ಬೊಮ್ಮಾಯಿ, ಸವದಿ, ಕಾರಜೋಳ 
ರಾಜಕೀಯ

'ಜನತಾ ಪರಿವಾರ' ದಿಂದ ಬಂದವರಿಗೆ ಮಣೆ: ಪಕ್ಷ ನಿಷ್ಠರ ಕಡೆಗಣನೆ; ಸಂಘಪರಿವಾರದ ನಾಯಕರು ಮೂಲೆಗುಂಪು?

ಬೊಮ್ಮಾಯಿ ಮುಖ್ಯಮಂತ್ರಿ ಆಗುವುದರ ಮೂಲಕ ಇಂತಹ ಚರ್ಚೆಗಳು ಆರಂಭವಾಗಿವೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಬಿಟ್ಟು ಹೊರಗಿನಿಂದ ಬಂದವರಿಗೆ ಪ್ರಮುಖ ಹುದ್ದೆಗಳನ್ನು ನೀಡುತ್ತಿರುವುದು, ಆರ್ ಎಸ್ ಎಸ್ ತತ್ವಸಿದ್ಧಾಂತಗಳಿಗೆ ಬದ್ಧವಾಗಿರುವ ಮೂಲ ಬಿಜೆಪಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಬೆಂಗಳೂರು: 2008 ರ ವಿಧಾನಸಭೆ ಚುನಾವಣೆ ವೇಳೆ ಹೊರಗಿನವರು ಮತ್ತು ಒಳಗಿನವರು ಎಂಬ ಮಾತು ಕೇಳಿ ಬಂತು, ಅದಾದ ನಂತರ 2019ರಲ್ಲಿ ಮೂಲ ಮತ್ತು ವಲಸಿಗರು ಎಂದು ವಾಕ್ಸಮರ ನಡೆದಿತ್ತು.

ಸದ್ಯ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗುವುದರ ಮೂಲಕ ಇಂತಹ ಚರ್ಚೆಗಳು ಆರಂಭವಾಗಿವೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಬಿಟ್ಟು ಹೊರಗಿನಿಂದ ಬಂದವರಿಗೆ ಪ್ರಮುಖ ಹುದ್ದೆಗಳನ್ನು ನೀಡುತ್ತಿರುವುದು, ಆರ್ ಎಸ್ ಎಸ್ ತತ್ವಸಿದ್ಧಾಂತಗಳಿಗೆ ಬದ್ಧವಾಗಿರುವ ಮೂಲ ಬಿಜೆಪಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಸಾರ್ವಜನಿಕ ವಲಯದಲ್ಲಿ ಈ ರೀತಿಯ ಚರ್ಚೆ ನಡೆಯತ್ತಿದ್ದು, ಸಾಮೂಹಿಕ ಸಂದೇಶ ಅಪ್ಲಿಕೇಶನ್‌ಗಳು ಪಕ್ಷದ ನಿಷ್ಠಾವಂತರು ವ್ಯಕ್ತಪಡಿಸಿದ ಅಸಮಾಧಾನವನ್ನು ಪ್ರಸಾರ ಮಾಡುವ ಮಾಧ್ಯಮವಾಗುತ್ತಿವೆ.

ನೂತನವಾಗಿ ನೇಮಕವಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ಜನತಾ ಪರಿವಾರದಿಂದ ಬಂದವರು, ಯಡಿಯೂರಪ್ಪ ಅವಧಿಯಲ್ಲಿ ಉಪಮುಖ್ಯಮಂತ್ರಿಗಳಾಗಿದ್ದ ಲಕ್ಷ್ಮಣ ಸವದಿ ಮತ್ತು ಗೋವಿಂದ ಕಾರಜೋಳ ಅವರು ಕೂಡ ಜನತಾ ಪರಿವಾರದಿಂದ ಬಂದವರು ಎಂಬ ಸಾಲುಗಳು ವಾಟ್ಸಾಪ್ ನಲ್ಲಿ ಹರಿದಾಡುತ್ತಿವೆ. ಜನತಾ ಪರಿವಾರದ ನಾಯಕರು ನಿಧಾನವಾಗಿ ಸಂಘ ಪರಿವಾರದ ಮುಖಂಡರನ್ನು ಪಕ್ಷದಿಂದ ಆಚೆ ತಳ್ಳುತ್ತಿದ್ದಾರೆ ಎಂಬ ಸಂದೇಶ ವೈರಲ್ ಆಗುತ್ತಿದೆ.

ಪಕ್ಷ ನಿಷ್ಠರನ್ನು ಕಡೆಗಣಿಸಲಾಗುತ್ತಿದೆ, ಬೇರೆ ಪಕ್ಷದಿಂದ ಬಂದವರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುವ ಜೊತೆಗೆ ಮಹತ್ವದ ಹುದ್ದೆ ಮತ್ತು ಜವಾಬ್ದಾರಿಗಳನ್ನು ನೀಡಲಾಗುತ್ತಿದೆ. 

ಭಿನ್ನಮತೀಯ ಸಂದೇಶವು ಬಿಜೆಪಿಯ ಮೂಲ ತತ್ವಗಳು ಹಿಂದುತ್ವ, ಹಿಂದೂ ಮತಗಳು, ಹಿಂದೂ ಧರ್ಮದ ರಕ್ಷಣೆ, ಹಿಂದೂ ರಾಷ್ಟ್ರದ ಸಾಕ್ಷಾತ್ಕಾರ ರಾಷ್ಟ್ರೀಯತೆಯಲ್ಲಿದೆ ಮತ್ತು ಇತರ ಪಕ್ಷಗಳಿಂದ ಬಂದ ಜನರಿಗೆ ಆದ್ಯತೆ ನೀಡುವುದು ಅದರ ತತ್ವಗಳಿಗೆ ಧಕ್ಕೆ ತರುತ್ತಿದೆ ಎಂದು ಹೇಳಲಾಗುತ್ತಿದೆ.

ಪಕ್ಷದ ಹಿರಿಯರಿಗೆ ಅತೃಪ್ತಿಯ ಬಗ್ಗೆ ಚೆನ್ನಾಗಿ ತಿಳಿದಿದೆ ಮತ್ತು ಕ್ಯಾಬಿನೆಟ್ ರಚನೆಯು ಎಲ್ಲಾ ಅನುಮಾನಗಳನ್ನು ನಿವಾರಿಸುತ್ತದೆ ಎಂದು ಆಶಿಸುತ್ತಿದ್ದಾರೆ. 

ಕೇಡರ್ ಹೆಚ್ಚು ಭಾವನಾತ್ಮಕವಾಗಿದೆ. ಅವರಿಗೆ ರಾಜಕೀಯ ಆಯ್ಕೆಗಳು ಅರ್ಥವಾಗುವುದಿಲ್ಲ. ಪಕ್ಷ ಮತ್ತು ಅದರ ಸಿದ್ಧಾಂತಕ್ಕೆ ಬದ್ಧರಾಗಿರುವ ಯಾರಾದರೂ ವ್ಯವಹಾರಗಳ ಚುಕ್ಕಾಣಿ ಹಿಡಿಯಬೇಕೆಂದು ಅವರು ಬಯಸುತ್ತಾರೆ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಬಸವರಾಜ ಕ್ಯಾಬಿನೆಟ್ ರಚನೆ ಮತ್ತು  ನಿಗಮ-ಮಂಡಳಿಗಳ ನೇಮಕಾತಿ ಭವಿಷ್ಯದಲ್ಲಿ ಭುಗಿಲೇಳಬಹುದಾದ ಯಾವುದೇ ಭಿನ್ನಾಭಿಪ್ರಾಯದ ಮುನ್ಸೂಚನೆಯಾಗಿದೆ ಎಂದು ಹೇಳಿದ್ದಾರೆ. ಜನತಾದಳ ತೊರೆದು ಕಾಂಗ್ರೆಸ್ ಸೇರಿದ್ದ ಸಿದ್ದರಾಮಯ್ಯ 2013 ರಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉಂಟಾಗಿದ್ದ ಭಾವನೆ ಸದ್ಯ ಬಿಜೆಪಿ ಪಾಳಯದಲ್ಲೂ ಮೂಡಿದೆ ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT