನಮ್ಮ ಅಶೋಕಣ್ಣ ಒಕ್ಕಲಿಗರಲ್ಲವಾ? ನಾಯಕರನ್ನು ಮುಗಿಸಿ ಬೆಳೆಯುತ್ತೇನೆ ಎನ್ನುವುದು ಸರಿಯಲ್ಲ. ಡಿಕೆಶಿ ಇತರರಿಗೆ ಬೆಳೆಯಲು ಬಿಡುತ್ತಿದ್ದರೆ ಸೋಮಶೇಖರ್‌, ಸುಧಾಕರ್‌, ಯೋಗೇಶ್ವರ್‌ ಯಾಕೆ ಕಾಂಗ್ರೆಸ್‌ ತೊರೆಯುತ್ತಿದ್ದರು? ಎಂದು ಪ್ರಶ್ನಿಸಿದ್ದಾರೆ.

SCROLL FOR NEXT