ರಾಜಕೀಯ

ಮೇಕೆದಾಟು ಯಾತ್ರೆ ರೈತ ಪ್ರತಿಭಟನೆಯಂತಿರಬೇಕು: ಡಿಕೆ ಶಿವಕುಮಾರ್

Manjula VN

ತುಮಕೂರು: ಕಾವೇರಿ ನದಿಯ ಮೇಕೆದಾಟು ಜಲಾಶಯ ಯೋಜನೆ ಅನುಷ್ಠಾನಕ್ಕಾಗಿ ಪಾದಯಾತ್ರೆ ನಡೆಸುತ್ತಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, 2023ರ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಒಗ್ಗಟ್ಟಿನಿಂದ ಹೋರಾಟ ನಡೆಸುವಂತೆ ಪಕ್ಷದ ಕಾರ್ಯಕರ್ತರಿಗೆ ಭಾನುವಾರ ಕರೆ ನೀಡಿದ್ದಾರೆ.

ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರ ಪ್ರತಿಭಟನೆ ತೀವ್ರವಾಗಿದ್ದ ಪರಿಣಾಮ ಕೇಂದ್ರ ಸರ್ಕಾರವು ಒತ್ತಡಕ್ಕೆ ಮಣಿದು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಪಡಿಸಿತ್ತು.ಎನ್‌ಡಿಎ 400 ಸಂಸದರನ್ನು ಹೊಂದಿದೆ, ಆದರೆ ರೈತರ ಹೋರಾಟವು ಸರ್ಕಾರಕ್ಕಿಂತ ಹೆಚ್ಚು ಶಕ್ತಿಶಾಲಿ ಎಂಬುದನ್ನು ಸಾಬೀತುಪಡಿಸಿತ್ತು. ಮೇಕೆದಾಟು ಹೋರಾಟವೂ ದೆಹಲಿ ಗಡಿಯಲ್ಲಿ ನಡೆದ ರೈತರ ಪ್ರತಿಭಟನೆಯಂತೆಯೇ ಇರುತ್ತದೆ ಎಂದು ಹೇಳಿದ್ದಾರೆ.

ಬಳಿಕ ಇತ್ತೀಚೆಗಷ್ಟೇ ನಡೆದ ಎಂಎಲ್‌ಸಿ ಚುನಾವಣೆ ಕುರಿತು ಮಾತನಾಡಿದ ಅವರು, ಕರ್ನಾಟಕದ ಜನತೆ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಕಾಂಗ್ರೆಸ್ ರಾಜ್ಯ ಮತ್ತು ದೇಶವನ್ನು ರಕ್ಷಿಸುವ ಏಕೈಕ ಪಕ್ಷವಾಗಿದೆ. ನಾವು 2023 ರಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಮತ್ತು ಕಾಂಗ್ರೆಸ್ ಕಾರ್ಯಕರ್ತರನ್ನು ಮಂಡಳಿಗಳು ಮತ್ತು ನಿಗಮಗಳಿಗೆ ನೇಮಕ ಮಾಡುತ್ತೇವೆ ಎಂದು ತಿಳಿಸಿದರು.

ಭಾನುವಾರ, ಶಿವಕುಮಾರ್ ಅವರು ಕೊಡಗಿನ ಕಾವೇರಿ ಜನ್ಮಸ್ಥಳವಾದ ತಲಕಾವೇರಿಯಿಂದ ಹಳೆ ಮೈಸೂರು ಭಾಗದವರೆಗೂ ಕಾಲ್ನಡಿಗೆ ಮೂಲಕ ಪ್ರವಾಸ ನಡೆಸಿದರು.

ಬಳಿಕ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮಿಯವರನ್ನು ಭೇಟಿ ಮಾಡಿದ ಅವರು, ‘ನಮ್ಮ ನೆಲ ನಮ್ಮ ಜಲ’ (ನಮ್ಮ ನೆಲ, ನಮ್ಮ ನೀರು) ಎಂಬ ಘೋಷಣೆಯೊಂದಿಗೆ ಪಕ್ಷದ ಮೇಕೆದಾಟು ಹೋರಾಟದ ಲಾಂಛನವನ್ನು ಬಿಡುಗಡೆ ಮಾಡಿದರು.

SCROLL FOR NEXT