ರಾಜಕೀಯ

ಸಂಪುಟ ವಿಸ್ತರಣೆ: ಸಚಿವಗಿರಿಗಾಗಿ ಆರ್ ಎಸ್ಎಸ್, ಬಿಜೆಪಿ ನಾಯಕರತ್ತ ವಿಶ್ವನಾಥ್ ಚಿತ್ತ

Srinivasamurthy VN

ಮೈಸೂರು: ಭಾರಿ ಕುತೂಹಲ ಕೆರಳಿಸಿರುವ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್ ಸಿ ಎಹೆಚ್ ವಿಶ್ವನಾಥ್ ಅವರು ನೀಡಿರುವ ಹೇಳಿಕೆಯೊಂದು ಇದೀಗ ಭಾರಿ ಸುದ್ದಿಗೆ ಗ್ರಾಸವಾಗಿದೆ.

ಮುಂಬರುವ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಬಿಜೆಪಿಯಲ್ಲಿ ಎಂಎಲ್ ಸಿ ಸ್ಥಾನ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ವಿಶ್ವನಾಥ್ ಇದೀಗ ಸಂಭಾವ್ಯ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗುವ ಕನಸು ಕಾಣುತ್ತಿರುವ ಹಾಗಿದೆ. ಇದೇ ಕಾರಣಕ್ಕೆ ಶತ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. 

ಸಚಿವ ಸಂಪುಟ ವಿಚಾರವಾಗಿ ಚರ್ಚಿಸಲು ಸಿಎಂ ಬಿಎಸ್ ಯಡಿಯೂರಪ್ಪ ಅವರು ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಹಲವು ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸುತ್ತಿದ್ದಾರೆ. ಸಂಭಾವ್ಯ ಸಚಿವರ ಪಟ್ಟಿ ಸಿದ್ಧಮಾಡಲು ತಯಾರಿ ನಡೆಸಿದ್ದಾರೆ. ವಿಶ್ವನಾಥ್, ಎಂಪಿ ರೇಣುಕಾಚಾರ್ಯ ಸೇರಿದಂತೆ ಹಲವ ಸಚಿವ  ಗಿರಿ ಕುರಿತು ಬಿಎಸ್ ವೈ ದೆಹಲಿಯಲ್ಲಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಪೈಕಿ ಶಂಕರ್, ಎಂಟಿಬಿ ನಾಗರಾಜ್ ಮತ್ತು ವಿಶ್ವನಾಥ್ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಮೂಲಗಳ ಪ್ರಕಾರ ವಿಶ್ವನಾಥ್ ರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲು ಹಲವು ಆರ್ ಎಸ್ಎಸ್ ನಾಯಕರು ಒಲವು ತೋರಿದ್ದು, ವಿಶ್ವನಾಥ್ ಸೇರ್ಪಡೆ ಮೂಲಕ ಹಿಂದುಳಿದ ವರ್ಗ ಬೆಂಬಲ ಮತ್ತು ದಲಿತರು, ಸೂಕ್ಷ್ಮ ಸಮುದಾಯಗಳ ಬೆಂಬಲ ದೊರೆಯುತ್ತದೆ ಎಂದು ಹೇಳಲಾಗಿದೆ. 

SCROLL FOR NEXT