ಜಮೀರ್ ಅಹ್ಮದ್ ಖಾನ್ 
ರಾಜಕೀಯ

ನನ್ನದು 100ರ ವೇಗವೇ ಹೊರತು 90 ಸ್ಪೀಡ್ ಅಲ್ಲ: ಜಮೀರ್ ಅಹ್ಮದ್

ನನ್ನದು 100ರ ವೇಗವೇ ಹೊರತು 90 ಸ್ಪೀಡ್ ಅಲ್ಲ, ಜಮೀರ್ ನನ್ನು ಕಟ್ಟಿಹಾಕಬಹುದೆಂದು ಯಾರಾದರೂ ಭಾವಿಸಿದ್ದರೆ ಅದು ಸಾಧ್ಯವಿಲ್ಲ ಎಂದು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.

ಬೆಂಗಳೂರು: ನನ್ನದು 100ರ ವೇಗವೇ ಹೊರತು 90 ಸ್ಪೀಡ್ ಅಲ್ಲ, ಜಮೀರ್ ನನ್ನು ಕಟ್ಟಿಹಾಕಬಹುದೆಂದು ಯಾರಾದರೂ ಭಾವಿಸಿದ್ದರೆ ಅದು ಸಾಧ್ಯವಿಲ್ಲ ಎಂದು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಇಡಿ ದಾಳಿ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಜಮೀರ್,  ದಾಳಿ ನಡೆಸುವ ಬಗ್ಗೆ ನೋಟಿಸ್ ಆಗಲೀ, ಎಫ್.ಐ.ಆರ್ ಆಗಲೀ ಇರಲಿಲ್ಲ. ಆದರೆ ನಿರೀಕ್ಷೆ ಇಟ್ಟುಕೊಂಡು ದಾಳಿ ಮಾಡಿಸಿದವರಿಗೆ ನಿರಾಸೆಯಾಗಿದೆ. ಯಾವುದೇ ನೋಟಿಸ್ ನೀಡದೇ ದಾಳಿ ಮಾಡಿದಾಗ ಅಚ್ಚರಿಗೊಂಡು ಆ ಬಗ್ಗೆ ಕೇಳಿದೆ. ಐಟಿ ಅವರು ಬರಬೇಕಿತ್ತು ಆದರೆ ನೀವು ಏಕೆ ಬಂದಿದ್ದೀರಿ ಎಂದು ಕೇಳಿದಾಗ ದೂರು ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿರುವುದಾಗಿ ಹೇಳಿದರು. ಅವರಿಗೆ ಸಹಕಾರ ನೀಡುವುದು ನಮ್ಮ ಜವಾಬ್ದಾರಿ. ಹೀಗಾಗಿ ಇಡಿಯವರಿಗೆ ಮನೆ ವಿವರ, ಖರ್ಚುವೆಚ್ಚ ಕಾಮಗಾರಿ ವಿವರ ಮನೆ ದಾಖಲೆ ಕೇಳಿದಾಗ ನೀಡಿದ್ದೇನೆ. ಬ್ಯಾಂಕಿನಲ್ಲಿ ಪ್ಲೆಡ್ಜ್ ಇಟ್ಟಿದ್ದು,ನಂತರ ಕೊಡುವುದಾಗಿ ಹೇಳಿದ್ದೇನೆ ಎಂದರು.

ದುಬಾರಿ ಮನೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಮೀರ್ ಅಹ್ಮದ್, ಮನೆ ಕಟ್ಟಬಾರದು ಎಂದು ಎಲ್ಲಿಯಾದರೂ ಇದೆಯೇ? ಯಾರ ತಲೆ ಒಡೆದು ಮಾಡಿದ್ದೇನೆಯೇ? ಮನೆ ಕಟ್ಟಿದ್ದಕ್ಕೆ ಈ ರೀತಿ ಮಾಡಿದ್ದಾರೆ. ದೇವರು ಇವರಿಗೆ ಒಳ್ಳೆಯದು ಮಾಡುತ್ತಾನೆಯೇ? ಹೆಚ್.ಡಿ.ಕುಮಾರಸ್ವಾಮಿ ಹೆಸರನ್ನು ನಾನು ಎಲ್ಲಿಯಾದರೂ ಹೇಳಿದ್ದೀನಾ ಎಂದು ಪ್ರಶ್ನಿಸಿದ ಜಮೀರ್ ಅಹ್ಮದ್, ಕುಮಾರಸ್ವಾಮಿ ಹೀಗೆ ದೂರು ತಾವು ಕೊಟ್ಟಿಲ್ಲವೆಂದು ನಾನು ಹೇಳದಿದ್ದರೂ ಇವರಾಗಿಯೇ ಹೇಳಿದ್ದನ್ನು ನೋಡಿದರೆ ಕುಮಾರಸ್ವಾಮಿ ಅವರ ಮೇಲೆ ಅನುಮಾನ ಮೂಡುತ್ತಿದೆ ಎಂದು ಹೇಳಿದರು.

ಐಎಂಎಗೆ ಭೂಮಿ ಮಾರಿದ್ದು, ಅದರ ಸಂಪೂರ್ಣ ವಿವರವನ್ನು ಈ ಹಿಂದೆ 2019 ರಲ್ಲಿಯೇ ನೀಡಿದ್ದೆ. ನಮ್ಮ ವಿರುದ್ದ ಇಡಿಗೆಲ್ಲ, ಐಟಿಗೆಲ್ಲ ದೂರು ಕೊಟ್ಟಿದ್ದಾರಂತೆ. ಅವರ ಕುಟುಂಬಕ್ಕೆ ಒಳ್ಳೆದಾಗಲೀ ನನ್ನ ಕುಟುಂಬ ಹಾಳಾಗಲಿ, ಬೀದಿಗೆ ಬರಲಿ. ನನ್ನ ವಿರುದ್ಧ ಯಾರು ರೀತಿ ಮಾಡಿದ್ದಾರೋ ಆ ಕುಟುಂಬಕ್ಕೆ ಹೇಳುತ್ತಿದ್ದೇನೆ. ರಾಜಕೀಯ ಮಾಡಲಿ. ಆದರೆ ಮನೆ ವಿಚಾರಕ್ಕೂ ಹೀಗೆ ರಾಜಕೀಯ ಮಾಡುತ್ತಾರೆ ಎಂದರೆ ಅದು ಸರಿಯಲ್ಲ. 15 ದಿನಗಳ ಕಾಲಾವಕಾಶ ಕೊಟ್ಟರೆ ಯಾರು ಮಾಡಿದ್ದಾರೆ ಎಂದು ದಾಖಲೆ ಸಹಿತ ಬಹಿರಂಗ ಪಡಿಸುತ್ತೇನೆಂದು ಮಾಧ್ಯಮದವರನ್ನುದ್ದೇಶಿಸಿ ಜಮೀರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT