ಸಂಗ್ರಹ ಚಿತ್ರ 
ರಾಜಕೀಯ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜ್ಯದ ಪ್ರಮುಖ ಪಕ್ಷಗಳು ಸಜ್ಜು!

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳ ಬಗ್ಗೆ ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲವಾದರೂ, ಪ್ರಮುಖ ಪಕ್ಷಗಳು ಶ್ರದ್ಧೆಯಿಂದ ಸಿದ್ಧತೆಗಳನ್ನು ಪ್ರಾರಂಭಿಸಿವೆ.

ಬೆಂಗಳೂರು: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳ ಬಗ್ಗೆ ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲವಾದರೂ, ಪ್ರಮುಖ ಪಕ್ಷಗಳು ಶ್ರದ್ಧೆಯಿಂದ ಸಿದ್ಧತೆಗಳನ್ನು ಪ್ರಾರಂಭಿಸಿವೆ.ನಮ್ಮ ನಾಯಕರು ಜುಲೈ 15 ರಿಂದ ಜಿಲ್ಲೆಗಳು ಮತ್ತು ತಾಲ್ಲೂಕುಗಳಲ್ಲಿ 10 ದಿನಗಳಲ್ಲಿ ಸಭೆಗಳನ್ನು ಪ್ರಾರಂಭಿಸುತ್ತಾರೆ. ರಾಜ್ಯದ ದಕ್ಷಿಣ ಭಾಗಗಳಲ್ಲಿನ ಅನೇಕ ವಿಧಾನಸಭೆ ವಿಭಾಗಗಳಲ್ಲಿ ಮತ್ತು ರಾಯಚೂರಿನಂತಹ ಸ್ಥಳಗಳಲ್ಲಿ ಕೆಲವು ವಿಧಾನಸಭೆ ವಿಭಾಗಗಳಲ್ಲಿ, ವಿಜಯಪುರದ ಕೆಲವು ಭಾಗಗಳಲ್ಲಿ  ಬೀದರ್‌ನಲ್ಲಿ ನಾವು ಬಲವಾಗಿದ್ದೇವೆ’’ಎಂದು ಮಾಜಿ ಸಿಎಂ ಮತ್ತು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ  ಟಿಎನ್‌ಐಇಗೆ ತಿಳಿಸಿದರು. 

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ, ಪಕ್ಷವು ಮೊದಲ ಸುತ್ತಿನ ಸಭೆಗಳಲ್ಲಿ ನಗರದ 14 ವಿಧಾನಸಭೆ ವಿಭಾಗಗಳಲ್ಲಿ ವಾರ್ಡ್ ವಾರು ಸಿದ್ಧತೆಯನ್ನು ಕೈಗೊಳ್ಳಲು ಯೋಜಿಸಿದೆ ಮತ್ತು ಉಳಿದ 14 ಕ್ಷೇತ್ರಗಳನ್ನು ಎರಡನೇ ಸುತ್ತಿನ ಸಭೆಗಳಲ್ಲಿ ನಿರ್ಧರಿಸುತ್ತದೆ. ಪಕ್ಷದ ರಾಜ್ಯಾಧ್ಯಕ್ಷ ಎಚ್ ಕೆ ಕುಮಾರಸ್ವಾಮಿ ಟಿಎನ್‌ಐಇಗೆ, “ನಾವು ಜುಲೈ 15 ರಿಂದ ತಾಲ್ಲೂಲು, ಜಿಲ್ಲಾ ಹಾಗೂ ಬೆಂಗಳೂರು ಪಾಲಿಕೆ ಚುನಾವಣೆ ಬಗ್ಗೆ ತೀರ್ಮಾನಿಸಲಿದ್ದೇವೆ" ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಈ ಬಗ್ಗೆ ಹೆಚ್ಚು ಹೇಳಿಕೊಂಡಿಲ್ಲ.. “ನಾವು ಅದರ ಬಗ್ಗೆ ಕೆಲಸ ಮಾಡುತ್ತಿದ್ದೇವೆ’’ ಎಂದು ಅವರು ಹೇಳಿದರು. ಆದರೆ, ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಸಲೀಮ್ ಅಹ್ಮದ್, “ಅಧಿಕಾರಿಗಳು ಅವುಗಳನ್ನು ಗಮನಿಸಲು ನಿರ್ಧರಿಸಿದಾಗಲೆಲ್ಲಾ ನಾವು ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು  ಮತ್ತು ಬಿಬಿಎಂಪಿ ಚುನಾವಣೆಗೆ ಸಿದ್ಧರಿದ್ದೇವೆ. ರಾಜ್ ಕುಮಾರ್, ಶೇಖರ್ ಮತ್ತು ಕೃಷ್ಣಪ್ಪ ಮತ್ತು ಉಳಿದ ತಂಡಗಳನ್ನು ಒಳಗೊಂಡ ಕಾಂಗ್ರೆಸ್ ರಾಜ್ಯ ಮತ್ತು ನಗರ ಘಟಕಗಳು ಮುಂದಿನ ದಿನಗಳಲ್ಲಿ ಬಿಬಿಎಂಪಿ ಚುನಾವಣೆಯ ವಿವರಗಳನ್ನು ಚರ್ಚಿಸಲು ಸಭೆ ನಡೆಸುವ ನಿರೀಕ್ಷೆಯಿದೆ” ಎಂದಿದ್ದಾರೆ.

ಕಾಂಗ್ರೆಸ್ ನಾಯಕರು, ಪಕ್ಷದ ಸಭೆಗಳಲ್ಲಿ, ಬಿಜೆಪಿ ಚುನಾವಣೆ ನಡೆಸಲು ಹಿಂಜರಿಯುತ್ತಿದೆ ಎಂದು ಆರೋಪಿಸಿದೆ.ಸರ್ಕಾರವು ಚುನಾವಣೆಯನ್ನು ವಿಳಂಬಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. 

ಆಡಳಿತಾರೂಢ  ಬಿಕೆಪಿ ತಾಲ್ಲೂಕು , ಜಿಲ್ಲಾ ಪಂಚಾಯತ್, ಬಿಬಿಎಂಪಿಚುನಾವಣೆಗಳ ಬಗ್ಗೆ ಒಂದು ಪ್ರಾಥಮಿಕ ಸಭೆ ನಡೆಸಿದೆ. ಜುಲೈ 15 ರ ನಂತರ ಪಕ್ಷವು ಹೆಚ್ಚು ಸಮಗ್ರ ಸಭೆ ನಡೆಸಲಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಎಂಎಲ್ ಸಿ ರವಿಕುಮಾರ್ ತಿಳಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಚಿವರಾದ ಆರ್.ಅಶೋಕ, ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮತ್ತು ಪದಾಧಿಕಾರಿ ಎಚ್.ಎಸ್ ಗೋಪಿನಾಥ್ ಸೇರಿ ಎಲ್ಲರೂ ಈ ನಿಟ್ಟಿನಲ್ಲಿ ಯೋಜಿಸಿದ್ದಾರೆ. ಎಲ್ಲಾ ಪಕ್ಷಗಳು ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತಿಸುವ ಸವಾಲನ್ನು ಎದುರಿಸುತ್ತಿದ್ದರೆ, ಜೆಡಿಎಸ್ ನಾಯಕರು ಈವರೆಗೆ 75 ಅಭ್ಯರ್ಥಿಗಳನ್ನು ಗುರುತಿಸಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಮತ್ತು ಬಿಜೆಪಿಯೂ ಸಹ ತಮ್ಮ ಅಭ್ಯರ್ಥಿಗಳ ಪಟ್ಟಿಗಳನ್ನು ಶೀಘ್ರದಲ್ಲೇ ಸಿದ್ಧಗೊಳಿಸಲು ಪ್ರಯತ್ನಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

1st ODI: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್, ಸಚಿನ್ ತೆಂಡೂಲ್ಕರ್, ಸಂಗಕ್ಕಾರ ದಾಖಲೆ ಮುರಿದ Virat Kohli

SCROLL FOR NEXT