ರಾಜಕೀಯ

ಪೂರ್ಣ ಅಧಿಕಾರ ದೊರಕಿದರೆ ರಾಜ್ಯದ ಜ್ವಲಂತ ಸಮಸ್ಯೆ ನಿವಾರಣೆ: ಕುಮಾರಸ್ವಾಮಿ

Lingaraj Badiger

ನೆಲಮಂಗಲ: ರಾಷ್ಟ್ರಿಯ ಪಕ್ಷಗಳ ಹಂಗಿಲ್ಲದಂತೆ ಜನತೆ ಜೆಡಿಎಸ್ ಗೆ ಪೂರ್ಣ ಬಹುಮತದ ಅಧಿಕಾರ ದೊರಕಿದರೆ ಕರ್ನಾಟಕವನ್ನು ದೇಶದಲ್ಲೇ ಮಾದರಿ ರಾಜ್ಯ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.

ಕೆಂಗಲ್ ಗ್ರಾಮದಲ್ಲಿ ನಡೆದ ಶ್ರೀ ಲಕ್ಷ್ಮಿವೆಂಕಟೇಶ್ವರಸ್ವಾಮಿ ಮತ್ತು ಶ್ರೀ ಕೃಷ್ಣ-ರುಕ್ಮಿಣಿಯ ಜೀರ್ಣೋದ್ಧಾರಗೊಂಡ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಜ್ವಲಂತ ಸಮಸ್ಯೆ ನಿವಾರಣೆಯಾಗಬೇಕಾದರೆ ಪಕ್ಷಕ್ಕೆ ಪೂರ್ಣ ಅಧಿಕಾರ ಸಿಗಬೇಕು ಎಂದರು.

ರಾಜ್ಯದ ಆರೂವರೆ ಕೋಟಿ ಜನರು ಮತ್ತೊಮ್ಮೆ ಆಶೀರ್ವಾದ ಮಾಡಬೇಕು. ನಾನು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ, ಆದರೆ ಅಧಿಕಾರದಲ್ಲಿದ್ದಾಗ ಜನರಿಗೆ ಮೋಸ ಮಾಡಿಲ್ಲ, ದ್ರೋಹ ಬಗೆದಿಲ್ಲ. ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಮೈತ್ರಿ ಸರ್ಕಾರದ ಮುಖಂಡರು ಇಲ್ಲ-ಸಲ್ಲದ ಕಿರುಕುಳ ನೀಡಿದರು ಎಂದು ಮನಸ್ಸಿನ ದುಗುಡ ಹೊರ ಹಾಕಿದರು.

ಸಾಲ ಮನ್ನಾದಿಂದ ರೈತರ ಕಷ್ಟಗಳಿಗೆ ಶಾಶ್ವತ ಪರಿಹಾರ ದೊರಕದು. ರೈತರು  ಸಾಲಗಾರನಾಗದಂತೆಯೇ ಮಾಡಬೇಕಿದೆ. ತಮ್ಮ ಸರ್ಕಾರದ ಹಲವು ಯೋಜನೆಗಳನ್ನು ಈಗಿನ ಸರ್ಕಾರ ಸ್ಥಗಿತಗೊಳಿಸಿದ್ದರಿಂದ ಜನತೆ, ರೈತರು ಮತ್ತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಎಂದರು.

ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ದೇವಾಲಯಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಮನುಷ್ಯನ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು.

SCROLL FOR NEXT