ರಾಜಕೀಯ

ಶಿರಾ ಕ್ಷೇತ್ರಕ್ಕೆ ವಿಜಯೇಂದ್ರ ಮೊದಲ ಭೇಟಿ: ಕೆಆರ್ ಪೇಟೆ ಉಪಚುನಾವಣೆ ತಂತ್ರ ಬಳಕೆಯ ಸುಳಿವು

Shilpa D

ತುಮಕೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ  ಮೊದಲ ಬಾರಿಗೆ ಶಿರಾ ಕ್ಷೇತ್ರಕ್ಕೆ ಸೋಮವಾರ ಭೇಟಿ ನೀಡಿದ್ದು ರಾಜಕೀಯ ವಲಯದಲ್ಲಿ ಹುಬ್ಬೇರುವಂತೆ ಮಾಡಿದೆ.

ಶಿರಾ ಉಪಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ, ಶಿರಾಗೆ ಭೇಟಿ ನೀಡಿದ್ದ ವಿಜಯೇಂದ್ರರನ್ನು ಪಕ್ಷದ ಕಾರ್ಯಕರ್ತರು ಅಪಾರ ಪ್ರಮಾಣದಲ್ಲಿ ಬಂದು ಭೇಟಿಯಾದರು.

ಕುಂಚಿಟಿಗ  ಸಮುದಾಯದ ಧರ್ಮಗುರು ಶ್ರೀ ನಂಜಾವಧೂತ ಸ್ವಾಮೀಜಿಯನ್ನು ಭೇಟಿ ಮಾಡಿದ ವಿಜಯೇಂದ್ರ ಅವರ ಆಶೀರ್ವಾದ ಪಡೆದರು. ನಂತರ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು  ಭೇಟಿ ಮಾಡಿದರು, ಇವರ ಜೊತೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ ಸುರೇಶ್ ಗೌಡ ಅವರು ಜೊತೆಗಿದ್ದರು. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೇ ಕ್ಷೇತ್ರದ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

ಕೆ.ಆರ್ ಪೇಟೆ ಉಪಚುನಾವಣೆಗೆ ಅನುಸರಿಸಿದ ಮಾರ್ಗವನ್ನು  ಶಿರಾ ಉಪಚುನಾವಣೆಯಲ್ಲಿ ಪಕ್ಷ ಕಾರ್ಯತಂತ್ರವು ಇರುತ್ತದೆ ಎಂದು ವಿಜಯೇಂದ್ರ ಸುಳಿವು ನೀಡಿದರು, ಕೆಆರ್ ಪೇಟೆ ಕ್ಷೇತ್ರದಲ್ಲಿ ಕೆಸಿ ನಾರಾಯಣಗೌಡ ರಾಜಿನಾಮೆ ನೀಡಿದ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದರು. ನಂತರ ಬಿಜೆಪಿ ಟಿಕೆಟ್ ಪಡೆದು ಗೆದ್ದಿದ್ದರು.

ಜೆಡಿಎಸ್ ಭದ್ರಕೋಟೆ ಕೆಆರ್ ಪೇಟೆಯಲ್ಲಿ ಬಿಜೆಪಿ ಗೆಲುವು ಅಸಾಧ್ಯ ಎಂದು ಹೇಳಲಾಗುತ್ತಿತ್ತು, ಆದರೆ ನಮ್ಮ ಅವಿರತ ಪ್ರಯತ್ನದಿಂದಾಗಿ ನಾವು ಕೆಆರ್ ಪೇಟೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆವು.

ಆರ್ ಅಶೋಕ, ಆನಂದ್ ಸಿಂಗ್ ಮತ್ತು ಎಸ್ ಘಟಕದ ಚಲವಾದಿ ನಾರಾಯಣ ಸ್ವಾಮಿ ಮತ್ತು ವಿಜಯೇಂದ್ರ  ಪಕ್ಷದ ಕಾರ್ಯಕರ್ತರ ಜೊತೆ ಚರ್ಚಿಸಿದ್ದೆವು.  ಅದೇ ರೀತಿ ಶಿರಾದಲ್ಲೂ ಕೂಡ ಬಿಜೆಪಿ ತನ್ನ ಖಾತೆ ತೆರೆಯಲಿದೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ.

SCROLL FOR NEXT