ರಾಜಕೀಯ

ಶಿಕ್ಷಿತ ಯುವಜನರೇ ಜಾತಿವಾದ, ಕೋಮುವಾದದ ಪೋಷಕರಾಗಿ ದೇಶವನ್ನು ಅಪಾಯಕ್ಕೆ ದೂಡುತ್ತಿರುವುದು ಆತಂಕಕಾರಿ: ಸಿದ್ದರಾಮಯ್ಯ

Nagaraja AB

ಬೆಂಗಳೂರು: ಶಿಕ್ಷಿತ ಯುವಜನರೇ ಜಾತಿವಾದ, ಕೋಮುವಾದದ ಪೋಷಕರಾಗಿ ದೇಶವನ್ನು ಅಪಾಯಕ್ಕೆ ದೂಡುತ್ತಿರುವುದು ಆತಂಕಕಾರಿಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಶಿಕ್ಷಿತರು ಹೆಚ್ಚಾದಷ್ಟು ಪ್ರಜಾಪ್ರಭುತ್ವ ಗಟ್ಟಿಯಾಗಬೇಕಿತ್ತು. ಆದರೆ, ಶಿಕ್ಷಿತ ಯುವಜನರೇ ಇಂದು ಜಾತಿವಾದ, ಮತ್ತು ಕೋಮುವಾದದ ಪೋಷಕರಾಗಿದ್ದು, ವಿದ್ಯಾರ್ಥಿ ಯುವ ಜನರನ್ನು ಜಾಗೃತಗೊಳಿಸುವ ಹೊಣೆಗಾರಿಕೆ ವಿದ್ಯಾರ್ಥಿ ಕಾಂಗ್ರೆಸ್ ಮೇಲಿದೆ ಎಂದಿದ್ದಾರೆ.

ಅಂಬೇಡ್ಕರ್  ಬರೆದಿರುವ ಸಂವಿಧಾನವನ್ನು ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ ಸೇರಿದಂತೆ ಎಲ್ಲಾ ಕಾಂಗ್ರೆಸ್ ನಾಯಕರು ಒಪ್ಪಿಕೊಂಡರು. ಸಮಾನತೆ, ಭ್ರಾತೃತ್ವ ಮತ್ತು ಜಾತ್ಯತೀತೆಯ ಶುತ್ರಗಳಾದ ಬಿಜೆಪಿ ಸಂವಿಧಾನವನ್ನು ವಿರೋಧಿಸುತ್ತಿದ್ದಾರೆ. ಈ ಹುನ್ನಾರಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.

SCROLL FOR NEXT