ರಾಜಕೀಯ

ವಾಜಪೇಯಿ ಅವರು ಹೆವಿ ಡ್ರಿಂಕರ್, ದಿನ ಸಂಜೆ ಎರಡು ಪೆಗ್ ಬೇಕಿತ್ತು; ದೇಶಕ್ಕೆ ಸಾವರ್ಕರ್ ಕೊಡುಗೆ ಏನು?

Shilpa D

ಕಲಬುರಗಿ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ, ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ನಾಲಗೆ ಹರಿಬಿಟ್ಟಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರು ಹೆವಿ ಡ್ರಿಂಕರ್ ಆಗಿದ್ದರು, ಪ್ರತಿದಿನ ಸಂಜೆ ಅವರಿಗೆ ಎರಡು ಪೆಗ್ ಡ್ರಿಂಕ್ಸ್ ಬೇಕಾಗಿತ್ತು, ಹಾಗಂತ ಬಾರ್ ಗೆ ವಾಜಪೇಯಿ ಹೆಸರಿಡುತ್ತಾರೆಯೆ ಎಂದು ಪ್ರಶ್ನಿಸಿದ್ದಾರೆ. 

ಇನ್ನೂ ಮುಂದುವರಿದು ಮಾತನಾಡಿರುವ ಅವರು ದೇಶಕ್ಕೆ ವೀರ ಸಾವರ್ಕರ್ ಕೊಡುಗೆ ಏನು, ಫ್ಲೈ ಓವರ್ ಗೆ ಸಾವರ್ಕರ್ ಹೆಸರು ಇಡುವ ಬದಲು ಬಾರ್ ಗೆ ಸಾವರ್ಕರ್ ಬಾರ್ ಎಂದು ಇಡುತ್ತಾರೆಯೇ ಎಂದು ವ್ಯಂಗ್ಯವಾಡಿದ್ದಾರೆ.

ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವ ಸಂಬಂಧ ಸಿಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಇತಿಹಾಸ ಗೊತ್ತಿಲ್ಲದವರು ಮಂತ್ರಿಯಾದರೇ ಇದೇ ಆಗುವುದು ಎಂದು ಲೇವಡಿ ಮಾಡಿದ್ದಾರೆ. ಗೋಡ್ಸೆಯನ್ನು ನಂಬುವ ಇವರು ಮಹಾತ್ಮ ಗಾಂಧಿಯನ್ನು ನಂಬುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

SCROLL FOR NEXT