ರಾಜಕೀಯ

ಶಿರಾ ಉಪಚುನಾವಣೆ: ಮೂರು ಪಕ್ಷಗಳಿಗೂ ಜಾತಿ ಸಮೀಕರಣವೇ ಮುಖ್ಯ; ಜೆಡಿಎಸ್ ಗೆ ಸಮಾಜವಾದಿ ಪಕ್ಷ ಬೆಂಬಲ

Shilpa D

ತುಮಕೂರು: ಶಿರಾ ಉಪಚುನಾವಣೆಗೆ ಇನ್ನು ಕೇವಲ ಒಂದೇ ಒಂದು ವಾರ ಮಾತ್ರ ಸಮಯವಿದೆ, ಮೂರು ಪ್ರಮುಖ ಪಕ್ಷಗಳು ಮತದಾರರನ್ನು ಸೆಳೆಯಲು ಜಾತಿ ಲೆಕ್ಕಾಚಾರವನ್ನೇ ಪ್ರಮುಖ ಅಸ್ತ್ರವನ್ನಾಗಿಸಿಕೊಂಡಿವೆ.

ಕಾಂಗ್ರೆಸ್ ನ ಜಯಚಂದ್ರ. ಜೆಡಿಎಸ್ ನ ಅಮ್ಮಾಜಮ್ಮ ಮತ್ತು ಬಿಜೆಪಿಯ ರಾಜೇಶ್ ಗೌಡ ಕುಂಚಿಟಿಗ ಒಕ್ಕಲಿಗರಾಗಿದ್ದು ಚುನಾವಣೆಯಲ್ಲಿ ಗೆಲ್ಲಲು ಬೇರೆ ಸಮುದಾಯಗಳ ಮತಗಳು ಅತ್ಯಗತ್ಯವಾಗಿದೆ.

ವಿಶೇಷವಾಗಿ ಶಿರಾ ಪಟ್ಟಣದಲ್ಲಿ ಬಿಜೆಪಿ ಉಪಾಧ್ಯಾಕ್ಷ ಬಿ ವೈ ವಿಜಯೇಂದ್ರ- ಲಿಂಗಾಯತ, ಈಶ್ವರಪ್ಪ- ಕುರುಬ, ಹಿರಿಯೂರು ಶಾಸಕಿ ಪೂರ್ಣಿಮಾ-ಗೊಲ್ಲ ಸಮುದಾಯ ಹಾಗೂ ಒಕ್ಕಲಿಗ ಮುಖಂಡ ಡಿಸಿಎಂ ಅಶ್ವತ್ಥ ನಾರಾಯಣ ಸಮುದಾಯಗಳ ಮತಕ್ಕಾಗಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

ಆದರೆ ಅದಕ್ಕಿಂತ ಮುಖ್ಯವಾಗಿ, ಶಿರಾದಲ್ಲಿ ಸಾಕಷ್ಟು ಮತಗಳನ್ನು ಹೊಂದಿರುವ ಎಸ್‌ಸಿ ಎಡ ಸಮುದಾಯವನ್ನು ಪ್ರತಿನಿಧಿಸುವ ಉಪ ಸಿಎಂ ಗೋವಿಂದ ಕಾರಜೋಳ ಅವರನ್ನು ಇದು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾರೆ. ಕಾರಜೋಳ ಕಾಂಗ್ರೆಸ್ ಟಾರ್ಗೆಟ್ ಮಾಡಿ ಮತಯಾತನೆ ಮಾಡುತ್ತಿದ್ದಾರೆ. ಹಿಂದುಳಿದ ಸಮುದಾಯಗಳ ಮುಖಂಡ ರಘು ಕೌಟಿಲ್ಯ ಅವರು, ಮಡಿವಾಳ, ಉಪ್ಪಾರ ಮತ್ತು ಈಡಿಗ ಹಾಗೂ ಬಳಜಿಗ, ಕುರುಬ ಸಮುದಾಯಗಳ ಓಲೈಕೆಗೆ  ಮುಂದಾಗಿದ್ದಾರೆ.

ಕುರುಬ ಮುಖಂಡ  ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸಿ ಬಿ ಸುರೇಶ್ ಬಾಬು ಅವರು ತಡವಾಗಿ ಪ್ರಚಾರ ಪ್ರಾರಂಭಿಸಿದ್ದಾರೆ. 

ಜೆಡಿಎಸ್ ನಲ್ಲಿ ನಿರ್ಧಿಷ್ಟ ಜಾತಿಗೆ ಸ್ಟಾರ್ ಪ್ರಚಾರಕರಿಲ್ಲ, ಪಾವಗಡ ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ ಎಸ್ ಸಿ (ಎಡ) ಸಮುದಾಯಕ್ಕೆ ಸೇರಿದ್ದು ಪ್ರಚಾರದಲ್ಲಿ ತೊಡಗಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್,ಕೆ ಕುಮಾರಸ್ವಾಮಿ ಎಸ್ (ಬಲಗೈ) ಸಮುದಾಯಕ್ಕೆ ಸೇರಿದ್ದು ಪ್ರಚಾರದಲ್ಲಿ ಪಾಲ್ಗೊಂಡಿಲ್ಲ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಪುತ್ರರಾದ ಕುಮಾರಸ್ವಾಮಿ ಮತ್ತು ಎಚ್ ಡಿ ರೇವಣ್ಣ ಹಾಗೂ ಮೊಮ್ಮಕ್ಕಳಾದ ನಿಖಿಲ್ ಕುಮಾರ ಸ್ವಾಮಿ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ,

ತುಮಕೂರು ಗ್ರಾಮಾಂತರ ಶಾಸಕ ಡಿ,ಸಿ ಗೌರಿಶಂಕರ್ ಮತ್ತೊಬ್ಬ ಒಕ್ಕಲಿಗ ಮುಖಂಡರಾಗಿದ್ದಪು, ಕಳ್ಳಂಬೆಳ್ಳ ಹೋಬಳಿಯಲ್ಲಿ ಉತ್ತಮ ಮತ ತಂದುಕೊಂಡುವುದಾಗಿ ಭರವಸೆ ನೀಡಿದ್ದಾರೆ. ಇನ್ನೂ ಶಿರಾ ಮತ್ತು ಆರ್ ಆರ್ ನಗರ ಉಪ ಚುನಾವಣೆಗೆ ಸಮಾಜವಾದಿ ಪಕ್ಷ ಜೆಡಿಎಸ್ ಷರತ್ತು ರಹಿತ ಬೆಂಬಲ ಘೋಷಿಸಿದೆ.

SCROLL FOR NEXT