ರಾಜಕೀಯ

ಶಿರಾ ಉಪಚುನಾವಣೆ: ಅಖಾಡಕ್ಕಿಳಿದ ಮಾಜಿ ಪ್ರಧಾನಿ ದೇವೇಗೌಡ

Manjula VN

ತುಮಕೂರು: ಶಿರಾ ಉಪಚುನಾವಣೆ ಅಖಾಡಕ್ಕೆ ಮಾಜಿ ಪ್ರಧಾನಮಂತ್ರಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಬುಧವಾರ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. 

ಶಿರಾದ ಚಂಗಾವರ ಗ್ರಾಮದಲ್ಲಿ ನಿನ್ನೆಯಷ್ಟೇ ಉಪಚುನಾವಣೆ ಪ್ರಚಾರ ಕಾರ್ಯಕ್ರವನ್ನು ದೇವೇಗೌಡ ಅವರು ಉದ್ಘಾಟಿಸಿದ್ದು, ಈ ಮೂಲಕ ಅಖಾಡಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. 

ಕಾರ್ಯಕ್ರಮದಲ್ಲಿ ಮಾತನಾಡಿರುವ ದೇವೇಗೊಡ ಅವರು, ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ನಮ್ಮ ಮೇಲೆ ದಾಳಿ ಮಾಡುತ್ತಿವೆ. ನಾಳೆಯಿಂದ ನಾನು ಇಲ್ಲಿಯೇ ಇರುತ್ತೇನೆ. ನ.1ರವರೆಗೂ ಉಪಚುನಾವಣೆ ಕೆಲಸ ಮಾಡುವುಕ್ಕೆ ಟೊಂಕಕಟ್ಟಿ ಬಂದಿದ್ದೇನೆ. ಶಿರಾ ಶಾಸಕ ಸತ್ಯನಾರಾಯಣ್ ಆಗಲಿದ್ದಾರೆ. ಸತ್ಯ ನಾರಾಯಣರ ಶ್ರೀಮತಿ ಅವ್ರನ್ನೇ ನಿಲ್ಲಿಸಿದ್ದೇವೆ. ಎರಡೂ ರಾಷ್ಟ್ರೀಯ ಪಕ್ಷಗಳು ನಮ್ಮ ಮೇಲೆ ದಾಳಿ ಮಾಡುತ್ತಿವೆ. ನಮ್ಮಲ್ಲಿ ಕೆಲವರನ್ನು ಸೆಳೆದಿರಬಹುದು. ನಾನು ಧೃತಿಗೆಡಲ್ಲ. ಮಹಾಜನತೆ ಎಲ್ಲವನ್ನೂ ಎದುರಿಸಿ ನಿಂತು ನಮ್ಮ ಅಭ್ಯರ್ಥಿಯನ್ನು ಗೆಲ್ಲಸಲಿದ್ದಾರೆಂದು ತಿಳಿಸಿದ್ದಾರೆ. 

ಇದೇ ವೇಳೆ ಗುಬ್ಬಿ ಶಾಸಕ ಎಸ್ಆರ್ ಶ್ರೀನಿವಾಸ್ ಅವರು ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಅವರು ಪಾಲ್ಗೊಂಡಿಲ್ಲ ಎಂದು ಅದಕ್ಕೆ ಯಾರೂ ರಾಜಕೀಯ ಬಣ್ಣ ನೀಡಬಾರದು. ಕುಮಾರಸ್ವಾಮಿಯವರು ಕಣ್ಣೀರನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಾನು ಈ ಹಿಂದೆ ಕಣ್ಣೀರು ಹಾಕಿದ್ದಕ್ಕೆ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದರು. ಸಿದ್ದರಾಮಯ್ಯ ಅವರು ರಾಜಕೀಯಕ್ಕೆ ಯಾವಾಗ ಬಂದ್ರು? 20 ವರ್ಷ ಆದ ಮೇಲೆ ಸಿದ್ದರಾಮಯ್ಯನವರು ನಮ್ ಜೊತೆ ಬಂದರು ಎಂದು ಮಾರ್ಮಿಕವಾಗಿ ನುಡಿದರು. 

ನವೆಂಬರ್ 3 ರಂದು ಶಿರಾಪದಲ್ಲಿ ಉಪಚುನಾವಣೆ ನಡೆಯಲಿದ್ದು, ನವೆಂಬರ್ 1ರವರೆಗೂ ಶಿರಾದಲ್ಲೇ ಉಳಿದು ಕ್ಷೇತ್ರದಲ್ಲಿರುವ ಪ್ರತೀ ಗ್ರಾಮಕ್ಕೂ ಭೇಟಿ ನೀಡಿ, ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

SCROLL FOR NEXT