ಮೊಹಮ್ಮದ್ ನಲಪಾಡ್ 
ರಾಜಕೀಯ

ಯುವ ಕಾಂಗ್ರೆಸ್ ಅಧ್ಯಕ್ಷತೆ ಕುರಿತು ಭಿನ್ನಮತ ಸ್ಫೋಟ: ಪಕ್ಷ ವಿಭಜನೆಯ ಬೆದರಿಕೆ

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಯ ಬಗ್ಗೆ ಕಾಂಗ್ರೆಸ್‌ನಲ್ಲಿನ ಒಳಜಗಳ ಬುಧವಾರ ಸ್ಫೋಟಗೊಂಡಿದೆ ಮತ್ತು ಪಕ್ಷವನ್ನು ಇಬ್ಬಾಗವಾಗಿಸುವ ಹಂತಕ್ಕೆ ತಲುಪಿದೆ.

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಯ ಬಗ್ಗೆ ಕಾಂಗ್ರೆಸ್‌ನಲ್ಲಿನ ಒಳಜಗಳ ಬುಧವಾರ ಸ್ಫೋಟಗೊಂಡಿದೆ ಮತ್ತು ಪಕ್ಷವನ್ನು ಇಬ್ಬಾಗವಾಗಿಸುವ ಹಂತಕ್ಕೆ ತಲುಪಿದೆ. ಜನವರಿ 12 ರಂದು ನಡೆದ ಯುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆರಕ್ಷಾ ರಾಮಯ್ಯ ಮತ್ತು ಮೊಹಮ್ಮದ್ ನಲಪಾಡ್ ನೇತೃತ್ವದ ಎರಡು ಬಣಗಳ ನಡುವೆ ಭಿನ್ನಮತ ಹುಟ್ಟಿಸಲು ಕಾರಣವಾಗಿದೆ.

ಚುನಾವಣೆಯಲ್ಲಿ ನಲಪಾಡ್ ಸ್ಪಷ್ಟ ವಿಜೇತರೆಂದು ಹೇಳಿದೆಯಾದರೂ ಅಚ್ಚರಿ ಎಂಬಂತೆ ಪಕ್ಷವು ರಕ್ಷಾ ರಾಮಯ್ಯ ಅವರನ್ನು ವಿಜೇತರೆಂದು ಘೋಷಿಸಿತು. ಚುನಾವಣೆಯ ನಂತರ, ಕಾಂಗ್ರೆಸ್ ಚುನಾವಣಾ ಸಮಿತಿಯು ನಲಪಾಡ್ ಪರ ಮತದಾನ ಮಾಡಿದ 47,000 ಮತಗಳನ್ನು ಅನರ್ಹಗೊಳಿಸಿ, ಅವುಗಳನ್ನು "ಕಾನೂನುಬಾಹಿರ" ಎಂದು ಕರೆದಿದೆ.

ನಲಪಾಡ್ ಬೆಂಬಲಿಗರು ಈ ಹಿಂದೆ ಕೆಫೆಯೊಂದರಲ್ಲಿ ಹಲ್ಲೆ ನಡೆಸಿದ ಪರಿಣಾಮ ಅವರ ವಿರುದ್ಧ ಕ್ರಿಮಿನಲ್ ಹಲ್ಲೆ ಪ್ರಕರಣ ದಾಖಲಾಗಿದೆ. ಅವರು ಅವರನ್ನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಅನರ್ಹರೆಂದು ಕರೆಯಲು ಇದುವೇ ಕಾರಣವೆಂದು ನಲಪಾಡ್ ಅನ್ನು ಅನರ್ಹಗೊಳಿಸಿದ ಗುಂಪು ಸಮರ್ಥನೆ ಮಾಡಿಕೊಂಡಿದೆ. ಈ ವಿಷಯವನ್ನು ಕಾಂಗ್ರೆಸ್ ರಾಜ್ಯ ನಾಯಕತ್ವವು ಗಮನಿಸಿದೆ, ಮತ್ತು ರಕ್ಷಾ ಅಥವಾ ನಲಪಾಡ್ ಅವರೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲು ಆರಂಭದಲ್ಲಿ ಹಿಂಜರಿದ ಅನೇಕ ನಾಯಕರು ಇಬ್ಬರಿಗೂ ಬೆಂಬಲ ನೀಡಲು ಪ್ರಾರಂಭಿದ್ದಾರೆ. ಹಲವಾರು ತಿಂಗಳುಗಳಿಂದ ತಟಸ್ಥವಾಗಿರಲು ಪ್ರಯತ್ನಿಸಿದ್ದ ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಈ ಬಗ್ಗೆ ಇದೀಗ ಮಾತನಾಡಲು ತೊಡಗಿದ್ದಾರೆ. 

ಕಾಂಗ್ರೆಸ್ ಮುಖಂಡ ಎಂ ಆರ್ ಸೀತಾರಂ ಅವರ ಪುತ್ರ ರಕ್ಷಾ ರಾಮಯ್ಯ ಮತ್ತು ಶಾಸಕ ಎನ್ ಎ ಹಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಅವರು ಸಮಾನ ಅವಧಿಗೆ  ಅಧಿಕಾರವನ್ನು ಹಂಚಿಕೊಳ್ಳಬೇಕೆಂದು ಸೂಚಿಸಿದ ನಂತರ ಪಕ್ಷದಲ್ಲಿ ತೀವ್ರ ಚರ್ಚೆ ಹುಟ್ಟಿಕೊಂಡಿದೆ. 2021 ರ ಡಿಸೆಂಬರ್ ವರೆಗೆ ರಾಮಯ್ಯ ಅಧ್ಯಕ್ಷರಾಗಿ ಉಳಿಯುತ್ತಾರೆ, ನಂತರ ನಲಪಾಡ್ ಅಧಿಕಾರ ವಹಿಸಿಕೊಳ್ಳುತ್ತಾರೆ ಮತ್ತು ರಾಮಯ್ಯ ಅವರನ್ನು ದೆಹಲಿಯ ಭಾರತೀಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಮಾಡಲಾಗುವುದುಎಂದು ನಿರ್ಧರಿಸಿದ್ದಾರೆ.

ಇಬ್ಬರು ಯುವ ಮುಖಂಡರ ಬೆಂಬಲಿಗರು ಈ ವಿಷಯವನ್ನು ಚರ್ಚಿಸಿದ್ದು  ಇದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಕೆ.ಸಿ.ವೇಣುಗೋಪಾಲ್ ಮತ್ತು ಪ್ರಧಾನ ಕಾರ್ಯದರ್ಶಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರ ಕಿವಿಗೆ ತಲುಪಿದೆ. ಅವರು ಅದನ್ನು ಕಾಂಗ್ರೆಸ್ ಹೈಕಮಾಂಡ್ ಜತೆಗೆ ಚರ್ಚಿಸಲು ನಿರ್ಧರಿಸಿದರು. ಹೈಕಮಾಂಡ್ ಮಧ್ಯಪ್ರವೇಶಿಸಿ ಇಡೀ ಪರಿಸ್ಥಿತಿಯ ತೀವ್ರತೆಯನ್ನು ಗಮನಿಸಿದರೆ, ಎರಡೂ ಸ್ಥಾನಗಳಿಗೆ ಬೇರೆಯವರನ್ನು ಕೂರಿಸುವುದು ಮತ್ತು ಈ ಇಬ್ಬರಿಗೆ ತರ ಜವಾಬ್ದಾರಿಗಳನ್ನು ನೀಡುವುದು ಉತ್ತಮ ಎಂದು ಹೇಳಿದೆ.

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವು ಅತಿ ಹೆಚ್ಚು ಮತ ಗಳಿಸಿದ ಮೂರನೆಯ ಅಭ್ಯರ್ಥಿಯ ಪಾಲಾಗಬಹುದು. ಮತ್ತದು ಹಾಗಾದಲ್ಲಿ ಎನ್‌ಎಸ್‌ಯುಐ ಅಧ್ಯಕ್ಷರಾಗಿದ್ದ ಎಚ್.ಎಸ್.ಮಂಜುನಾಥ್ ಅವರು ಯುವ ಕಾಂಗ್ರೆಸ್ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ಮಂಜುನಾಥ್ ಗಣನೀಯವಾಗಿ ಕಡಿಮೆ ಮತ ಗಳಿಸಿದ್ದರು. ಆದರೆ ಈಗ ರಾಜ್ಯ ಯುವ ಕಾಂಗ್ರೆಸ್ ನೇತೃತ್ವ ವಹಿಸುವ ಅವಕಾಶ ಲಭಿಸಲಿದೆ. ನಲಪಾಡ್ ಗೆ ಸಹ ಯುವ ಕಾಂಗ್ರೆಸ್ ವಿಭಾಗದಲ್ಲಿ ಸೂಕ್ತ ಸ್ಥಾನ ಸಿಕ್ಕಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT