ರಾಜಕೀಯ

ಮೇಕೆದಾಟು ಯೋಜನೆಗೆ ತಮಿಳುನಾಡಿನ ಒಪ್ಪಿಗೆ ಏಕೆ ಬೇಕು?: ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ಪ್ರಶ್ನೆ

Raghavendra Adiga

ಬೆಂಗಳೂರು: "ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೆ ಮೇಕೆದಾಟು  ಯೋಜನೆ ಕುರಿತು ಬರೆದಿರುವ ಪತ್ರ ತಪ್ಪಾದ ಕ್ರಮ, ನಮ್ಮ (ಕಾಂಗ್ರೆಸ್) ಸರ್ಕಾರ ಅಧಿಕಾರದಲ್ಲಿದ್ದಾಗ ನಾವು ಎಂದಿಗೂ ತಮಿಳುನಾಡಿನಿಂದ ಅನುಮತಿ ಕೋರಿಲ್ಲ” ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಹೇಳಿದ್ದಾರೆ. ಬಸವನಗುಡಿಯಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

“ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ನಾವು ನಮ್ಮ ಕೆಲಸಕ್ಕೆ ಮುಂದಾಗಬೇಕು. ನಮ್ಮ ಸರ್ಕಾರವು ಪಕ್ವತೆಯ ಕೊರತೆಯಿಂದ ಪಕ್ಕದ ರಾಜ್ಯದಿಂದ ಅನುಮತಿ ಕೋರಿ ಪತ್ರ ಬರೆದಿದೆ. ಇದು  ಸ್ವೀಕಾರಾರ್ಹವಲ್ಲ. ಕರ್ನಾಟಕವು ಮೇಕೆದಾಟು ಅಣೆಕಟ್ಟು ನಿರ್ಮಿಸಿದರೆ ತಮಿಳುನಾಡು ನೀರಿನ ಕೊರತೆಯನ್ನು ಎದುರಿಸುವುದಿಲ್ಲ” ಸಿದ್ದರಾಮಯ್ಯ ನುಡಿದರು.

"ನಮ್ಮಲ್ಲಿ 25 ಸಂಸದರು ಮತ್ತು ಸಿಎಂ ಕೂಡ ಇದ್ದಾರೆ, ಆದರೆ ಅವರು ನಮ್ಮ ಹಣವನ್ನು ಕೇಂದ್ರದಿಂದ ಕೇಳಲು ಹೆದರುತ್ತಾರೆ. ನಾನು ಸಿಎಂ ಆಗಿದ್ದರೆ, ಕೇಂದ್ರದಿಂದ ಬರಬೇಕಿದ್ದ  5,495 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಚೇರಿಯ ಹೊರಗೆ ಧರಣಿ ಕುಳಿತಿರುತ್ತಿದ್ದೆ, ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಕಂಡು ಹೆದರಿದ್ದಾರೆ.. ನಮಗೆ ಅಂತಹ ಸರ್ಕಾರ ಬೇಕೇ?’’ ಎಂದು ಕೇಳಿದರು.

ಈ ನಡುವೆ ಸಿದ್ದರಾಮಯ್ಯ, “ಹಮರಾ ಗಾಲಿ ಮೇ ಶೇರ್…" ಎಂದದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಮಾತನಾಡಿದ ಎಂಎಲ್ಸಿ ಯುಬಿ ವೆಂಕಟೇಶ್, “ಹಮರಾ ಗಾಲಿ ಮೇ ಶೇರ್… ಎಂದು  ಖಂಡಿತವಾಗಿಯೂ ನಮ್ಮ ಸಂಸದರು ಮತ್ತು ಸಿಎಂ ಅವರನ್ನು ಉಲ್ಲೇಖಿಸಿ ಹೇಳಿಲ್ಲ. ಇದಲ್ಲದೆ, ಸಿದ್ದರಾಮಯ್ಯ ಅವರು ಕೇಂದ್ರದಿಂದ ರಾಜ್ಯಕ್ಕೆ ಸಿಕ್ಕಬೇಕಾಗಿರುವ 5,495 ಕೋಟಿ ರೂ ಕೇಳಲು ಒತ್ತಾಯಿಸಿದ್ದಾರೆ" ಎಂದು ಸಮಸ್ಯೆಯನ್ನು ನಿವಾರಿಸಲು ಯತ್ನಿಸಿದರು.

SCROLL FOR NEXT