ರಾಜಕೀಯ

ಬಿಜೆಪಿಯಿಂದ ಮುನಿರತ್ನಗೆ ಟಿಕೆಟ್ ಅನುಮಾನ: ಡಿ.ಕೆ.ಸುರೇಶ್

Lingaraj Badiger

ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಉಪಚುನಾವಣೆಗೆ ಬಿಜೆಪಿಯಿಂದ ಮುನಿರತ್ನಗೆ ಟಿಕೆಟ್ ಸಿಗುವುದು ಅನುಮಾನ ಎಂದು ಕಾಂಗ್ರೆಸ್ ಸಂಸದ ಡಿ.ಕೆ‌.ಸುರೇಶ್ ಭವಿಷ್ಯ ನುಡಿದಿದ್ದಾರೆ.

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತದಾರರು ಬದಲಾವಣೆಯಾಗಿಲ್ಲ. ಮತದಾರರು ಎಲ್ಲಿಯೂ ಹೋಗಿಲ್ಲ. ಮತದಾರರು ಪಕ್ಷದ ಪರವಾಗಿಯೇ ಇದ್ದಾರೆ. ಅಲ್ಲಿ ಉಂಡು ಹೋದ ಕೊಂಡು‌ಹೋದ ಎನ್ನುವಂತಾಗಿದೆ. ಮುನಿರತ್ನ ನನ್ನ ವೈರಿಯಲ್ಲ. ಬಿಜೆಪಿ ನಮ್ಮ‌ ವೈರಿ. ಮುನಿರತ್ನಗೆ ಟಿಕೆಟ್ ಸಿಗುವುದು ಅನುಮಾನ‌. ಅಚ್ಚರಿಯನ್ನು ಕಾದು ನೋಡಿ ಏನಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು‌.

ಉಪಚುನಾವಣೆಗೆ ದಿನಾಂಕ‌ ಘೋಷಣೆಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಬಗ್ಗೆ ಪಕ್ಷದ ನಾಯಕರು ಸಭೆ ನಡೆಸಿ ಚರ್ಚಿಸಿ ಹೈಕಮಾಂಡ್‌ಗೆ ಅದನ್ನು ಕಳುಹಿಸುತ್ತಾರೆ‌. ಸಮರ್ಥವಾಗಿ ಕೆಲಸ ಮಾಡುವವರನ್ನು ಕಣಕ್ಕಿಳಿಸುತ್ತೇವೆ. ಜೆಡಿಎಸ್ ನವರು ನನ್ನ ಜೊತೆ ಚೆನ್ನಾಗಿದ್ದಾರೆ ಎಂದರು.

ಆರ್ ಆರ್ ನಗರದಿಂದ ಮಾಗಡಿ ಬಾಲಕೃಷ್ಣ ಅವರು ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಸುರೇಶ್ ಅವರು, ಹಲವರ ಹೆಸರು ಚರ್ಚೆಯಾಗುತ್ತಿದೆ. ಸದ್ಯಕ್ಕೆ ಹೈಕಮಾಂಡ್ ಅಂತಿಮಗೊಳಿಸುವವರೆಗೆ ಇಂತಹವರೇ ಅಭ್ಯರ್ಥಿ ಎಂದು ಹೇಳುವುದಕ್ಕೆ ಆಗುವುದಿಲ್ಲ ಎಂದರು.

ಇನ್ನು ಬೆಂಗಳೂರು ಉಗ್ರರ ಹಬ್ ಎಂಬ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಕಿಡಿಕಾರಿದ ಡಿಕೆ ಸುರೇಶ್, ಬೆಂಗಳೂರು ಕಾಸ್ಮೋಪಾಲಿಟನ್  ಸಿಯಾಗಿದ್ದು, ಇಲ್ಲಿ ಎಲ್ಲರೂ ಇದ್ದಾರೆ. ಉಗ್ರರ ಹಬ್ ಎನ್ನುವ ಹೇಳಿಕೆಯನ್ನು ತೇಜಸ್ವಿ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

SCROLL FOR NEXT