ರಾಜಕೀಯ

ವಿಧಾನಸೌಧಕ್ಕೆ ಅಗೌರವ ತೋರಿರುವ ಕಾಂಗ್ರೆಸಿಗರು ಕಾರ್ಯಕರ್ತರಿಗೆ ಗೌರವ ಕೊಡ್ತಾರಾ: ನಳಿನ್ ಕುಮಾರ್ ಕಟೀಲ್

Manjula VN

ಮಂಗಳೂರು: ದೇವಾಲಯದ ಪ್ರತೀಕದಂತಿರುವ ವಿಧಾನಸೌಧಕ್ಕೆ ಅಗೌರವ ತೋರಿರುವ ಕಾಂಗ್ರೆಸಿಗರು, ಕಾರ್ಯಕರ್ತರಿಗೆ ಗೌರವ ಕೊಡುತ್ತಾರಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಭಾನುವಾರ ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಅವರು ಕಾರ್ಯಕರ್ತರೊಬ್ಬರಿಗೆ ಕಪಾಳಮೋಕ್ಷ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ರಾಜಕಾರಣಿಗಳು ಯಾರೇ ಆಗಲಿ ಎಲ್ಲೆ ಮೀರಿ ವರ್ತಿಸಬಾರದು. ಇದು ಸರಿಯಾದ ನಡತೆಯಲ್ಲ. ಕಾಂಗ್ರೆಸಿಗರ ಸಂಸ್ಕೃತಿಯನ್ನು ಇದು ಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಕಾಂಗ್ರೆಸಿಗರು ಹಲ್ಲೆ ಮಾಡಿರೋದು ಇದು ಮೊದಲೇನಲ್ಲ. ವಿಧಾನಸೌಧಕ್ಕೆ ಸಿದ್ದರಾಮಯ್ಯ ಹೇಗೆ ಪ್ರವೇಶಿಸಿದ್ದಾರೆಂದು ಎಲ್ಲರಿಗೆ ಗೊತ್ತಿದೆ. ಕೈಚಾಚಿ, ಯುದ್ಧಕ್ಕೆ ಕರೆದು, ತೊಡೆತಟ್ಟಿ ಒಳಹೊಕ್ಕಿದ್ದಾರೆ‌ ಎಂದು ಟೀಕಿಸಿದ್ದಾರೆ.

ಕಾಂಗ್ರೆಸಿಗರ ವ್ಯಕ್ತಿತ್ವದಲ್ಲಿಯೇ ರೌಡಿತನ ಕಾಣಿಸುತ್ತದೆ. ಅವರ ಇತಿಹಾಸ ತೆಗೆದು ನೋಡಿದರೆ, ರೌಡಿ ಮಾತ್ರವಲ್ಲ ಈ ದೇಶದಲ್ಲಿ ಎಲ್ಲಾ ಕೆಟ್ಟಚಾಳಿಗಳಿಗೆ ಪ್ರೇರಣೆ ಅವರೇ. ರಾಜಕೀಯ ಕ್ಷೇತ್ರದಲ್ಲಿರುವ ನಾನು ವೈಯುಕ್ತಿಕವಾಗಿ ಮಾತನಾಡುವುದಿಲ್ಲ. ಸಮಾಜ, ಜನರು ನಮ್ಮನ್ನು ಗಮನಿಸುತ್ತಾರೆ. ಸಹಜವಾಗಿ ಕಾರ್ಯಕರ್ತರು, ಜನರು ಬೇಡಿಕೆ, ಅಪೇಕ್ಷೆ ಮತ್ತು ಇಚ್ಛೆಯಿಂದ ಬರುತ್ತಿರುತ್ತಾರೆ. ಬಂದಾಗ ಗೌರವಯುತವಾಗಿ ನಡೆಸಿಕೊಳ್ಳಬೇಕಾಗಿರುವುದು ಸಂಸ್ಕೃತಿ ಎಂದು ತಿಳಿಸಿದ್ದಾರೆ.

SCROLL FOR NEXT