ರಾಜಕೀಯ

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಿಶ್ಚಿತ: ನಳಿನ್ ಕುಮಾರ್ ಕಟೀಲ್ ಆಡಿಯೋ ವೈರಲ್

Manjula VN

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಕಾವೇರಿರುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರದ್ದೆನ್ನಲಾದ ತುಳು ಭಾಷೆಯಲ್ಲಿರುವ ಆಡಿಯೋ ಒಂದು ಭಾರೀ ವೈರಲ್ ಆಗಿದೆ.

ತುಳುವಿನಲ್ಲಿ ವ್ಯಕ್ತಿಯೊಬ್ಬರ ಜೊತೆ ಕಟೀಲ್ ಮಾತನಾಡಿದ್ದು, ಈ ಸಂಭಾಷಣೆಯಲ್ಲಿ ಸಿಎಂ ಯಡಿಯೂರಪ್ಪ ಬದಲಾವಣೆ ಆಗಲಿದ್ದಾರೆ ಎಂದು ಹೇಳಿರುವುದು ಕಂಡು ಬಂದಿದೆ.

ಮುಖ್ಯಮಂತ್ರಿ ಹುದ್ದೆಯಿಂದ ಬಿ.ಎಸ್.ಯಡಿಯೂರಪ್ಪ ಅವರು ಕೆಳಗಿಳಿಯುವುದು ನಿಶ್ಚಿತವಾಗಿದ್ದು, ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್.ಈಶ್ವರಪ್ಪ ತಂಡ ಸಂಪುಟದಿಂದ ಕಾಯಂ ಆಗಿ ಹೊರಬೀಳಲಿದೆ ಎಂದು ಕಟೀಲ್ ಹೇಳಿದ್ದಾರೆಂದು ತಿಳಿದುಬಂದಿದೆ. 

ನಳಿನ್ ಕುಮಾರ್ ಕುಮಾರ್ ಕಟೀಲ್ ಮಾತನಾಡಿದ್ದಾರೆನ್ನಲಾದ ಆಡಿಯೋದಲ್ಲಿ ತುಳು ಭಾಷೆಯಲ್ಲಿ ಮಾತನಾಡಿರುವ ಈ ಆಡಿಯೋದಲ್ಲಿ ’ಯಾರಲ್ಲಿಯೂ ಹೇಳಲಿಕ್ಕೆ ಹೋಗ್ಬೇಡಿ. ಈಶ್ವರಪ್ಪ, ಜಗದೀಶ್ ಶೆಟ್ಟರ್ ಟೀಮನ್ನು ತೆಗೆಯುತ್ತೇವೆ. ಹೊಸ ಟೀಮ್ ಮಾಡ್ತಾ ಇದ್ದೇವೆ. ಯಾರಲ್ಲೂ ಹೇಳ್ಬೇಡ. ಏನೂ ತೊಂದರೆ ಇಲ್ಲ. ಹೆದರಬೇಡ. ಇನ್ನು ಮುಂದೆ ಎಲ್ಲವೂ ನಮ್ಮ ಕೈಲಿದೆ. ಮೂರು ಜನರ ಹೆಸರು ಲಿಸ್ಟಲ್ಲಿದೆ. ಯಾರೂ ಆಗಬಹುದು. ಇಲ್ಲಿಯವರಿಗ್ಯಾರಿಗೂ ಕೊಡೋದಿಲ್ಲ. ಎಲ್ಲವೂ ಡೆಲ್ಲಿಯಿಂದಲೇ ಆಗುತ್ತದೆ ಎಂದು ಹೇಳಿರುವುದು ಕಂಡು ಬಂದಿದೆ. 

ಈ ಆಡಿಯೋ ರಾತ್ರೋರಾತ್ರಿ ವೈರಲ್ ಆಗಿದ್ದು. ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

SCROLL FOR NEXT