ರಾಜಕೀಯ

ಬಸವಕಲ್ಯಾಣ ಉಪಚುನಾವಣೆ: ಕಾಂಗ್ರೆಸ್-ಬಿಜೆಪಿ ನಡುವೆ ನೇರಸ್ಪರ್ಧೆ!

Shilpa D

ಬಸವಕಲ್ಯಾಣ: ಇಂದು ಬೆಳಗ್ಗೆಯಿಂದ ಸಂಜೆ 7ರವರೆಗೆ ನಡೆಯುವ ಬಸವಕಲ್ಯಾಣ ಉಪ ಚುನಾವಣೆ ಮತದಾನಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಮುಂಜಾನೆಯೇ ಬಸವ ಕಲ್ಯಾಣಕ್ಕೆ ಆಗಮಿಸಿದ ಬೀದರ್ ತಾಲೂಕಿನ ಚುನಾವಣಾಧಿಕಾರಿಗಳುಮಸ್ಟರಿಂಗ್ ಪ್ರಕ್ರಿಯೆಯಲ್ಲಿ ತೊಡಗಿದ್ದರು. ನಂತರ ತಮಗೆ ವಹಿಸಿದ ಬೂತ್ ಗಳಿಗೆ ತೆರಳಿದ್ದಾರೆ.

ಎಲ್ಲಾ, 1,568 ಸಿಬ್ಬಂದಿಗಳು, ಅಧ್ಯಕ್ಷರು, ಸಹಾಯಕ ಅಧ್ಯಕ್ಷರು, ಮತಗಟ್ಟೆ ಅಧಿಕಾರಿಗಳು ಮತ್ತು 26 ವಲಯದ ಅಧಿಕಾರಿಗಳು ಸೇರಿದಂತೆ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಕ್ಷೇತ್ರದ 326 ಮತದಾನ ಕೇಂದ್ರಗಳಲ್ಲಿ 95 ಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಹೆಚ್ಚುವರಿ ಭದ್ರತೆ ಹೆಚ್ಚಿಸಲಾಗಿದೆ. ಈ ಕ್ಷೇತ್ರದಲ್ಲಿ 23,9782 ಮತದಾರರು ಇದ್ದಾರೆ - 1,24,984 ಪುರುಷರು, 1,14,794 ಮಹಿಳೆಯರಿದ್ದಾರೆ.

ಇದರಲ್ಲಿ 3,547 ಮೊದಲ ಬಾರಿಗೆ ಮತದಾರರು ಸೇರಿದ್ದಾರೆ - 1,384 ಪುರುಷರು ಮತ್ತು 2,163 ಮಹಿಳೆಯರು. ಒಟ್ಟು 12 ಅಭ್ಯರ್ಥಿಗಳು ಬಿಜೆಪಿಯ ಶವರಣ ಸಾಲಗಾರ್, ಕಾಂಗ್ರೆಸ್ ನ ಮಾಲಾ ಬಿ ನಾರಾಯಣ ರಾವ್, ಜೆಡಿಎಸ್ ನ ಸೈಯದ್ ಯಸ್ರಾಬ್ ಅಲಿ ಖಾದ್ರಿ ಮತ್ತು ಸ್ವತಂತ್ರ ಅಭ್ಯರ್ಥಿ ಮಲ್ಲಿಕಾರ್ಜುನ್ ಖುಬಾ ಕಣದಲ್ಲಿದ್ದಾರೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವ ನೇರ ಹಣಾಹಣಿ ಏರ್ಪಟ್ಟಿದೆ.

SCROLL FOR NEXT