ರಾಜಕೀಯ

ಕೊರೋನಾ ಹೆಸರಿನಲ್ಲಿ ಲೂಟಿ, ಸರ್ಕಾರ ಏನು ಮಾಡುತ್ತಿದೆ?: ಆಡಳಿತ ಪಕ್ಷದ ಶಾಸಕ ಯತ್ನಾಳ್ ಪ್ರಶ್ನೆ

Lingaraj Badiger

ಬೆಂಗಳೂರು: ಕೊರೋನಾ ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೆಪದಲ್ಲಿ ಲೂಟಿ ಹೊಡೆಯುತ್ತಿವೆ ಸರ್ಕಾರ, ಆರೋಗ್ಯ ಇಲಾಖೆ ಏನು ಮಾಡುತ್ತಿದೆ? ಎಂದು ಆಡಳಿತ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಶ್ನೆ ಮಾಡಿದ್ದಾರೆ.

ಇಂದು ವಿಧಾನಸಭೆಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಸಂತಾಪ ನಿರ್ಣಯ ಚರ್ಚೆಯ ಮೇಲೆ ಮಾತನಾಡಿದ ಯತ್ನಾಳ್, ತಮ್ಮ ಅನಭವವನ್ನು ಎಳೆ, ಎಳೆಯಾಗಿ ಕೇಲವೇ ನಿಮಿಷದಲ್ಲಿ ಸದನ ಮುಂದೆ ಬಿಚ್ಚಿಟ್ಟರು. ನನಗೆ ಹೀಗಾದರೆ ಜನ ಸಾಮಾನ್ಯರ ಪಾಡೆನು? ಸರ್ಕಾರ, ಆರೋಗ್ಯ ಇಲಾಖೆ ಏನು ಮಾಡುತ್ತಿದೆ ಎಂದರು. 

ಬಸವನಗೌಡ ಪಾಟೀಲ್ ಯತ್ನಾಳ್, ಸುರೇಶ್ ಅಂಗಡಿ ನಿಧನದಿಂದ ಆಘಾತಗೊಂಡಿದ್ದೇನೆ. ಏಮ್ಸ್ ನಂತಹ ದೊಡ್ಡ ಸಂಸ್ಥೆಯಲ್ಲಿಯೇ ಅವರ ಜೀವ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರೆ ನಾವು ಕೋವಿಡ್ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ವಾರಕ್ಕೆ ಎರಡು ಬಾರಿ ಲಾಕ್ ಡೌನ್ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.

ತಮಗೆ ಕೊರೊನಾ ಬಂದಾಗ ಖಾಸಗಿ ಆಸ್ಪತ್ರೆಯೊಂದು 3.80 ಲಕ್ಷ ಮೂರು ದಿನಕ್ಕೆ ಬಿಲ್ ಮಾಡಿದೆ. ಶಾಸಕರಾದ ನಮಗೇ ಇಷ್ಟು ಬಿಲ್ ಮಾಡಿದ್ದರೆ ಜನಸಾಮಾನ್ಯರ ಪಾಡೇನು? ಬೇಕಾಬಿಟ್ಟಿಯಾಗಿ ಖಾಸಗಿ ಆಸ್ಪತ್ರೆಗಳು ಹಣ ವಸೂಲಿ ಮಾಡುತ್ತಿವೆ. ಸರ್ಕಾರ ಏನು ಮಾಡುತ್ತಿದೆ? ಇಂತಹ ಆಸ್ಪತ್ರೆಗಳ ಮೇಲೆ ಸರ್ಕಾರಕ್ಕೆ ಯಾವ ನಿಯಂತ್ರಣವಿದೆ ? ಎಂದು ಪ್ರಶ್ನಿಸಿದರು.

SCROLL FOR NEXT