ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಗನ್ ಬಳಕೆ 
ರಾಜಕೀಯ

ಬಿಜೆಪಿಗೂ ತಾಲಿಬಾನಿಗೂ ಬಹಳ ನಂಟು; ಕಂದಾಹಾರ್ ಗೆ ವಿಮಾನ ಕಳುಹಿಸಿ ಉಗ್ರರಿಗೆ ರಾಜಮಾರ್ಯಾದೆ ಬೀಳ್ಕೊಡುಗೆ: ಕಾಂಗ್ರೆಸ್ ಕಿಡಿ

ಬಾಬುರಾವ್ ಚಿಂಚನಸೂರ್ ರ ಗುಂಡು ಹಾರಿಸಿದ ಪ್ರಕರಣದ ವಿಚಾರವಾಗಿ ಆಡಳಿತಾರೂಢ ಬಿಜೆಪಿ ಸರ್ಕಾರ ಮತ್ತು ಆರ್ ಎಸ್ಎಸ್ ವಿರುದ್ಧ ಕಾಂಗ್ರೆಸ್ ತೀವ್ರ ಕಿಡಿಕಾರಿದ್ದು, ಬಿಜೆಪಿಗೂ ತಾಲಿಬಾನಿಗೂ ಬಹಳ ನಂಟಿದೆ ಎಂದು ಹೇಳಿದೆ.

ಬೆಂಗಳೂರು: ಬಾಬುರಾವ್ ಚಿಂಚನಸೂರ್ ರ ಗುಂಡು ಹಾರಿಸಿದ ಪ್ರಕರಣದ ವಿಚಾರವಾಗಿ ಆಡಳಿತಾರೂಢ ಬಿಜೆಪಿ ಸರ್ಕಾರ ಮತ್ತು ಆರ್ ಎಸ್ಎಸ್ ವಿರುದ್ಧ ಕಾಂಗ್ರೆಸ್ ತೀವ್ರ ಕಿಡಿಕಾರಿದ್ದು, ಬಿಜೆಪಿಗೂ ತಾಲಿಬಾನಿಗೂ ಬಹಳ ನಂಟಿದೆ ಎಂದು ಹೇಳಿದೆ.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'RSS ಮತ್ತು ಬಿಜೆಪಿಗೂ ತಾಲಿಬಾನಿಗೂ ಬಹಳ ನೆಂಟಸ್ತಿಕೆ, ಕಟ್ಮಂಡು ವಿಮಾನ ಅಪಹರಣ ಪ್ರಕರಣದಲ್ಲಿ ಅಮೃತಸರದಲ್ಲಿ ಲ್ಯಾಂಡ್ ಆಗಿದ್ದ ವಿಮಾನವನ್ನು ತಾಲಿಬಾನಿಗಳಿಗೆ ಅನುಕೂಲವಾಗಲೆಂದು ಕಂದಹಾರ್‌ಗೆ ಕಳಿಸಿಕೊಟ್ಟು, ಮೂವರು ತಾಲಿಬಾನ್  ಉಗ್ರರನ್ನು ರಾಜಮರ್ಯಾದೆಯಲ್ಲಿ ಬಿಟ್ಟು ಕಳಿಸಿದ್ದು ಇದೇ ತಾಲಿಬಾನಿ ಬಿಜೆಪಿ. ಇಬ್ಬರೂ ಒಂದೇ ದಾರಿಯ ಪಯಣಿಗರಲ್ಲವೇ, ಹಾಗಾಗಿ...' ಎಂದು ಹೇಳಿದೆ.

ಮತ್ತೊಂದು ಟ್ವೀಟ್ ನಲ್ಲಿ, 'ಮಲೆಗಾವ್ ಬಾಂಬ್ ಸ್ಫೋಟದ ರೂವಾರಿಯಾದ ಭಯೋತ್ಪಾದಕಿಯನ್ನು ಸಂಸದೆ ಮಾಡಿ ಬಿಜೆಪಿ ತನ್ನ ತಾಲಿಬಾನ್ ಮನಸ್ಥಿತಿಯನ್ನ ಜಾಹೀರುಪಡಿಸಿದೆ. ನೇಣುಗಂಬಕ್ಕೆ ಏರಬೇಕಾದಾಕೆಯನ್ನ ಪವಿತ್ರ ಸಂಸತ್ತಿನೊಳಗೆ ಕರೆತಂದು ಪ್ರಜಾಪ್ರಭುತ್ವಕ್ಕೆ, ಸಂಸತ್ತಿಗೆ ಐತಿಹಾಸಿಕ ಕಪ್ಪುಚುಕ್ಕೆ  ಇಟ್ಟಿದ್ದು ಇದೇ ತಾಲಿಬಾನಿಬಿಜೆಪಿ. ಈ ಎರೆಡೂ ಬಗೆಯ ಮೂಲಭೂತವಾದಿಗಳದ್ದು ಒಂದೇ ರಕ್ತ! ಎಂದು ಹೇಳಿದೆ.

ಬಾಬುರಾವ್ ಚಿಂಚನಸೂರ್ ರ ಗುಂಡು ಹಾರಿಸಿದ ಪ್ರಕರಣದ ವಿಚಾರವಾಗಿ ಆಡಳಿತಾರೂಢ ಬಿಜೆಪಿ ಸರ್ಕಾರ ಮತ್ತು ಆರ್ ಎಸ್ಎಸ್ ವಿರುದ್ಧ ಕಾಂಗ್ರೆಸ್ ತೀವ್ರ ಕಿಡಿಕಾರಿದ್ದು, 'ಗುಂಡು ಹಾರಿಸಿದ ಪ್ರಕರಣದಲ್ಲಿ ದೊಡ್ಡವರನ್ನು ರಕ್ಷಿಸಿ, ಅಮಾಯಕರನ್ನ ಬಲಿ ಕೊಡುತ್ತಿದೆ ಸರ್ಕಾರ. ಕಾರ್ಯಕ್ರಮದ ಆಯೋಜಕರು, ಮಾಜಿ  ಸಚಿವ, ಕೇಂದ್ರ ಸಚಿವರನ್ನ ಬಿಟ್ಟು ಕಾರ್ಯಕರ್ತರ ಮೇಲೆ ಕೇಸ್ ಹಾಕಿದೆ, ಅನುಮತಿ ನೀಡಿದ ಪೊಲೀಸ್ ಅಧಿಕಾರಿಗಳನ್ನ ಬಿಟ್ಟು ಪೇದೆಗಳನ್ನ ಅಮಾನತು ಮಾಡಿದೆ? ತಾಲಿಬಾನಿಬಿಜೆಪಿ ಆಡಳಿತದಲ್ಲಿ ಕಾನೂನು ಕಡಲೆಬೀಜದಂತಾಗಿದೆ!.. ಗುಂಡು ಹಾರಿಸಿದ್ದನ್ನು ಸಮರ್ಥಿಸಿಕೊಂಡ ಗೃಹಸಚಿವರೇ, ಅಮಾಯಕ  ಕಾರ್ಯಕರ್ತರನ್ನು ಬಂಧಿಸಿ ಏಕೆ ಬಲಿ ಕೊಟ್ಟಿರಿ? ಕೇಂದ್ರ ಸಚಿವ ಹಾಗೂ ಬಾಬುರಾವ್ ಚಿಂಚನಸೂರ್ ಅವರೂ ಇದಕ್ಕೆ ಹೊಣೆಗಾರರು, ಅವರ ಮೇಲೆ ಪ್ರಕರಣ ದಾಖಲಿಸಲು ಯಾವ ಶಕ್ತಿ ನಿಮ್ಮನ್ನು ತಡೆದಿದೆ? ಪೊಲೀಸ್ ಇಲಾಖೆಯನ್ನ ಬಿಜೆಪಿಯವರನ್ನು ರಕ್ಷಿಸಲು ಇರುವ ಕೀಲಿಗೊಂಬೆಯಂತೆ ಬಳಸಲಾಗುತ್ತಿದೆ  ಎಂದು ತೀವ್ರ ಕಿಡಿಕಾರಿದೆ.

ಅಂತೆಯೇ 'ಗುಂಡು ಹಾರಿಸುವುದು ವಾಡಿಕೆ ಎಂದು ಅಪರಾಧವೊಂದನ್ನ ಸಮರ್ಥಿಸಿಕೊಂಡ ಗೃಹಸಚಿವರೇ, ನಿಮ್ಮ ಮಾತಿನ ಪ್ರೇರಣೆಯಿಂದ 'ವಾಡಿಕೆ' ಎಂಬ ಹೆಸರಲ್ಲಿ ಜನತೆ ಕಂಡಕಂಡಲ್ಲಿ ಗುಂಡು ಹಾರಿಸಲು ಶುರು ಮಾಡಿದರೆ ನಿಮ್ಮ ಇಲಾಖೆ ಸುಮ್ಮನಿರುವುದೇ? ಗನ್ನು, ಬಾಂಬುಗಳೆಲ್ಲ ತಾಲಿಬಾನ್ ಮನಸ್ಥಿಃತಿಯ  RSS, ಬಿಜೆಪಿಗೆ 'ವಾಡಿಕೆ' ಇರಬಹುದು. ಗುಂಡು ಹಾರಿಸಿದ ಪ್ರಕರಣ ಬಗ್ಗೆ 'ಗುಂಡು ಹಾರಿಸುವುದು ವಾಡಿಕೆ' ಎಂಬ ಗೃಹಸಚಿವರ ಲಜ್ಜೆಗೆಟ್ಟ ಸಮರ್ಥನೆ ನೋಡಿದರೆ ಮುಂದಿನ ದಿನದಲ್ಲಿ ಇವರ ಕೈಯ್ಯಲ್ಲಿ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿಯುವುದು ನಿಶ್ಚಿತ. ತಾಲಿಬಾನಿಗಳು ಇವರ ಆದರ್ಶವಾದ್ದರಿಂದ ಗುಂಡು ಹಾರಿಸುವುದು, ಬಾಂಬ್ ಹಾಕುವುದು RSS ಹಾಗೂ #ತಾಲಿಬಾನಿಬಿಜೆಪಿ ಗೆ 'ವಾಡಿಕೆ' ಇರಬಹುದು! ಎಂದು ಟ್ವೀಟ್ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT